ಬೇಡರ ವೇಷ

 


 


ಸಿರ್ಸಿ, ಸುತ್ತಮುತ್ತಲಿನ ಕೆಲ ಕಡೆಯಲ್ಲಿ ಬೇಡರ ವೇಷ ಸಂಪ್ರದಾಯ ಪ್ರತಿ ಎರಡು ವರ್ಷಕೊಮ್ಮೆ ಕಾಣಿಸಿಕೊಳ್ಳುತ್ತದೆ.ಸಿರ್ಸಿ ಮಾರಿಕಾಂಬಾ ಜಾತ್ರೆ ನಡೆಯುವ ವರ್ಷ  ಹೋಳಿ ಹಬ್ಬ ಇರುವುದಿಲ್ಲ. ಉಳಿದ ವರ್ಷಗಳದು ಹೋಳಿ ಹುಣ್ಣಿಮೆಯ ಮುನ್ನ ದಿನಗಳಲ್ಲಿ ಬೇಡರ ವೇಷದ ಸಂಭ್ರಮ ಮುಗಿಲು ಮುಟ್ಟುತ್ತದೆ.ಹೋಳಿ ಹುಣ್ಣಿಮೆಗೂ ಮುಂಚಿನ ಮೂರು ದಿನ ಬೇಡರ ವೇಷದ ಸಡಗರ ಸಂಭ್ರಮ ಕಾಣಸಿಗುತ್ತಿದೆ. ಇಪ್ಪತ್ತು ದಿವಸಗಳಿಂದಲೇ ಬೇಡರ ವೇಷದ ತಲಿಮು,ತಮಟೆ ಸದ್ದು ಸರ್ವೇ ಸಾಮಾನ್ಯವಾಗಿರುತ್ತದೆ.ಬೇಡರ ವೇಷ ಹಾಕುವ ಗುಂಪೂನಂದನ್ನು ಬಂಡಿ  ಎಂದು  ಕರೆಯಲಾಗುತ್ತದೆ.ದಶಕಗಳ ಹಿಂದೆ ಕೆಲವೇ ಕೆಲವಿದ್ದ  ಬಂಡಿಗಳ  ಸಂಖ್ಯೆ ಈಗ ಹೆಚ್ಚಾಗಿದೆ.ನಗರದ ಪ್ರಮುಖ ಭಾಗದಲ್ಲಿ ದಿನವೊಂದಕ್ಕೆ ಇಪ್ಪತ್ತು ಬಂಡಿಗಳು ಸಂಚರಿಸಿ ಬೇಡರ ವೇಷವನ್ನು ಮಾಡ್ತಾರೆ.ಈ ವಿಶಿಷ್ಟ ಆಚರಣೆ ನಡೆಸೋದು ಇಡೀ ರಾಜ್ಯದಲ್ಲಿ  ಸಿರ್ಸಿಯಲ್ಲಿ ಮಾತ್ರ ಅನ್ನೋದು ವಿಶೇಷ.ಸಿರ್ಸಿ ಮಾರಿಕಾಂಬೆ   ಜಾತ್ರೆ ನಡೆಯುವ ವರ್ಷ ಬೇಡರ ವೇಷ ನಡೆಯುದಿಲ್ಲ. ಉಳಿದ ವರ್ಷದಲ್ಲಿ ನಡೆಯುತ್ತದೆ. ಬೇಡರ ವೇಷ ಹಾಕಿಕೊಳ್ಳುವವರಿಗೆ ತಿಂಗಳು ಕಾಲ ಕುಣಿತದ ತಾಳಿಮು ನಡೆಯುತ್ತದೆ.ಕುಣಿತದ ದಿನ ನವಿಲು ಗರಿಬಣ್ಣ, ಗೆಜ್ಜೆ, ಮೀಸೆ,ಹತ್ತಿ, ಕೆಂಪುಬಟ್ಟೆ, ಕತ್ತಿ,ಡಾಲು, ಕೈಗೆ ನಿಂಬೆ ಹಣ್ಣು ಕಟ್ಟಿಕೊಂಡಿರುತ್ತಾರೆ.ನಗರದ ಜನ ರಾತ್ರಿಯಿಡಿ ನೋಡಿ ಕಣ್ತುಂಬಿಕೊಳ್ಳುತ್ತಾರೆ.ಸಂಜೆಯಿಂದಲೇ ಬಣ್ಣ ಬಡಿದುಕೊಂಡು ನವಿಲು ಗರಿ ಸಿಕ್ಕಿಸಿಕೊಂಡು ಕತ್ತಿ ಹಿಡಿದು ರಾತ್ರಿ ಆದ ತಕ್ಷಣ ಊರಿನ ಬೀದಿಯಲ್ಲಿ ಬೇಡರ ವೇಷ ದಾರಿಯಾಗಿ ನಗರದ  ಹಲವಾರು ಕಡೆ ಬೇಡರ ವೇಷ ನ್ರತ್ಯ ಮಾಡುತ್ತಾರೆ. 


ಭಾರದ್ವಾಜ್ ಎನ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಮ್ಮ ಅರಳೇಶ್ವರ

ಡಮಾಮಿ

ಗುಡಿಗಾರ ಸಮಾಜ