ಕೆಟ್ಟ ಕಣ್ಣುಗಳು

ಸ್ತ್ರೀ ಎಂಬ ಪದವು ಸಂಸ್ಕೃತ ಪದದಿಂದ ಬಂದಿದೆ.  ಹಿಂದಿನ ಕಾಲದಲ್ಲಿ ಸ್ತ್ರೀಯನ್ನು ದೇವರ ಸಮಾನವಾಗಿ ಕಾಣುತ್ತಿದ್ದರು.ಹೆಣ್ಣು ಎಂಬ  ಪದವೇ ಒಂದು ಅದ್ಭುತ.

ಮಮತೆ ,ಕರುಣೆ, ವಾತ್ಸಲ್ಯ,ಅಕ್ಕರೆ ಹಾಗೂ ತಾಳ್ಮೆಯನ್ನು  ಹೊಂದಿರುವವಳೇ  ಹೆಣ್ಣು. ಒಂದು ಹೆಣ್ಣು 9 ತಿಂಗಳು  ತನ್ನ ಗರ್ಭದಲ್ಲಿ ಮಗುವನ್ನು ಸಾಕಿ ಸಲಹುತ್ತಾಳೆ. ಅದೇ ಮಗುವನ್ನು ಜನನ ನೀಡುವಾಗ  ಆ ತಾಯಿ ಬಹಳ ನೋವನ್ನು ಅನುಭವಿಸಿರುತ್ತಾಳೆ. ಒಬ್ಬ ಮನುಷ್ಯನು 4.7ಡೆಲ್ ಷ್ಟು ನೋವನ್ನು ತಡೆದುಕೊಳ್ಳುತ್ತಾನೆ.ಆದರೆ ತಾಯಿಯು ಮಗುವಿಗೆ ಜನ್ಮ ನೀಡುವಾಗ 5.7ಡೆಲ್ ಷ್ಟು ನೋವಾಗುತ್ತದೆ. ಆ

ಕ್ಷಣವನ್ನು ಊಹಿಸಿಕೊಂಡರೆ ಮೈ ಜುಮ್ ವೆನಿಸುತ್ತದೆ.

ಇಷ್ಟೆಲ್ಲಾ ನೋವನ್ನು ಸಹಿಸಿಕೊಳ್ಳುವ ಕರುಣಾಯಿಯೇ 

ಹೆಣ್ಣು.ತಾಯಿಯ ಋಣವನ್ನು ಎಷ್ಟೇ ವಜ್ರ,ವೈಢೂರ್ಯ 

ಹಣ ಕೊಟ್ಟರೂ ತೀರಿಸಲು ಸಾದ್ಯವಿಲ್ಲ .



                        ಹೆಣ್ಣು ಒಲಿದರೆ ನಾರಿ ಮುನಿದರೆ  ಮಾರಿ ಎಂಬ ಗಾದೆ ಮಾತು ಇದೆ. ಭೂಮಿಯು ಒಂದು ಹೆಣ್ಣು, ಪ್ರಕೃತಿಯೂ ಒಂದು ಹೆಣ್ಣು. ಭೂಮಿಯಿಂದ 

ಜನಿಸಿದ ಹೆಣ್ಣೆಂದರೆ ಅದು ಸೀತಾ ಮಾತೆ ಹಾಗೂ 

ಅಗ್ನಿಯಲ್ಲಿ ಜನಿಸಿದ ಹೆಣ್ಣೆಂದರೆ ಅವಳೇ ದ್ರೌಪದಿ.

ಇವರನ್ನೆಲ್ಲಾ ಜನರು ದೇವರ ಸಮಾನವಾಗಿ ಕಂಡರು.

ಆದರೆ ಈಗಿನ ಕಾಲದಲ್ಲಿ ದೇವರ ಸಮಾನವಾಗಿರುವ

ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ದುಷ್ಕರ್ಮಿಗಳು.ಇತ್ತೀಚಿಗಂತೂ ಹೆಣ್ಣು ಒಬ್ಬಳೇ ರಾತ್ರಿಯಲ್ಲಿ ಹೋದರೆ ಸಾಕು ಅವಳನ್ನು ಅಪಹರಿಸಿ ಅತ್ಯಾಚಾರ ಮಾಡಿ, ಕೊಂದು ದೇಹವನ್ನು  ಬಿಸಾಡಿ

ಹೋಗುತ್ತಾರೆ.ಕೆಟ್ಟದೃಷ್ಟಿಯಿಂದ ಹೆಣ್ಣನ್ನು ನೋಡುತ್ತಿದ್ದಾರೆ.ಹುಟ್ಟಿದ ಮಗುವನ್ನು ಬಿಡುತ್ತಿಲ್ಲ  ಅತ್ಯಾಚಾರಿಗಳು. ಆ ಮಗು ಏನು ಪಾಪ  ಮಾಡಿದೆ ಎಂದು ಅತ್ಯಾಚಾರ ಮಾಡುತ್ತಾರೆ. ಎಳೆಯ ಕೂಸು ಅದು .ಹುಟ್ಟಿದ ಮಗುವಿನಿಂದ ಹಿಡಿದು ಮಹಿಳೆಯರ ತನಕ  ಅತ್ಯಾಚಾರ ಎಸಗುತ್ತಿರುವುದು ಶೋಚನೀಯ.




               ರಾಜ್ಯದಲ್ಲಿ  ಪ್ರತಿನಿತ್ಯ ಸುಮಾರು 5-6  ಕ್ಕಿಂತ      ಹೆಚ್ಚು ಅತ್ಯಾಚಾರವಾಗುತ್ತದೆ.ಮಕ್ಕಳನ್ನು ಹಾಗೂ ಮಹಿಳೆಯರನ್ನು ಅಪಹರಣ ಮಾಡಿ ಬೇರೆ ಬೇರೆ ದೇಶಗಳಿಗೆ ಮಾರಿಬಿಡುತ್ತಾರೆ. ಈಗಂತೂ ಹಗಲಿನಲ್ಲೂ ಅತ್ಯಾಚಾರ ನಡೆಯುತ್ತಿದೆ . ಈ ಅತ್ಯಾಚಾರಿಗಳನ್ನುಗಲ್ಲಿಗೇರಿಸಬೇಕು.ಅತ್ಯಾಚಾರವಾದಾಗ 5-6 ದಿನ ಪ್ರತಿಭಟನೆ  ಮಾಡುತ್ತಾರೆ."ನ್ಯಾಯ ನ್ಯಾಯ" ಎಂದು ಕೂಗಿ ಕೂಗಿ ಹೇಳುತ್ತಾರೆ.   ಎಲ್ಲಾ ಮಾಧ್ಯಮಗಳಲ್ಲೂ,ಸುದ್ದಿ ಪತ್ರಿಕೆಗಳಲ್ಲಿ  ಅದೇ ಸುದ್ದಿ" ನ್ಯಾಯ ಸಿಗಬೇಕು ".ಸ್ವಲ್ಪ ದಿನದ ಬಳಿಕ ಎಲ್ಲರೂ ಮರೆತು ಬಿಡುತ್ತಾರೆ. ಆ ಹೆಣ್ಣು ಜೀವಕೆ ಕೊನೆಗೂ ನ್ಯಾಯ ಸಿಗುವುದಿಲ್ಲ. ಇದಕ್ಕೆಲ್ಲಾ ಮುಖ್ಯ  ಕಾರಣ ರಾಜಕೀಯ. ರಾಜಕೀಯದವರು ಅನ್ಯಾಯವಾಗಿರುವ ಕುಟುಂಬದ ಬಗ್ಗೆ ತಲೆಕೆಡಿಸಿಕೊಳ್ಳದೇ,ಕೆಟ್ಟ

ಕೆಲಸಮಾಡಿದ ಅತ್ಯಾಚಾರಿಗೆ(ಅಪರಾಧಿಗೆ) ಸಹಾಯ ಮಾಡುತ್ತಾರೆ.ಲಂಚ ಕೊಟ್ಟು ಆ ಕೇಸನ್ನು ಮುಚ್ಚಿಹಾಕುತ್ತಾರೆ.ಅಪರಾಧಿಗೆ ಶಿಕ್ಷೆ ಕೊಡುವ ಮುನ್ನ ಯಾರು ಅಪರಾಧಿಗೆ ಸಹಾಯ ಮಾಡುತ್ತಾರೋ ಅವರಿಗೆ ಮೊದಲು ಗಲ್ಲಿಗೇರಿಸಬೇಕು.ಅಪರಾಧಿಗೆ ಶಿಕ್ಷೆ  ಕೊಡದಿರುವುದರಿಂದ  ಅವನಿಗೆ ಪಶ್ಚಾತ್ತಾಪದ ಭಾವನೆ 

ಇರುವುದಿಲ್ಲ. ಹಾಗೂ ಅವನು ಮತ್ತಷ್ಟು ಹೆಣ್ಣಿನ ಮೇಲೆ 

ದೌರ್ಜನ್ಯ ಮಾಡುತ್ತಾನೆ.



ಡಾಕ್ಟರ್ ಎಂದರೆ ಮರು ಜೀವ ನೀಡುವವರು ಹಾಗೂ ದೇವರ ಸಮಾನವಾಗಿ ಜನರು ಇವರನ್ನು ಕಾಣುತ್ತಾರೆ.

ಆದರೆ ದುರದೃಷ್ಟವಶಾತ್ ನಮ್ಮ ಜೀವವನ್ನು ಕಾಪಾಡುವ  ಡಾಕ್ಟರ್ ಮೇಲೆಯೇ ಅತ್ಯಾಚಾರ ಮಾಡಿರುವುದು ಕೋಲ್ಕತ್ತಾದಲ್ಲಿ ಕಂಡು ಬಂದಿದೆ.ಮತ್ತು

ಮನೆಗೆ ನುಗ್ಗಿ 2 ವರ್ಷದ  ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾರೆ.ಇವರಿಗೆ  ಶಿಕ್ಷೆ ಆಗಲೇಬೇಕು .

ಇಂತಹ ದುಷ್ಕರ್ಮಿಗಳನ್ನು ಚಿತ್ರಹಿಂಸೆ ನೀಡಿ ಕೊಲ್ಲಬೇಕು.ಒಂದು ವರ್ಷದಲ್ಲಿ 30,000 ಕ್ಕಿಂತ ಹೆಚ್ಚು ಅತ್ಯಾಚಾರಗಳು ನಡೆಯುತ್ತವೆ.ಕೆಲವು ಪ್ರಕರಣಗಳು   ದಾಖಲೆಯಾಗುವುದಕ್ಕಿಂತ ಅಲ್ಲಲ್ಲೇ ಲಂಚಕೊಟ್ಟು  ಕೇಸನ್ನು ಮುಚ್ಚಿ ಹಾಕುವುದೇ ಜಾಸ್ತಿ. ಮೊದಲು  ಹೆಣ್ಣನ್ನು ನೋಡುವ ದೃಷ್ಟಿ ಸರಿ ಇದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಹೆಣ್ಣಿಗೆ ನಾವು ಗೌರವ ಕೊಟ್ಟರೆ ಅವಳೂ ನಮಗೆ ಗೌರವ ಕೊಡುತ್ತಾಳೆ.

ಗಾಂಧೀಜಿ ಹೇಳಿದ್ದರು"ಯಾವಾಗ ರಾತ್ರಿ 12 ಗಂಟೆಗೆ ಒಬ್ಬ ಹೆಣ್ಣು ಮಗಳು ಯಾವುದೇ ಭಯವಿಲ್ಲದೇ ಓಡಾಡುತ್ತಾಳೋ ಆಗ ನಮಗೆ  ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೆ" .ಆದರೆ ಈಗಿನ ಪರಿಸ್ಥಿತಿ ನೋಡಿದರೆ ಗಾಂಧೀಜಿಯ ಕನಸು ಯಾವಾಗ ನನಸಾಗುತ್ತದೆಯೋ

ತಿಳಿಯದು.


                  -ಅರ್ಪಿತಾ ಮರಾಠಿ   M M college   ಪತ್ರಿಕೋಧ್ಯಮ ವಿಭಾಗ ಸಿರ್ಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಅಡಕೆ ಬೀಳದಿರಲಿ ಕೆಳಕ್ಕೆ