ಗುರು ಮತ್ತು ಶಿಷ್ಯರ ನಡುವಿನ ಸಂಬಂಧ


                         ಗುರು ಬ್ರಹ್ಮ ಗುರು ವಿಷ್ಣು 

                         ಗುರು ದೇವೋ ಮಹೇಶ್ವರ 

                         ಗುರು ಸಾಕ್ಷಾತ್ ಪರಬ್ರಹ್ಮ 

                         ತಸ್ಮೈ ಶ್ರೀ ಗುರುವೇ ನಮಃ 

        ಎಂದು ಶ್ಲೋಕ ಹೇಳುತ್ತಾ ಗುರು ಮತ್ತು ಶಿಷ್ಯರ ನಡುವಿನ ಇರುವ ಸಂಬಂಧದ ಬಗ್ಗೆ ನಾಲ್ಕು ಸಾಲುಗಳನ್ನು ಬರೆಯೋಣ. 

                    ತಾಯಿ ಜೀವ  ನೀಡಿದರೆ ಗುರು ಜೀವನವನ್ನೇ ನೀಡುತ್ತಾರೆ ಎಂಬ ಮಾತು ಸತ್ಯವಾದದ್ದು ಏಕೆಂದರೆ ನಾವೆಲ್ಲಾ ಗುರುಗಳನ್ನು ಪ್ರೀತಿಸೋಣ ಗೌರವಿಸೋಣ ಮತ್ತು ಅವರನ್ನು ಪೂಜಿಸೋಣ.

                ಒಂದು ಕಲ್ಲು ಸುಂದರವಾದ ಮೂರ್ತಿಯಾಗಿ  ಮಾಡಲು ಅದರ ಹಿಂದೆ ಒಬ್ಬ ಅತ್ಯುತ್ತಮ ಶಿಲ್ಪಿ ಇದ್ದೇ ಇರುತ್ತಾರೆ ಅದರಂತೆ ಒಬ್ಬ ವಿದ್ಯಾರ್ಥಿಯ ಸಾಧನೆಯ ಬೆನ್ ಹಿಂದೆ ಗುರು ಎಂಬ ಶಿಲ್ಪಿ ಇರುತ್ತಾರೆ.

                       ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದ ಕಡೆಗೆ ಕರೆದುಕೊಂಡು ಹೋಗುವರು.ಗುರು ಮತ್ತು ಶಿಷ್ಯನ ನಡುವಿನ ಸಂಬಂಧ ಅದ್ಭುತವಾದದ್ದು ಗುರು ಮತ್ತು ಶಿಷ್ಯನ ಸಂಬಂಧ ಪ್ರಾಮಾಣಿಕತೆ ಶಿಷ್ಯನ ಗೌರವ ಬದ್ಧತೆ ಭಕ್ತಿ ಮತ್ತು ವಿಧೇಯತೆ ಮೇಲೆ ಆಧಾರಿತವಾಗಿರುತ್ತದೆ .ಗುರು ತನ್ನ ಎಲ್ಲಾ ಜ್ಞಾನವನ್ನು ಶಿಷ್ಯನಿಗೆ ಹೇಳುತ್ತಾನೆ 

               ಪ್ರಾಚೀನ ಕಾಲದಲ್ಲಿ ಗುರುವಿನ ಮನೆಯಲ್ಲಿ ವಾಸವಾಗಿ ಗುರು ತಮ್ಮ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿರುವ ಅಕ್ಷರಗಳನ್ನು ಹೇಳುವುದಲ್ಲದೆ ಮತ್ತೆ ಪ್ರವಚನ ,ಸಂಗೀತ ,ಮತ್ತು ನೃತ್ಯ ಹಿರಿಯರಿಗೆ ಗೌರವ ಬೇರೆಯವರ ಜೊತೆ ಹೇಗೆ ನಡೆದು ಕೊಳ್ಳಬೇಕೆಂದು ಎಲ್ಲರ ಜೊತೆ ಯಾವ ರೀತಿ ವಿಧೇತೆಯತೆ ಇಂದ ಇರಬೇಕೆಂದು ತಿಳಿಸಿಕೊಡುತ್ತಿದ್ದರು.  ಹಲವಾರು ರೀತಿ ಸತ್ಯ ಸಂಗತಿಗಳ ಬಗ್ಗೆ ಹೇಳುತ್ತಿದ್ದರು ಆದರೆ ಈ ಯುಗದಲ್ಲಿ ಗುರು ಮತ್ತು ಶಿಷ್ಯರ ಸಂಬಂಧ ಅರ್ಧದಷ್ಟು ಕುಗ್ಗಿ ಹೋಗಿದೆ ಇನ್ನೂ ಸ್ವಲ್ಪ ಪ್ರಮಾಣದಷ್ಟು ಗುರು ಶಿಷ್ಯರ ನಡುವಿನ ಸಂಬಂಧ ಉಳಿದಿದೆ ಆಗ ಶಾಲಾ ಕಾಲೇಜು ಅಪರೂಪವಾಗಿದ್ದವು ಆದರೆ ಈಗ ಶಾಲಾ-ಕಾಲೇಜು ಬಹಳ ಬೆಳವಣಿಗೆ ಆಗಿದ್ದಾವೆ.

                    ಗುರು ಶಿಷ್ಯನ ಜೊತೆ ಮಕ್ಕಳಂತೆ ಇರುತ್ತಿದ್ದರು ಮಕ್ಕಳ ಜೊತೆ ಸೇರಿ ಗುರುಗಳು ಮಕ್ಕಳಂತೆ ಆಡುತ್ತಿದ್ದರು .ಹೀಗೆ ಗುರು ಮತ್ತು ಶಿಷ್ಯನ ಸಂಬಂಧ ಅದ್ಭುತವಾದದ್ದು ಗುರು ಶಿಷ್ಯನ ಕಷ್ಟದ ಜೊತೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು .ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ಮನಸ್ಥಿತಿಯಿಂದ ಸ್ವೀಕರಿಸಿ ತಿದ್ದಿ ಬುದ್ದಿ ಹೇಳಿ ಒಂದು ಸುಂದರ ಮೂರ್ತಿಯನ್ನಾಗಿಸುತ್ತಾರೆ .ಆ ಕೀರ್ತಿ ಗುರುಗಳಿಗೆ ಸಲ್ಲುತ್ತದೆ. 

                    ಮುಂದೆ ಗುರಿ ಇರಿಸಿಕೊಳ್ಳಿ ಹಿಂದೆ ಗುರು ಇದ್ದೇ ಇರುತ್ತಾರೆ ಅಂತ ಗುರು ವಿದ್ಯಾರ್ಥಿಯರಿಗೆ ಹೇಳುತ್ತಾ ಅತ್ಯಂತ ಶಕ್ತಿಶಾಲಿ ಆಯುಧ ಎಂದರೆ ಅದು ಶಿಕ್ಷಣ .ಶಿಕ್ಷಣದಿಂದ ಮಾತ್ರ ಸಾಧ್ಯ ಯಾರೂ ಕೂಡ ಕದೆಯುವ ಸಂಪತ್ತು ಅಲ್ಲ ಎಂದು ಗುರುಗಳು ಶಿಷ್ಯರಿಗೆ ಬುದ್ಧಿ ಹೇಳುತ್ತಾರೆ .ಮುಂದಿನ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ತೋರಿಸುತ್ತಾರೆ. 

                 ನಮ್ಮ ಗುರುಗಳಿಗೆ ನಾವುಗಳು ಮಾಡಿದ ಕಪಿಚೇಷ್ಟೆಗಳ ನಮ್ಮೆಲ್ಲ ಚೇಷ್ಟಗಳನ್ನು ಸಹಿಸಿಕೊಂಡು ಬುದ್ಧಿ ಹೇಳಿದ ಹಾಗೂ ನಮ್ಮನ್ನು ಸರಿದಾರಿಯಲ್ಲಿ ನಡೆಯುವಂತೆ ಪ್ರೇರೇಪಿತ್ತಾರೆ . ಗುರು ಮತ್ತು ಶಿಷ್ಯ ಎರಡು ಕಣ್ಣುಗಳಿದ್ದ ಹಾಗೆ ಒಬ್ಬನೇ ವ್ಯಕ್ತಿ ಶಿಷ್ಯನು ಆಗಬಲ್ಲ ಗುರು ಆಗಬಲ್ಲ ಒಂದು ಕಣ್ಣಿಗೆ ನೋವು ಆದರೂ ಗುರು ಶಿಷ್ಯರ ಸಂಬಂಧಕ್ಕೆ ಪೆಟ್ಟು ಬೀಳುವುದು ಇಬ್ಬರಲ್ಲೂ ಅನ್ನೋನ್ಯ ಸಂಬಂಧ ಇದ್ದಾಗ ಮಾತ್ರ ಅವರ ಬಾಂಧವ್ಯಕ್ಕೆ ಧಕ್ಕೆ ಆಗುವುದಿಲ್ಲ. 

            ಗುರು ಶಿಷ್ಯರ ಸಂಬಂಧ ತಾಯಿ ಮಗುವಿನ          ಸಂಬಂಧ .   ವಿದ್ಯಾರ್ಥಿಗಳಿಗೆ ಒಳ್ಳೆಯ ಜೀವನ  ಕೊಡುವುದು.ಗುರುವಿನ ಆದ್ಯತೆ ವಿದ್ಯಾರ್ಥಿಗಳ ಬದುಕಿನ ಸಾರ್ಥಕತೆಯ ಹಿಂದೆ ಗುರುವಿನ ಶ್ರಮವಿದೆ ಆದರೆ ಬದುಕು ಕಟ್ಟಿಕೊಂಡ ಮೇಲೆ ಅದನ್ನು ಒಳ್ಳೆಯದಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕು .ವಿದ್ಯಾರ್ಥಿಗಳು ಗುರುವಿನ ಶಾಲು ಹೂಹಾರ ಹಣ್ಣು ನೀಡುವುದಕ್ಕಿಂತ ತಮ್ಮ ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬಾಳುವುದೇ ದೊಡ್ಡ ಗೌರವ ಎನ್ನುತ್ತಾರೆ. ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ವರ್ಣಿಸಲಕ್ಕೆ ಆಗುವುದಿಲ್ಲ. ಅಷ್ಟು ಅನ್ನೋನ್ಯ ಸಂಬಂಧ ಗುರು ಶಿಷ್ಯರದ್ದು.


           ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ 

                       ಬಿಎ ವಿದ್ಯಾರ್ಥಿನಿ ಶ್ರೀದೇವಿ ಜಾವೋಜಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ನೋಡ ಬಾ ನಮ್ಮೂರ ಸಸ್ಯಲೋಕ "