ತ್ಯಾಗಮಯಿ ಅಮ್ಮ
ಅಮ್ಮನಿಗಾಗಿ ಒಂದೇ ಒಂದು ದಿನವೂ ಅವರ ತ್ಯಾಗಕ್ಕೆ ಪ್ರೀತಿಗೆ ಪ್ರತಿಕ್ಷಣ ಅವರ ಸೇವೆಯನ್ನು ಮಾಡಿದರು ಅವರ ಋಣ ತೀರಿಸಲಾಗದು......
ಆದರೂ ಸಹ ನನ್ನ ಅಮ್ಮನ ಬಗ್ಗೆ ಬರೆಯಬೇಕೆಂಬುದು ನನ್ನದೊಂದು ಆಸೆ.......
ಅಮ್ಮನ ಕುರಿತು ಬರೆಯಲು ಪದಗಳೇ ಸಾಲದು. ನನ್ನ ಅಮ್ಮ ಅಂತಲ್ಲ, ಅಮ್ಮ ಅಂದರೆ ಹಾಗೆ ಪದಗಳಿಂದ ವರ್ಣಿಸಲಾಗದು. ನಾನು ಕಂಡ ಪ್ರತ್ಯಕ್ಷ ದೇವತೆ ಅಂದರೆ ಬಿಡುವಿಲ್ಲದೆ ದುಡಿಯುವ ತ್ಯಾಗಮಯಿ ನನ್ನ ಅಮ್ಮ......
ಮತ್ತೆ ಮರುಜನ್ಮ ಅಂತಿದ್ದತೆ ಈ ಮಹಾತಾಯಿಗೆ ಮಗಳಾಗಿ ಅಲ್ಲದಿದ್ದರೂ ಅವರ ಪಾದ ಧೂಳಿನ ಕಣವಾದರೂ ನಾನು ಧನ್ಯ....
ತಾಯಿಯು ಜಗತ್ತಿನಲ್ಲಿ ಮತ್ತೊಂದು ರೂಪ. ತಾಯಿ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಧ್ಯವಿಲ್ಲ. ತಾಯಿಯು ಜೀವ ನೀಡುವವಳು ಮಾತ್ರವಲ್ಲದೆ ಇನ್ನು ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ......
ಒಂದು ತಾಯಿಯ ಜೀವನವು ಹೋರಾಟಗಳಿಂದ ತುಂಬಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ತಾಯಿಗೆ ಹಲವಾರು ಜವಾಬ್ದಾರಿಗಳಿವೆ. ನಮ್ಮ ಯಶಸ್ಸಿಗಾಗಿ ತಾಯಿಯು ಯಾವಾಗಲು ಶ್ರಮಿಸುತ್ತಾಳೆ. ನಾವು ತಪ್ಪು ದಾರಿಯಲ್ಲಿ ಹೋದಾಗ ಅಥವಾ ನಮಗೆ ದಾರಿ ಅರ್ಥವಾಗದಿದ್ದಾಗ ತಾಯಿ ನಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾಳೆ. ಅದಕ್ಕಾಗಿಯೇ ನನ್ನ ತಾಯಿಯು ನನ್ನ ಸ್ಫೂರ್ತಿಯ ಮೂಲವಾಗಿದೆ.....
ಅಮ್ಮನ ಕೈ ರುಚಿಯ ಬಗ್ಗೆ ಹೇಳಲೇ ಬೇಕು... ಎಲ್ಲಾ ಅಮ್ಮಂದಿರು ಅಡುಗೆಯಲ್ಲಿ ಅತ್ಯದ್ಭುತ ಕಲೆಗಾರರು ಎಂದರು ತಪ್ಪಾಗಲಾರದು. ಅವರು ಯಾವ ರೀತಿಯ ಅಡುಗೆ ಮಾಡಿದರು ಚೆಂದ. ಅಮ್ಮನ ಕೈ ರುಚಿಯೇ ಹಾಗೇ ಪ್ರಪಂಚ ಮರೆಸುವ ಶಕ್ತಿ ಹೊಂದಿದೆ.......
ನಮ್ಮ ತಾಯಿಯು ಹೊರತಾಗಿ ನಮ್ಮ ಮೊದಲ ಗುರುವು ಹೌದು. ತಾಯಿಯು ನಮಗೆ ಒಳ್ಳೆಯ ನಡತೆಯನ್ನು ಕೊಡುತ್ತಾಳೆ. ನಾವು ನಮ್ಮ ಪ್ರಾಥಮಿಕ ಜ್ಞಾನವನ್ನು ನಮ್ಮ ತಾಯಿಯಿಂದಲೇ ಪಡೆಯುತ್ತೇವೆ. ಹಾಗಾಗಿ ನನ್ನ ತಾಯಿಯೇ ನನ್ನ ಮೊದಲ ಗುರು ಎಂದು ಹೆಮ್ಮೆಯಿಂದ ಹೇಳಬಲ್ಲೆ.....
ಇಂದಿಗೂ ನನ್ನ ಅಮ್ಮನ ತೋಳಲ್ಲಿ ಮತ್ತೆ ಮಗುವಾಗಬೇಕೇನಿಸಿದೆ.....
ವಿನಯದ ಜೊತೆಗೆ ಸಂಸ್ಕಾರ ತುಂಬಿದ ಜೀವ ಎಂದರೆ ಅದು ಅಮ್ಮ. ಬದುಕಲಿ ಛಲ ಮುಖ್ಯ ಎಂದು ಅರ್ಥ ಮಾಡಿಸಿದ ಮಹಾನ್ ವ್ಯಕ್ತಿ ಎಂದರೆ ಅಮ್ಮ. ತಪ್ಪು ದಾರಿಯಲ್ಲಿ ನಡೆಯುತಿದ್ದ ನನ್ನನ್ನು ಸರಿ ದಾರಿಯ ಬಗ್ಗೆ ನಡೆಯಲು ಕಲಿಸಿದವಳು ನನ್ನ ತ್ಯಾಗಮಯಿ ಅಮ್ಮ. ಜೀವನದ ಎಷ್ಟೋ ಕಷ್ಟ ನೋವುಗಳನ್ನು ಯಾರಿಗೂ ಹೇಳದೆ ಮನಸಲ್ಲೇ ನುಂಗುವ ಏಕೈಕ ಜೀವ ಎಂದರೆ ಅದು ಅಮ್ಮ ಮಾತ್ರ.....
ನನ್ನ ಪಾಲಿಗೆ ಭರವಸೆಯ ಬೆಳಕು ಇವಳೇ.....
ನನ್ನ ಪುಟ್ಟ ಜಗತ್ತಿನ ಅದ್ಭುತ ಶಕ್ತಿಯಾದ ನನ್ನ ಅಮ್ಮನಿಗೆ ಕೋಟಿ ಕೋಟಿ ನಮನಗಳು......
ಯಶೋಧಾ ಎಂ ಮರಾಠಿ
ಎಂ ಎಂ ಮಹಾವಿದ್ಯಾಲಯ ಶಿರಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ