ಈಗಿನ ಕಾಲದಲ್ಲಿ ಯಾರ ಕೈಯಲ್ಲಿಯೂ ಸಹ ಮೊಬೈಲ್ ಗಳು ಇಲ್ಲವೆಂದು ಹೇಳುವ ಹಾಗೆಯೇ ಇಲ್ಲ. ಪ್ರತಿಯೊಬ್ಬರ ಕೈಯಲ್ಲಿಯೂ ಸಾಮಾನ್ಯವಾಗಿ ಕ ಕಾಣಬಹುದಾದಂತ ಒಂದು ಸಾಧನವಾಗಿದೆ.ಮೊಬೈಲ್ ಗಳು ಇಲ್ಲದೆ ಹೋದರೆ ಬೆಳಗಿನ ಪ್ರಾರಂಭವೇ ಆಗುವುದಿಲ್ಲ ಎನ್ನುವ ಪರಿಸ್ಥಿತಿಯು ಸೃಷ್ಟಿಯಾಗಿದೆ. 

                                 ಮೊದಲು ಯಾರ ಹತ್ತಿರವೂ ಸಾಮಾನ್ಯವಾಗಿ ಮೊಬೈಲ್ ಫೋನ್ ಗಳು ಲಭ್ಯವಿರುತ್ತಿರಲಿಲ್ಲ. ಊರಿನಲ್ಲಿ ಒಂದು ಅಥವಾ ಎರಡು ಪೋನ್ ಗಳುಇದ್ದರೆ ಹೆಚ್ಚು. ಆ ಸಮಯದಲ್ಲಿ ಮಕ್ಕಳು ತಂದೆ- ತಾಯಿಗಳೊಡನೆ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಿದ್ದರು .ಅವರು ಶಾಲೆ, ಮನೆ ,ಆಟ ,ಪಾಠ ಇವುಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿದ್ದರು. ಶಾಲಾ ದಿನಗಳಲ್ಲಿ ಶಾಲೆಯಲ್ಲಿ ತಮ್ಮ ಸಹಪಾಠಿಗಳೊಡನೆ ಆಟ, ಮನೋರಂಜನೆ ,ಗುಂಪು ಆಟಗಳು, ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಊಟ ಮಾಡುವುದು. ಎಲ್ಲವೂ ಸೇರಿ ಒಂದು ದಿನ ಹೇಗೆ ಕಳಿಯಿತು ಎಂಬುದರ ಬಗೆಗೆ ಅರಿವೇ ಇಲ್ಲದ ರೀತಿಯಲ್ಲಿ ಶಾಲಾ ದಿನಗಳು ಮುಗಿದು ಹೋಗುತ್ತಿದ್ದವು. 

                                 ಶಾಲಾ ದಿನಗಳ ನಂತರ ಬರುತ್ತಿದ್ದಂತಹ ರಜ ದಿನಗಳು ಎಂದರೆ  ಮಕ್ಕಳಿಗೆ ಅತ್ಯಂತ ಪ್ರಿಯದಾಯಕವಾಗಿದ್ದವು. ಅಜ್ಜ- ಅಜ್ಜಿ ಮನೆಗೆ ಹೋಗುವುದೇ ಒಂದು ರೀತಿಯ ಮಜ. ಅಜ್ಜಿಯ ಮನೆಯ ಹೆಸರುಗದ್ದೆಯಲ್ಲಿ ಆಟವಾಡುವುದು, ಅಲ್ಲಿಯ ಗೆಳೆಯರೊಡನೆ ಊರೂರು ಸುತ್ತುವುದು, ಹೊಳೆಯಲ್ಲಿ ಈಜುವುದು, ಮೀನು ಹಿಡಿಯುವುದು ಇವೆಲ್ಲ ಎಷ್ಟು ಮಜವಾಗಿರುತ್ತಿತ್ತು. 

                                    ಆದರೆ ಈಗಿನ ಕಾಲದ ಮಕ್ಕಳಿಗೆ ಮೊಬೈಲ್ ಬಿಟ್ಟರೆ ಹೊರ ಜಗತ್ತಿನ ಅರಿವೇ ಇರುವುದಿಲ್ಲ. ಕೇವಲ ಅವರ ಸಮಯವನ್ನು ಮೊಬೈಲ್ ಗಳಿಗೆ ಸೀಮಿತವಾಗಿ ಇಟ್ಟುಕೊಂಡಿರುತ್ತಾರೆ. ತಮ್ಮ ತಮ್ಮ ತಂದೆ ತಾಯಿಗಳ ಜೊತೆಗೆ ಕೂತು ಒಂದಿಷ್ಟು ಮಾತನಾಡುವಷ್ಟು ಸಮಯವು  ಇರುವುದಿಲ್ಲ . ತಮ್ಮಶೋಕಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮದರ್ಸ್ ಡೇ, ಫಾದರ್ಸ್ ಡೇ ಎಂದು ಸ್ಟೇಟಸ್ ಹಾಕಿಕೊಳ್ಳುವ ಅವರು ದಿನವಿಡಿ ತಮ್ಮ ಕಣ್ಮುಂದೆ ಇರುವಂತಹ ತಂದೆ-ತಾಯಿಗೆ ಶುಭ ಕೋರಬೇಕು ಎನ್ನುವಷ್ಟು ಪರಿಜ್ಞಾನ ಅವರಿಗಿರುವುದಿಲ್ಲ. ಒಟ್ಟಿನಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ನಾವು ನಮ್ಮ ಸಂತೋಷದ ದಿನಗಳನ್ನು ಕಳೆದುಕೊಳ್ಳುತ್ತಿದ್ದೇವೆ. 


             ರಕ್ಷಿತಾ ಎಂ ಗೌಡ                                       

               ಎಂ ಎಂ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ನೋಡ ಬಾ ನಮ್ಮೂರ ಸಸ್ಯಲೋಕ "

ಡಮಾಮಿ