ಅಳಿಸುವವರೇ ನಗುವಾಗ ನೀನೇಕೆ ಅಳುವೇ

 

    


                   ನೀನು ಆಳಬೇಕೆಂದು ಆಂದಿರುವ ಮಾತುಗಳನ್ನು ಕೇಳಿಸಿ ನೀನು ಅತ್ತರೆ ಅವರಿಗೆ ನಾವು ಇನ್ನಷ್ಟು ಕೀಳಾಗಿ ಕಾಣುತ್ತೇವೆ ಅದರ ಬದಲಾಗಿ ನೀನು ಅವರ ಮಾತುಗಳನ್ನು ಕೇಳಿಸಿಕೊಂಡು ತಲೆಕೆಡಿಸಿಕೊಳ್ಳದೆ ನಿನ್ನ ಬಗ್ಗೆ ನಿನಗೆ ಗೊತ್ತಿದ್ದರೆ ಸಾಕು ಎಂದು ಮುಂದೆ ಸಾಗಿದರೆ ಯಾವ ಬೇಸರವೂ ನಮ್ಮ ಜೀವನದಲ್ಲಿ ಇರುವುದಿಲ್ಲ 

                    ನಮ್ಮ ಜೀವನದಲ್ಲಿ ಅಲಿಸುವವರೂ ತುಂಬಾ ಜನ ಇರುತ್ತಾರೆ ನಮ್ಮ ಹೆಜ್ಜೆ ಹೆಜ್ಜೆ ಎಲ್ಲೂ ಅಂತವರು ಒಬ್ಬರಾದರು ಸಿಗುತ್ತಾರೆ ಆದರೆ ನಾವು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನ ಹೇಗಿದೆ ಎಂದು ನಮಗೆ ಗೊತ್ತಿದ್ದರೆ ಸಾಕು ನಾವು ಬೇರೆಯವರ ಮುಂದೆ ತಲೆ ಬಗ್ಗಿಡುವ ಅವಶ್ಯಕತೆ ಇಲ್ಲ ನಾವು ಅವರ ಮುಂದೆ ತಲೆ ಬಗ್ಗಿಸಿ ಅಳುತ್ತಾ ನಿಂತರೆ ಅವರು ನಮ್ಮನ್ನು ಅವರ ಚುಚ್ಚು ಮಾತುಗಳಿಂದ ಇನ್ನಷ್ಟು ಅಳಿಸುವರು ಅದೇ ನಾವು ಅವರಿಗೆ ತಲೆ ಎತ್ತ್ತಿ ನಾನೇಕೆ ನಿಮ್ಮ ಮಾತು ಕೇಳಿ ಅಳಬೇಕು ಎಂದು ಅವರಿಗೆ ಎದುರು ಉತ್ತರ ಕೊಟ್ಟರೆ ಅವರು ನಮ್ಮನ್ನು  ಮತ್ತೆ ಅಳಿಸಲು ಪ್ರಯತ್ನಿಸುವುದಿಲ್ಲ ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದಿ ಬುದ್ಧಿ ಹೇಳಲು ನಮ್ಮ ಹೆತ್ತ ತಂದೆ ತಾಯಿ ಮತ್ತು ನಮ್ಮ ಕುಟುಂಬದವರು ಇದ್ದಾರೆ ಇವರ ಒಂದು ಮಾರ್ಗದಲ್ಲಿ ನಾವು ನಡೆದರೆ ನಮ್ಮನ್ನು ಲಿಸುವವರು ಯಾರು ಇರುವುದಿಲ್ಲ ಮತ್ತು ನಾವು ಅಳುವ ಸಂದರ್ಭವೂ ಇರುವುದಿಲ್ಲ ನಮ್ಮ ತಂದೆ ತಾಯಿ ಗೆ ಗೌರವವನ್ನು ಕೊಡಬೇಕು ಆಗ ನಾವು ಎಲ್ಲೂ ತಲೆ ಬಗ್ಗಿಸಲು ಸಾಧ್ಯವಿಲ್ಲ 

                     ನಮ್ಮನ್ನು ಆಲಿಸುವವರ ಮುಂದೆ ನಾವು ಏನೆಂದು ಸಾಧಿಸಿ ತೋರಿಸಬೇಕು ಅವರ ಮುಂದೆ ನಮ್ಮ ವ್ಯಕ್ತಿತ್ವವನ್ನು ನಾವು ಕೀಲಗಿಸಿಕೊಳ್ಳಬಾರದು ನಮ್ಮನ್ನು ನಾವು ಸವಾಲನ್ನ್ನಾಗಿ ತೆಗೆದುಕೊಂಡು ಸಾಧಿಸಿತೋರಿಸಬೇಕು ನಮ್ಮನ್ನು ಹೀಯಾಳಿಸಿ ಆಲಿಸುವವರಿಗೆ ನಾವು ಉತ್ತರವನ್ನು ಕೊಟ್ಟಂತೆ ಆಗುತ್ತದೆ 

                ಆಳಿಸುವವರೂ ನಾವು ಚೆನ್ನಾಗಿದ್ದರೆ ಮಾತನಾಡುತ್ತಾರೆ ಚೆನ್ನಾಗಿಲ್ಲ ಡಿದ್ದರು ಮಾತನಾಡುತ್ತಾರೆ ನಾವು ತಪ್ಪು ಮಾಡಿದರೂ ಮಾತನಾಡುತ್ತಾರೆ ತಪ್ಪು ಮಾಡದೆ ಎದ್ದರು ಮಾತನಾಡುತ್ತಾರೆ ಅವರು ನಮ್ಮನ್ನು ಅಳಿಸಲೆಂದೇ ಕಾಯುತ್ತಾ ಕುಳಿತಿರುತ್ತಾರೆ ಅವರ ಜೀವನದಲ್ಲಿ ಎಷ್ಟೇ ಎದ್ದರು ಅವರು ನಮ್ಮನ್ನು ಅಳಿಸಲು ಪ್ರಯತ್ನಿಸುತ್ತಾರೆ ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಪ್ರಶ್ನಿಸುತ್ತಾರೆ ಪ್ರತಿಯೊಂದನ್ನೂ ಗುರುತಿಸುತ್ತಾರೆ ಬೇರೆಯವರನ್ನು ಅಳಿಸುವುದು ಮತ್ತು ಅವರ ಬಗ್ಗೆ ಮಾತನಾಡುವುದೇ ಅವರ ಜೀವನ ವಾಗಿರುತ್ತದೆ ಅಂತವರು ನಡುವ ನಾವು ಪ್ರತಿಯೊಂದು ಹೆಜ್ಜೆಯನ್ನು ಎಚ್ಚರದಿಂದ ಇಡಬೇಕು ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳ ಬೇಕಾದರೂ ಅವರ ಬಾಯಿಗೆ ಸಿಗಬಾರದು ಹಾಗೆ ಜೀವನವನ್ನು ಮಾಡಬೇಕು

                 ಅವರು ಮಾತನಾಡುವ ಮಾತುಗಳನ್ನು ಮಾತನಾಡಿ ಸುಮ್ಮನಾಗುತ್ತಾರೆ ಆದರೆ ನಮ್ಮ ಮನಸಿಗೆ ಎಷ್ಟು ನೋವಾಯಿತು ಎಂದು ಅವರು ಯೋಚಿಸುವುದಿಲ್ಲ ನಾವು ಅವರ ಮಾತುಗಳನ್ನು ಕೇಳಿಸಿಕೊಂಡು ಅದರ ಬಗ್ಗೆ ಯೋಚಿಸದೆ ಸುಮ್ಮನಿದ್ದರೆ ನಮಗೆ ಅದೇ ಒಂದು ಶಕ್ತಿ ಇಲ್ಲದಿದ್ದರೆ ಅವರು ಇನ್ನು ನಮ್ಮನ್ನು ಅಳಿಸಲು ಪ್ರಯತ್ನಿಸುತ್ತಾರೆ ನಮಗೆ ನಾವೇ ಸಮಾಧಾನ ಮಾಡಿಕೊಳ್ಳುವುದು ತುಂಬಾ ಮುಖ್ಯ 

               ಈ ಮಾತು ಒಂದು ಗಂಡಿನ ಜೀವನಕ್ಕಿಂತ ಒಂದು ಹೆಣ್ಣಿನ ಜೀವನದಲ್ಲಿ ತುಂಬಾ ಪಾತ್ರ ವಹಿಸುತ್ತದೆ ಗಂಡು ಏನೇ ಮಾಡಿದರೂ ಯಾರು ಅವರ ಬಗ್ಗೆ ಏನು ಮಾತನಾಡುವುದಿಲ್ಲ ಅವರಿಗೆ ಯಾರು ಏನು ಹೇಳುವುದಿಲ್ಲ ಅದೇ ಒಂದು ಹೆಣ್ಣು ಅವಳು ಏನು ಮಾಡಿದರೂ ತುಂಬಾ ಜನ ಅವಳ ಬಗ್ಗೆ ಮಾತನಾಡುತ್ತಾರೆ ಅವಳ ಒಂದಂದು ಹೆಜ್ಜೆಯನ್ನೂ ಗಮನಿಸುತ್ತಾರೆ ಅವಳನ್ನು ಅಳಿಸಲೆಂದೆ ತುಂಬಾ ಜನ ಕಾಯುತ್ತಾರೆ ಒಂದು ಹೆಣ್ಣು ಅವಳನ್ನು ಅಲಿಸುವವರ ಮುಂದೆ ತುಂಬಾ ಎಚ್ಚರವಾಗಿ ಇ ರಬೇಕು ಅವರ ಮುಂದೆ  ಅವಳು ಸಾಧಿಸಿ ತೋರಿಸಿದ್ದಾರೆ ಅವಳಿಗೆ ಒಂದು ಗೌರವ ಸಿಗುವುದು

                 ಅದಕ್ಕಾಗಿ ಅಲಿಸುವವರಿಗೆ ನಾವು ಇನ್ನಷ್ಟು ಮಾತನಾಡಲು ಅವಕಾಶ ಮಾಡಿಕೊಡಬಾರದು ಮತ್ತು ಅವರ ಮುಂದೆ ತಲೆ ತಗ್ಗಿಸಿ ಅಳುತ್ತಾ ನಿಂತು ಕೊಳ್ಳಬಾರದು ಆದರೆ ಅವರೇ ನಗುವಾಗ ನಾವು ಅಳಬಾರದು 


                                       ಭೂಮಿಕಾ 

ಎಂಇಎಸ್ ಕಾಲೇಜು   ಪತ್ರಿಕೋದ್ಯಮ ವಿಭಾಗ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಅಡಕೆ ಬೀಳದಿರಲಿ ಕೆಳಕ್ಕೆ