ನಮ್ಮ ಹಾವೇರಿ
ಹಾವೇರಿ..... ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲೊಂದು ತನ್ನದೇ ಆದ ಹಲವು ವಿಸ್ಮಯಗಳನ್ನು ಹೊಂದಿದೆ. ಈ ಜಿಲ್ಲೆಯು ಜಾನಪದ ಕಲೆ, ಸಂಸ್ಕೃತಿಗಳ ತವರೂರು ಎನಿಸಿದೆ.ಕರ್ನಾಟಕದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಹೆಗ್ಗಳಿಕೆಯನ್ನು ಹೊಂದಿರುವ ಹಾವೇರಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಜಿಲ್ಲೆ ಎಂದು ಮತ್ತು ಏಲಕ್ಕಿ ಕಂಪಿನನಾಡು ಎಂದೇ ಪ್ರಸಿದ್ಧಿಯಾಗಿದೆ.
ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಮೊದಲಿನಿಂದಲೂ ಅನೇಕ ಇತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನಮ್ಮ ಜಿಲ್ಲೆಯವರಾದ ಮೈಲಾರ ಮಹದೇವಪ್ಪ, ಗುದ್ಲೆಪ್ಪ ಹಳ್ಳಿಕೇರಿ, ಎನ್ ಎಸ್ ಹರಡೆಕರ್, ಸಿದ್ದಪ್ಪ ಹೊಸಮನಿ, ರಮಾನಂದ ಮುನ್ನುಡಿ ಅನೇಕ ಹಿರಿಯರ ಹೋರಾಟವು ನಮಗೆ ಮಾದರಿಯನಿಸಿದೆ. ಶಿಗ್ಗಾಂವಿಯ ಸಿದ್ದಮ್ಮ ಬಳ್ಳಾರಿಯಂತಹ ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರೆಂಬುದು ಜಿಲ್ಲೆಗೆ ಹೆಮ್ಮೆಯ ವಿಚಾರ.
ಹಾವೇರಿಯನ್ನು ಹಲವಾರು ರಾಜವಂಶಗಳು ಆಳಿದ್ದು ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಅವರಲ್ಲಿ ಪ್ರಮುಖವಾದವು.
ಹಾವೇರಿ ಜಿಲ್ಲೆಯು ವಿಶೇಷ ಭೌಗೋಳಿಕ ಲಕ್ಷಣಗಳನ್ನು ಹೊಂದಿದ್ದು ಇದು ಕರ್ನಾಟಕದ ಮಧ್ಯಭಾಗದಲ್ಲಿದ್ದು.ಮತ್ತು ಕೇಲವು ತಾಲೂಕುಗಳು ಬಯಲುಸೀಮೆ ಪಟ್ಟಿಗೆ ಸೇರದರೆ. ಕೇಲವು ತಾಲೂಕುಗಳು ಅರೆಮಲೆನಾಡಿನ ಪಟ್ಟಿಗೆ ಸೇರಿವೆ. ಮತ್ತು ಸಮತಟ್ಟಾದ ಬಯಲು ಪ್ರದೇಶದ ಜೊತೆಗೆ ಅಲ್ಲ ಅಲ್ಲಿ ಕಲ್ಲಿನ ಗುಡ್ಡಗಳಿಂದ ಕೂಡಿದೆ. ಸ್ವಲ್ಪ ಪ್ರಮಾಣದಲ್ಲಿ ಅರಣ್ಯವು ಕಂಡುಬರುತ್ತದೆ. ಹಾಗಾಗಿಯೇ ಬಂಕಾಪುರದ ನವಿಲುಧಾಮ , ರಾಣೇಬೆನ್ನೂರಿನ ಕೃಷ್ಣಮೃಗ ಅಭಿಯಾರಣ್ಯ, ಸವಣೂರಿನ ದೊಡ್ಡ ಹುಣಸೆ ಮರಗಳು ಬಹಳ ಪ್ರಖ್ಯಾತಿ ಪಡೆದಿವೆ. ತುಂಗಭದ್ರಾ,ವರದಾ, ಕುಮದ್ವತಿ, ಧರ್ಮಾ ಪ್ರಮುಖ ನದಿಗಳಾಗಿದ್ದು ಇವು ಜಿಲ್ಲೆಯುದಕ್ಕೂ ಹರಿದು ಬಂಗಾಳ ಕೊಲ್ಲಿ ಸೇರುತ್ತವೆ.
ಜಿಲ್ಲೆಯ ಮುಖ್ಯ ಬೆಳೆಗಳಾದ ಭತ್ತ,ಹತ್ತಿ, ಮೆಕ್ಕೆಜೋಳ, ಕಬ್ಬು ಇದರ ಜೊತೆಗೆ ವಾಣಿಜ್ಯ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಯು ವಿಶ್ವವಿಖ್ಯಾತಿಯನ್ನು ಪಡೆದಿದೆ.
ಹೋರಿ ಹಬ್ಬವು ಜಿಲ್ಲೆಯ ಜನಪ್ರಿಯ ಗ್ರಾಮೀಣಕ್ರೀಡೆಯಾಗಿದ್ದು ಜಿಲ್ಲೆಯಲ್ಲಿ ಬಹಳ ಪ್ರಸಿದ್ಧವಾಗಿದೆ. ಇದಲ್ಲದೆ ಜನರು ತಮ್ಮ ಗ್ರಾಮಗಳಲ್ಲಿ ಕ್ರೀಡೆಗಳು ಕಾರ್ಯಕ್ರಮಗಳನ್ನು ಏರ್ಪಡಿಸಿ ಸ್ಥಳೀಯ ಪ್ರತಿಭೆಗಳಿಗೆ ದಂತಕಥೆಗಳೊಂದಿಗೆ ನಟಿಸಲು ಅವಕಾಶ ಒದಗಿಸಿದ್ದಾರೆ.
ನಮ್ಮ ಜಿಲ್ಲೆಯ ಹಲವಾರು ಗಣ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ನಮ್ಮ ಜಿಲ್ಲೆಯ ಹೆಸರನ್ನು ದೇಶವಿದೇಶಗಳಲ್ಲಿ ಪಸರಿಸಿದ್ದಾರೆ ಶ್ರೀ ಎಸ್ ಆರ್ ಬೊಮ್ಮಾಯಿ ಮತ್ತು ಬಿ ಎಸ್ ಬೊಮ್ಮಾಯಿಯವವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರೆನ್ನುವುದು ಖುಷಿಯ ವಿಚಾರ. ಇನ್ನು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ ಕೃ ಗೋಕಾಕರವರು ಜಿಲ್ಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಗಂಗೂಬಾಯಿ ಹಾನಗಲ್, ವರಕವಿ ಸರ್ವಜ್ಞ, ಭಕ್ತ ಕನಕದಾಸ, ಸಂತ ಶಿಶುನಾಳ ಶರೀಫ, ಅಂಬಿಗರ ಚೌಡಯ್ಯನವರು ಅನೇಕರು ನಮ್ಮ ಜಿಲ್ಲೆಯವರೆಂಬುದು ನಮಗೆ ಅಭಿಮಾನವನ್ನು ಉಂಟುಮಾಡುತ್ತದೆ.
ಜಿಲ್ಲೆಯು ಹಾನಗಲ್ಲನಲ್ಲಿ ಕುಮಾರ ಶಿವಯೋಗಿಗಳ ಮಂದಿರ, ಕದರಮಂಡಲಗಿಯ ಕಾಂತೇಶಸ್ವಾಮಿ ದೇವಸ್ಥಾನ,ಕಾಗಿನೆಲ್ಲೆಯ ಆದಿಕೇಶವ ದೇವಸ್ಥಾನ, ಹಾವೇರಿಯ ಹುಕ್ಕೆರಿ ಮಠದ ಜಾತ್ರೆಯ ಬಹಳ ಪ್ರಖ್ಯಾತಿ ಪಡೆದಿದೆ.ಇಂತಹ ಪುರಾಣ ಪ್ರಸಿದ್ಧ ಹಿನ್ನೆಲೆಗಳನ್ನು ಹೊಂದಿದ.ಕ್ಷೇತ್ರಗಳು ಇಲ್ಲಿವೆ ಇಂತಹ ಪುಣ್ಯಭೂಮಿಯು ತನ್ನ ಶ್ರೀಮಂತ ಆಚರಣೆ ಕಲೆಗಳಿಂದ ಇರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿ.
ಬಸವರಾಜ ಪಾಟೀಲ
ಎಂ ಎಂ ಕಲಾ & ವಿಜ್ಞಾನ ಮಹಾವಿದ್ಯಾಲಯ ಶಿರಶಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ