ಅಭಿನಂದನೀಯ ಸನಾತನ ಶೈಲಿ

ಕೋವಿಡ್-19 ಎಂಬ ಮಹಾಮಾರಿ ಸೋಂಕು ಕೆಲ ವರ್ಷಗಳ ಹಿಂದೆ  ಎಲ್ಲರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಕ್ಷಣ. ವ್ಯಾಪಕವಾಗಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ  ಭಾರತದ ಪ್ರಾಚೀನ ಜೀವನ ಶೈಲಿ ,ಆಯೂರ್ವೇದ ಸೇರಿದಂತೆ  ವೈದ್ಯಕೀಯ ಪದ್ದತಿಯು ಮುನ್ನಲೆಗೆ ಬಂದಿದೆ.    "ಓಲ್ಡ್ ಇಸ್ ಗೋಲ್ಡ್ "     ಎಂಬ ಮಾತು  ಸರಿ ಎಂಬ ಅಭಿಪ್ರಾಯಕ್ಕೆ ಜನ ತಲೆದೂಗುತ್ತಿದ್ದಾರೆ.

                   ನಮ್ಮ ಹಳೆಯ ಆಚಾರ ವಿಚಾರಗಳನ್ನು ಗಮನಿಸಿದರೆ ಹಿರಿಯರು ನಮಗೆ ಏನೇ ಹೇಳಿದರು ಅದು ನಮ್ಮ ಒಳ್ಳೆಯದಕ್ಕೆ ಆಗಿರುತ್ತದೆ, ಎಂದು ಅದು ಕೋವಿಡ್ ನ ಸಮಯದಲ್ಲಿ ಅರಿವಾಯಿತು.

        ಉದಾ: ನೋಡುವುದಾದರೇ ಕುಟುಂಬದ ಹಿರಿಯರು ಪ್ರತಿ ಊಟದ ಮೊದಲು ನೀವು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ತೊಳೆದುಕೊಳ್ಳಿ ಎಂದು ಒತ್ತಾಯಿಸಿದ್ದು ನಿಮಗೆ ಇನ್ನು ನೆನಪಿರಬಹುದು.....

            ಯಾವುದೇ ಋತುವಾದರೂ ಸರಿ  ಎದ್ದೊಡನೆ ಸ್ನಾನ ಮಾಡಬೇಕು ಬಾಗಿಲ ಹೊರಗೆ ಚಪ್ಪಲಿಯನ್ನು ಬಿಡಬೇಕು. ಇತ್ತೀಚಿನ ದಿನಗಳವರೆಗೂ ಇವೆಲ್ಲವೂ ಹಳೆಯ ಕಾಲದ ಪದ್ಧತಿಗಳು ಎಂದುಕೊಳ್ಳಲಾಗಿತ್ತು. ಆದರೆ ಕೋವಿಡ್ 19 ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿಕೊಂಡಿರುವುದರಿಂದ ದಿಢೀರ್ ಎಂದು  ಈ ಎಲ್ಲಾ ಅಭ್ಯಾಸಗಳಿಗೂ ಹೊಸ ಅರ್ಥ ಬಂದಿದೆ.

                  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನಿರ್ದೇಶನದಂತೆ ನಾವೆಲ್ಲರೂ 20 ಸೆಕೆಂಡುಗಳಿಗೆ ಸಾಬೂನಿನಿಂದ ಮತ್ತು ನೀರಿನಿಂದ ಕೈ ತೊಳೆಯುತ್ತಿದ್ದೇವೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದೇವೆ,                 

                  ನಮ್ಮ ಭಾರತದ ವೈದ್ಯಕೀಯ ಪದ್ಧತಿಯ ಬಗ್ಗೆ ಗಮನಹರಿಸಿದಾಗ ಅದರಲ್ಲಿ   ಸಮತೋಲನ ಉಳ್ಳ ಜೀವನ ಶೈಲಿ ವಿವಿಧ ರೀತಿಯ ಆಹಾರ ಸೇವನೆ ಅದನ್ನು ಆಯುರ್ವೇದ ತಿಳಿಸುತ್ತದೆ. ಆಸಕ್ತರಾಗಿ ಅಥರ್ವ ವೇದದಲ್ಲಿ ಕೃಷಿಗಳನ್ನು ನೋಡಲಾಗುವುದಿಲ್ಲವೆಂದು ಮತ್ತು ಅದನ್ನು  ಕ್ರಿಮಿ ಎಂದು ಕರೆಯಲಾಗಿದೆ.  ವೈದ್ಯಕೀಯ ಗ್ರಂಥವಾದ ಚರಕ ಸಂಹಿತೆಯಲ್ಲಿ ಕ್ರಿಮಿಗಳು  ಮತ್ತು ಅದರ ಬಣ್ಣ ಮತ್ತು ಆಕಾರವನ್ನು ವಿವರಿಸಿದೆ. ಅವುಗಳನ್ನು ನೋಡಲು ಅವರ ಬಳಿ ದೂರದರ್ಶಕ ಯಂತ್ರವಿತ್ತೆ ಅಷ್ಟು ಸವಿಸ್ತಾರವಾಗಿ ವಿವರಿಸಿದೆ ಗೌತಮನ ನ್ಯಾಯ ಸಹಿತದಲ್ಲಿ ಮಸೂರದ ಬಗ್ಗೆ ವಿವರಣೆ ಇದೆ.

                                 ಹೇಮಾವತಿ..... 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ