ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಕರ್ನಾಟಕ ರಾಜ್ಯದ ಅತ್ಯಂತ ಚಿಕ್ಕ ತಾಲೂಕುಗಳಲ್ಲಿ ಇದು ಒಂದು ಆದರೂ ಈ ತಾಲೂಕಿನಿಂದ 208ಮಹಿಳೆಯರೂ ಸೇರಿದಂತೆ 975ಕ್ಕೂ ಹೆಚ್ಚು ಗಂಡು ಗಲಿ ಗಳು ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿ ಬ್ರಿಟಿಷರಿಂದ ಚಿತ್ರಹಿಂಸೆ ಅನುಭವಿಸಿದ್ದಾರೆ   500ಕ್ಕೂ ಹೆಚ್ಚು ಕುಟುಂಬ ಗಳು ಮನೆ ಮಠ ಕಳೆದುಕೊಂಡು ತಮ್ಮ ತ್ಯಾಗ ಮೆರೆದಿವೆ. ತುಂಬು ಗರ್ಭಿಣಿ ಯರು, ಮಕ್ಕಳು, ವಯೋ ವ್ರದ್ದರು ಬಾಣಂತಿಯರು, ಸಹ 1917ರಿಂದಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.    


   ದೇಶದಲ್ಲಿ ಹೋಮ್ ರೋಲ್ ಚಳುವಳಿ ಆರಂಭಗೊಂಡಾಗ ಅದಕ್ಕೆ ಸಿದ್ದಾಪುರದಲ್ಲಿ ಸಂಘಟನೆ ಮಾಡಿ ಚಳುವಳಿ ನಡೆಸಿದ್ದರು. 1920ರಲ್ಲಿ ಖಿಲಾಫತ್ ಚಳುವಳಿ ಆರಂಭ ವಾದಾಗ ಆ ಚಳುವಳಿ ಯನ್ನು ಸಿದ್ದಾಪುರ ತಾಲೂಕಿನ ಸಾವಿರಾರು ಜನರು ಬೆಂಬಲಿಸಿ ಅದಕ್ಕೆ ಸದಸ್ಯರಾಗಿದ್ದು ಒಂದು ದಾಖಲೆ ಭೂ ಕಂದಾಯ ನಿರಾಕರಣೆ ಸಿದ್ದಾಪುರದಲ್ಲಿ ನಡೆದಿತ್ತು ಎನ್ನುವದನ್ನು ನಾವು ಗಮನಿಸಬಹುದು.  


ಒಂದೇ ದಿವಸ 27ಪೊಲೀಸ್ ಪಟೇಲರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಂದಿನ ಬ್ರಿಟಿಷ್ ಆಡಳಿತ ಯಂತ್ರಕ್ಕೆ ಬಿಸಿ ತಾಗಿಸಿದ್ದು ಸಿದ್ದಾಪುರ ತಾಲೂಕಿನಲ್ಲಿ ಕರಾನಿರಾಕರಣೆ ಪ್ರತಿಜ್ನೆ ನಡೆದು ಮಹಿಳೆಯರಾದಿಯಾಗಿ ಕರತುಂಬುವ 1400 ಜನರು ಆ ಪ್ರತಿಜ್ನೆಗೆ ಸಹಿಮಾಡಿ ಕರವನ್ನು ತುಂಬದೆ ಆಂದೋಲನ ಮಾಡಿದ್ದರು.  


1917ರಲ್ಲಿ ಪ್ರಾರಂಭ ವಾದ ಆಂದೋಲನ ಮೂರು ದಶಕಗಳ ಕಾಲ ನಡೆಯಿತು ರಾಷ್ಟೀಯ ಹೋರಾಟದಲ್ಲೂ ತಾಲ್ಲೂಕಿನ ಸಾವಿರಾರು ಜನ ಭಾಗವಹಿಸಿದ್ದು ನಮಗೆ ಹೆಮ್ಮೆಯ ಸಂಗತಿ  


.                                                            ವಿನಾಯಕ ಹೆಗಡೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ