ಶಿಲಾ ರೂಪಿ ಕೈಟಬೇಶ್ವರ

  

ಅಟ್ಟಹಾಸ ಎಲ್ಲೇ ಮೀರಿದಾಗ ಸರ್ವ ಶಕ್ತನಾದ ಭಗವಂತ ಭೂಮಿಯಲ್ಲಿ ಅವತರಿಸಿ ನಂಬಿ ಬಂದ ಭಕ್ತರನ್ನ ಬೆನ್ನ ಬಿಡದೆ ಕಾಪಾಡುತ್ತಾನೆ. ಹಾಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರದಲ್ಲಿ ಕೈಟಬೇಶ್ವರ ನೆಲೆ ನಿಂತು ತನ್ನ ನಂಬಿ ಬಂದ ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ.

               ಚಿನ್ಮಯಿ ರೂಪದಲ್ಲಿರುವ ಈಶ್ವರನು ದೇವರ ಗರ್ಭಗುಡಿಯೊಳಗೆ ಶಾಂತವಾದ ಮುಖ ಮುದ್ರೆಯಿಂದ ಕಂಗೊಳಿಸುತ್ತಿದ್ದಾನೆ .ಇವನನ್ನ ನಂಬಿ ಬಂದ ಭಕ್ತರಿಗೆ ತನ್ನ ಬಲವು ಅನುಗ್ರಹವನ್ನು ಎಂದಿಗೂ ಇಟ್ಟು ಕಾಪಾಡುತ್ತಿರುವ ಪರಮೇಶ್ವರನು.

                     ಈ ದೇವಾಲಯವು ಕ್ರಿಸ್ತಶಕ 100 ರಲ್ಲಿ ಹೊಯ್ಸಳರ ರಾಜ್ಯ ವಿಕ್ರಮಾದಿತ್ಯನಿಂದ ನಿರ್ಮಿತವಾಗಿದೆ.ಎಲ್ಲಾ ದೇವಾಲಯದಲ್ಲಿಯೂ ಸಾಮಾನ್ಯವಾಗಿ ಲಿಂಗಗಳು ಕಪ್ಪು ಬಣ್ಣದಲ್ಲಿದ್ದರೆ ಇಲ್ಲಿ ಮಾತ್ರ ನೀಲವರ್ಣ ಪರಮೇಶ್ವರನ ಲಿಂಗವು ಕಂಗೊಳಿಸುತ್ತದೆ. ಈ ಅಪರೂಪದ ಪರಮಾತ್ಮನನ್ನು ನೋಡುವುದೇ ಒಂದು ಅದ್ಭುತವಾಗಿದೆ.

              ಈ ಕ್ಷೇತ್ರದ ಮತ್ತೊಂದು ಮಹಿಮೆ ಏನೆಂದರೆ ಯುಗಾದಿ ಹಬ್ಬದ ದಿನ ಸೂರ್ಯನ ಕಿರಣಗಳು ನೇರವಾಗಿ ಪರಶಿವನ


ನೆತ್ತರದ ಮೇಲೆ ಸ್ಪರ್ಶವಾಗಿ ಬೀಳುತ್ತದೆ. ಆ ದಿನ ಸಾವಿರಾರು ಭಕ್ತರು ಈ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳಲು ಕಾದು ಕುಳಿತಿರುತ್ತಾರೆ.

ಈ ಕೈಟಬೇಶ್ವರ ನನ್ನ

ಗಿರಿಜಮ್ ಗಣೇwwಶಂ ಗಳೇ ನೀಲ ವರ್ಣಂ|

ಗಜೇಂದ್ರದಿ ರೂಢಮ್ ಗುಣಾತೀತ ರೂಪಂ|

ಭವಂ ಭಾಸ್ವರಂ ಭಸ್ಮಾನುಭೋಷಿತ |

ಭವಾನಿ ಕುಲಂದ್ರಂ ಭಜೆ ಪಂಚವಕ್ರಾಂ|| ಎಂದು ನಮ್ಮ ಧರ್ಮ ಗ್ರಂಥದಲ್ಲಿ ನೀಡಿದ್ದಾರೆ.

                      ಈ ದೇವಾಲಯವು ಅದ್ಭುತ ಶಿಲ್ಪ ಕಲೆಯಿಂದ ಆವರಿಸಿಕೊಂಡಿದೆ. ದೇವಾಲಯವು ವಿಷ್ಯವಾದ ಜಾಗ ಉತ್ತರವಾದ ಮೇಲ್ಚಾವಣಿಯನ್ನು ಹೊಂದಿದ್ದು ನೋಡುಗರಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಇನ್ನು ಗರ್ಭಗುಡಿಯ ಒಳ ಭಾಗದಲ್ಲಿ 16 ಕಲ್ಲಿನ ಕಂಬಗಳಿವೆ ಈ ಕಂಬಗಳಲ್ಲಿ ನಮ್ಮ ಪ್ರತಿಬಿಂಬವು ನೇರವಾಗಿ ಮತ್ತು ತಲೆಕೆಳಗಾಗಿ ಕಾಣಿಸುತ್ತದೆ. ಅತ್ಯಂತ ಪುರಾತನವಾದ ಈ ದೇವಾಲಯದಲ್ಲಿ ಶಿವರಾತ್ರಿ ಮತ್ತು ಯುಗಾದಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ.

ಸಾಧ್ಯವಾದರೆ ಈ ಪ್ರಶಾಂತವಾದ ಜಾಗದಲ್ಲಿ ನೆಲೆ ನಿಂತ ನೀಲ ವರ್ಣದ ಕೈತಬೇಶ್ವರನ ದರ್ಶನವನ್ನು ಮಾಡಿ ನಿಮ್ಮ ಸಕಲ ತೊಂದರೆಯನ್ನು ನೀಗಿಸಿಕೊಳ್ಳಿ.                     ಚೈತ್ರ ಎಂ.

                           

                      ಎಂ ಎಂ ಮಹಾವಿದ್ಯಾಲಯ ಶಿರಸಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ