ಗುಡಿಗಾರ ಸಮಾಜ

 

   ಮರೆಗೆಲಸ ಮಾಡುವವರನ್ನು ಬಡಗಿ ಆಚಾರಿ ಎಂದು ಕರೆಯುವುದು ವಾಡಿಕೆ. ಆದರೆ ಶ್ರೀಗಂಧದ ಮರದ ಕೆತ್ತನೆ ಮಾಡುವವರನ್ನು ಗುಡಿಕಾರರೆಂದು ಕರೆಯುತ್ತಾರೆ. ಕಟ್ಟಿಗೆಯ ಕೆಲಸದೊಂದಿಗೆ ಕೆಲ  ಮಟ್ಟಿಗೆ ಬೆಂಡು ಮಣ್ಣು ಕೊಂಬು ದಂತಗಳ ಕೆಲಸವನ್ನು ಇವರು ಮಾಡುತ್ತಾರೆ. ಬೆಂಡಿನಿಂದ ಹೂಮಾಲೆ ತಯಾರಿಸುತ್ತಾರೆ. ಮಣ್ಣಿನಿಂದ ಮೂರ್ತಿ ತಯಾರಿಸುತ್ತಾರೆ. ಕೊಂಬು ದಂತಗಳಿಂದ ವಿವಿಧ ವಸ್ತುಗಳನ್ನು ರಚಿಸುತ್ತಾರೆ. ಆದರೆ ಹೆಚ್ಚಾಗಿ ಗಂಧದ ಕಟ್ಟಿಗೆಯಿಂದ ಇವರು ತಮ್ಮ ಕೌಶಲ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮೂಡಿಸುತ್ತಾರೆ. ಗಂಧದ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಗುಡಿಗಾರ ಎಂದು ಕರೆಯುತ್ತಾರೆ. ಈ ಗುಡಿಗಾರರನ್ನು ಕೆಲವೆಡೆ ಶೇಟ್ ಎಂದು ಶೆಟ್ಟಿ ಎಂದು ಹೀಗೆ ಗೋವಾದಲ್ಲಿ ಚಿತಾರಿ ಎಂದು ಕರೆಯುತ್ತಾರೆ. ಅವರ ಕೆಲಸವನ್ನು ನೋಡಿಯೇ ಅವರನ್ನು ಗುಡಿಗಾರರೆಂದು ಗುರುತಿಸಬೇಕಾದ ಪರಿಸ್ಥಿತಿ ಕೆಳಗಡೆ ಉಂಟು. 

         ಇಂದಿನ ಬಡಗಿಗಳು ವಿಶ್ವಕರ್ಮನ ವಂಶಸ್ಥರು ನಾವು ಎಂದು ಹೇಳಿಕೊಳ್ಳುತ್ತಾರೆ. ಗುಡಿಗಾರರಲ್ಲಿಯೇ ಮರದ ಕೆತ್ತನೆಯ ಬಾಗಿಲು ರಥ ತಯಾರಿಕೆ ದೇವರ ಮಂಟಪ ಗುಡಿ ಗೋಪುರ ನಿರ್ಮಾಣ ಗುಡಿ ಒಳಗಿನ ಕೆತ್ತನೆ ಮೇಲ್ಚಾವಣಿ ವೃತ್ತು ಕೆತ್ತುವುದರಲ್ಲಿಯೂ ಕೆಲವರು  ಸಿದ್ಧಿ ಪಡೆಯುವುದು ಈ ಮಾತಿಗೆ ಸಮರ್ಥನೆಯನ್ನು ಕೊಡುತ್ತದೆ. 

       ಕನ್ನಡ ನಾಡಿನ ಗುಡಿಗಾರರು ಮೂಲತಃ ಗೋವಾದವರು. ಅರಮನೆ ಶೃಂಗಾರಕ್ಕೂ, ಗುಡಿ ನಿರ್ಮಾಣಕ್ಕೆ. ವಿಜಯನಗರದ ಅರಸರುಗಳು ಇವರನ್ನು ಕನ್ನಡ ನಾಡಿಗೆ ಆಹ್ವಾನಿಸಿದ್ದಿರಬೇಕು. ಪೋರ್ಚುಗೀಸರು ಗೋವಾದಲ್ಲಿ ವಸಾಹತು ಸ್ಥಾಪಿಸಿದಾಗ ಈ ವಲಸೆಯ ಪ್ರಮಾಣ ಹೆಚ್ಚಿತು. ಇದಕ್ಕೆ ಕಾರಣ ಪೋರ್ಚುಗೀಸರಿಂದ ಮತಾಂತರ ಒತ್ತಡ ಬಂದಾಗ ಕರ್ನಾಟಕದತ್ತ ವಲಸೆ ಬಂದಿರುವುದೆಂದು ಪ್ರತಿತಿಯಿದೆ. ಹೀಗೆ ಕರ್ನಾಟಕಕ್ಕೆ ವಲಸೆ ಬಂದು ಗುಡುಗಾರರಿಗೆ ರಾಜಶ್ರಯ ದೊರಕುತ್ತಿತ್ತು. ಕುಂಡೋದರಿ ಮಾಳಸ ದೇವಿ, ರವರನಾಥ್ ಮುಂತಾದ ಹೆಸರಿನ ಗುಡಿಗಾರರ ಕುಲದೇವರ ದೇವಸ್ಥಾನಗಳು ಇಂದು ಗೋವಾದಲ್ಲಿ ಇರುವುದು. ಆ ದೇವ ದೇವತೆಗಳಿಗೆ ಇವರು ನಡೆದುಕೊಳ್ಳುತ್ತಿರುವುದು. ಅವರ ಮೂಲತಾಣ ಗೋವಾ ಆಗಿತ್ತು ಎಂಬುದನ್ನು ಪುಷ್ಟಿಕರಿಸುವಂತಿದೆ.

        ಸುಮಾರು 3500 ಜನಸಂಖ್ಯೆ ಮಿತಿಯೊಳಗಿರುವ ಗುಡಿಗಾರ ಮೂಲ ಸ್ಥಳವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ಉತ್ತರ ಕನ್ನಡ ಜಿಲ್ಲೆಯ ಶಿರಸಿ,ಯಲ್ಲಾಪುರ, ಸಿದ್ದಾಪುರ, ಕುಮಟಾ,ಹೊನ್ನಾವರ, ಭಟ್ಕಳ ಭಾಗಗಳಲ್ಲಿ ನೆಲೆಸಿರುವ ಗುಡಿಗಾರರು ತಮ್ಮ ಶ್ರೀಗಂಧದ ಕೆತ್ತನೆ, ಮರದ ಬಾಗಿಲುಗಳ ಕೆತ್ತನೆ, ಬೆಂಡಿನ ಕೆಲಸ,ಮಣ್ಣಿನ ಮತ್ತು ಕಲ್ಲಿನ ಮೂರ್ತಿಗಳನ್ನು ತಯಾರಿಸುವ ಕೆಲಸವನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರೆ. 

     ಬ್ರಾಹ್ಮಣರಂತೆ ಇವರು ವಿವಿಧ ಗೋತ್ರಗಳನ್ನು ಹೊಂದಿದ್ದಾರೆ ಸಂಧ್ಯಾ ವಂದನೆ ವೇಳೆ ಗೋತ್ರ ಪ್ರವರ ರೂಢಿಯಲ್ಲಿದೆ. ಭಾರದ್ವಾಜ್,ವಸಿಷ್ಠ, ವಿಶ್ವಾಮಿತ್ರ, ಗೌತಮ, ಕಶ್ಯಪ,  ಕೌಶಿಕ ಮುಂತಾದ ಗೋತ್ರದವರು ಇವರು. ಇವರಲ್ಲಿ ಸಗೋತ್ರ ವಿವಾಹ ನಿಷೇಧ. ಗುಡಿಗಾರರ ಹೆಂಗಸರು ಕೇವಲ ಅಡುಗೆ ಮನೆ ವಾರ್ತೆಗಳಲ್ಲಿ ಮಾತ್ರ ತಮ್ಮ ದಿನ ಕಳೆಯುವವರಲ್ಲ. ಅವುಗಳ ಜೊತೆಗೆ ಗಂಡಸರ ಕೆಲಸದಲ್ಲಿ ನೆರವು ನೀಡುತ್ತಾರೆ. ಬೆಂಡಿನ ಕೆಲಸ,ಮೂರ್ತಿ ಪೆಟ್ಟಿಗೆಗಳಲ್ಲಿ ಹೊಳಪು ನೀಡುವಿಕೆ, ಮುಂತಾದವುಗಳಲ್ಲಿ ಹೆಂಗಸರದೆ ಪಾತ್ರ ಹೆಚ್ಚು. ಗುಡಿಗಾರರ ಹೆಂಗಸರು ಚುರುಕು ಬುದ್ಧಿವಂತರು ಕೈಗಳು ಅಷ್ಟೇ ಕೆಲಸದಲ್ಲಿ ತುಂಬಾ ಚುರುಕು. 

    ಮೂಲತಃ ಗುಡುಗಾರರು ಸಸ್ಯಹಾರಿ ಮಾಂಸಹಾರಿ ಅಲ್ಲ. ಗೋಧಿ, ಜೋಳ, ಇವುಗಳ ಬಳಕೆ ಕಡಿಮೆ. ಅಕ್ಕಿ ಹಾಲು ಹವ್ಯಕರದಂತೆ ಇವರಿಗೂ ಬೇಕು. ಹಬ್ಬ ಹರಿ ದಿನಗಳಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ. ಇವುಗಳಲ್ಲಿ ಚಕ್ಕುಲಿ, ಚೂಡ, ಉಂಡೆ, ಕರ್ಜಿಕಾಯಿ, ಹಲಸಿನ ಎಲೆ ಕಡಬು, ಅರಿಶಿಣ ಎಲೆ ಕಡುಬು, ಕೇಸಿನ ಎಲೆ ಪತ್ರೊಡೆ,ಸಜ್ಜಪ್ಪ,ಹೋಳಿಗೆಗಳು ಇತರೆ ಪ್ರಮುಖ ತಿಂಡಿಗಳು. 

    ಇತ್ತೀಚಿನ ವರ್ಷಗಳಲ್ಲಿ ಗುಡಿಗಾರ  ಕೆತ್ತನೆ ಕೆಲಸಕ್ಕೆ ಪ್ರಮುಖವಾಗಿರುವ ಈ ಗಂಧದ ಕೊರತೆಯಿಂದ ಗುಡಿಗಾರರ ಕಲೆ ಅವಸಾನದತ್ತ ಸಾಗಿದೆ. ಗುಡಿಗಾರರು ಇದಕ್ಕೆ ಪರ್ಯಾಯವಾಗಿ ಮರದ ಕೆತ್ತನೆ ಬೆಂಡಿನ ಕೆಲಸ ಮಣ್ಣಿನ ಮತ್ತು ಕಲ್ಲಿನ ಮೂರ್ತಿಗಳು ನಿರ್ಮಿಸುವ ಕೆಲಸದಲ್ಲಿ ತೊಡಗಿರುತ್ತಾರೆ. ಸರ್ಕಾರವು ಗುಡಿಗಾರರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಗಮನ ಹರಿಸಬೇಕಾದ ಅವಶ್ಯಕತೆ ಇದೆ.

         ಸಂಪ್ರದಾ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ