ಸೀಗೆ ಹುಣ್ಣಿಮೆ
ಫಸಲು ಬಂದಾಗ ಭೂಮಿ ತಾಯಿಗೆ ಉಡಿ ತುಂಬುವ ದಿನವೇ ಸೀಗಿ ಹುಣ್ಣಿಮೆ..
ಜನ್ಮ ನೀಡುತ್ತಾಳೆ ನಮ್ಮ ತಾಯಿ,ಅನ್ನ ನೀಡುತ್ತಾಳೆ ಭೂಮಿ ತಾಯಿ, ಅನ್ನೋ ಹಾಡನ್ನ ನೀವೆಲ್ಲ ಕೇಳಿದ್ದೀರಿ. ಹೌದು ಭೂಮಿ ತಾಯಿ ಅನ್ನವನ್ನ ಕೊಟ್ಟು ನಮ್ಮನ್ನ ಪೊರೆಯದೆ ಇದ್ದಿದ್ದರೇ ಈ ಭೂಮಿಯ ಮೇಲೆ ಯಾವ ಜೀವಿವು ಇರುತ್ತಿರಲಿಲ್ಲ. ಏಸುಂದರೆ, ಇಳೆ, ಧರಣಿ. ಪೃಥ್ವಿ, ಭೂಮಿ ತಾಯಿ ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ಭೂಮಿ ತಾಯಿ ವಿಷ್ಣುವಿನ ಹೆಂಡತಿ. ಬೆಳೆಗಳು ತುಂಬಿ ನಿಂತಿರುವ ಹೊಲವನ್ನ ವರ್ಷಕ್ಕೆ ಒಂದು ಬಾರಿ ಪೂಜೆ ಮಾಡುವಂತಹ ಸಂಪ್ರದಾಯವನ್ನ ನಮ್ಮ ಹಿರಿಯರು ಅನಾದಿಕಾಲದಿಂದ ರೋಡಿಯಲಿಟ್ಟುಕೊಂಡು ಬಂದಿದ್ದಾರೆ.
ಹೊಲಗಳಿರುವ ರೈತ ಕುಟುಂಬಗಳು ಈ ಹಬ್ಬವನ್ನ ಆಚರಿಸುತ್ತಾರೆ. ಈ ಸೀಗೆ ಹುಣ್ಣಿಮೆಯು ಆಶ್ಚಜ ಮಾಸ ದ ಅಕ್ಟೋಬರ್ ನವೆಂಬರ ನಡುವೆ ಆದರೆ ವಿಜಯ ದಶಮಿಯ ನಂತರ ಇದು ಬರುತ್ತದೆ.
ಈ ಹಬ್ಬವನ್ನ ದಕ್ಷಿಣ ಭಾರತದ ಕರ್ನಾಟಕದಲ್ಲಿ ಬಹಳಷ್ಟು ಜನ ಈ ಹಬ್ಬವನ್ನ ಮಾಡುತ್ತಾರೆ. ಮಲೆನಾಡಿನ ಪ್ರದೇಶದಲ್ಲಿ ಈ ಹಬ್ಬವನ್ನ ಭೂಮಿ ಹುಣ್ಣಿಮೆ ಎಂತಲೂ ಕರೆಯುತ್ತಾರೆ.
ಈ ಹಬ್ಬವನ್ನ ಈಗಲೇ ಯಾಕೆ ಆಚರಣೆ ಮಾಡುತ್ತಾರೆ ಎಂದರೆ ರೈತ ಭೀತಿದ ಬೀಜ ಕಾಳು ಕಾಳಾಗಿ ಮೈತುಂಬಿನಿಂತಂತಹ ತೆನೆಗಳು ರೈತಪಟ್ಟ ಶ್ರಮಕ್ಕೆ ಇದೇ ನೋಡು ಪ್ರತಿಫಲ ಅನ್ನೋ ಹಾಗೆ ಬೆಳೆದು ನಿಂತಿರುವ ಹೊಲಗಳು ಇರುತ್ತವೆ. ಈ ಬೆಳೆಯನ್ನ ಕೊಯ್ದು ಸುಗ್ಗಿ ಮಾಡುವ ಮೊದಲು ಭೂಮಿಯನ್ನು ಪೂಜೆ ಮಾಡುತ್ತಾರೆ. ತೆನೆಗಳನ್ನು ಕಾಳುಗಳನ್ನು ಹೊತ್ತು ನಿಂತಂತಹ ಭೂಮಿಯನ್ನು ಗರ್ಭದಲ್ಲಿ ಮಗುವನ್ನ ಇಟ್ಟುಕೊಂಡಂತಹ ತಾಯಿಗೆ ಹೋಲಿಕೆ ಮಾಡುತ್ತಾರೆ.
ಈ ಹಬ್ಬವನ್ನು ಭೂಮಿ ತಾಯಿಯ ಸೀಮಂತ ಅಂತಲೂ ಕರೆಯುತ್ತಾರೆ.
ರೈತರ ಕುಟುಂಬ ಈ ಹಬ್ಬವನ್ನು ಹೆಚ್ಚು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹಲವಾರು ರೀತಿಯ ಅಡುಗೆಯನ್ನ ಮಾಡಿ ಹೆಚ್ಚಾಗಿ ಕುಚ್ಚಿದ ಕಡುಬನ್ನು ಮಾಡಿ ಭೂಮಿ ತಾಯಿಗೆ ಎಡೆ ಹಿಡಿಯುತ್ತಾರೆ. ಮನೆ ಮಂದಿಯಲ್ಲ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಹೊತ್ತು ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೋಗುತ್ತಾರೆ. ಇದಂತೂ ತುಂಬಾ ಮಜವಾಗಿರುತ್ತದೆ.
ಮನೆಯಲ್ಲಿ ಹೊಲದ ತುಂಬಾ ಚರಗವನ್ನ ಚಲುತ್ತಾರೆ ಆಗ "ಹುಲ್ಲುಳಿಗೂ ಚಲಂಬ್ರಿಗೋ "ಎಂದು ಹೇಳುತ್ತ ಚರಗವಾನ್ನ ಚಲುತ್ತಾರೆ. ಹೀಗೆಂದರೆ ಈ ಭೂಮಿಯಲ್ಲಿ ಬೆಳೆದಂತಹ ಬೆಳೆ ಸರಿಯಾಗಿ ಬರಲಿ ಕಾಳುಗಳು ಮನೆ ತುಂಬಿ ತುಳುಕಲಿ ಸಂತೋಷ ,ಸಮೃದ್ಧಿ, ಏಳಿಗೆ ನಮ್ಮ ಕುಟುಂಬಕ್ಕೆ ಸಿಗಲಿ ಎಂದು ಕೇಳುತ್ತಾರೆ. ಆನಂತರ ಮರದ ಕೆಳಗೆ ಕುಳಿತು ಸಾಮೂಹಿಕವಾಗಿ ಮನೆಯಿಂದ ವೈದಂತಹ ಅಡುಗೆಯನ್ನು ಎಲ್ಲರೂ ಸೇರಿ ಊಟ ಮಾಡುತ್ತೇವೆ. ಈ ಎಲ್ಲವನ್ನ ಅನುಭವಿಸಿದ ವರಿಗೆ ಮಾತ್ರ ಈ ಹಬ್ಬದ ಸಡಗರ ಸಂಭ್ರಮ ತಿಳಿದು ಬರುತ್ತದೆ. ಈ ಹಬ್ಬವನ್ನು ಆಚರಿಸಲು ರೈತರ ಕುಟುಂಬದಲ್ಲಿ ಹುಟ್ಟಲು ನಿಜವಾಗಿಯೂ ಪುಣ್ಯ ಮಾಡಿರಬೇಕು. ಈ ರೈತರ ಕುಟುಂಬದಲ್ಲಿ ಹುಟ್ಟಿದ್ದು ನನ್ನ ಸೌಭಾಗ್ಯವೇ ಸರೀ.....
ಧನ್ಯವಾದಗಳು.
ಎಂ ಎಂ ಕಾಲ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ
ಚೈತ್ರಾ ಎಂ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ