ಆಕೆ ಮಹಾತ್ಮನ ಮಗಳು
ಮಹಾತ್ಮ ಗಾಂಧಿ ಅವರಿಗೆ ಕರ್ನಾಟಕದಲ್ಲಿ ಒಬ್ಬ ಮಗಳಿದ್ದಳು ಅಂತ ಹೇಳಿದರೆ ನಿಮಗೆ ಆಶ್ಚರ್ಯ ಅನ್ನಿಸಬಹುದು.ಆಕೆ ಹಾಗೂ ಮಹಾತ್ಮನ ಸಂಬಂಧ ಎಷ್ಟು ಗಾಢವಾಗಿತ್ತು ಅಂದ್ರೆ ಮಹಾತ್ಮನ ಮರಣದ ನಂತರ ಅವರ ಅಸ್ತಿ ಕರ್ನಾಟಕದ ಹಾವೇರಿಗೆ ಬರುತ್ತದೆ ಅದನ್ನು ಅಲ್ಲಿ ಇವತ್ತಿಗೂ ಪೂಜಿಸಲಾಗುತ್ತಿದೆ. ಆ ಮಗಳ ಹೆಸರು ಸಂಗೂರ ವೀರಮ್ಮ ಇನ್ನೂ ಇಡೀ ದೇಶ ಗಾಂಧೀಜಿಯನ್ನ ಬಾಪು ಅಂತಲೂ ಮಹಾತ್ಮ ಅಂತಲೂ ಕರೆದರೆ ಹಾವೇರಿ ಜಿಲ್ಲೆಗೆ ಮಾತ್ರ ಅವರನ್ನು ಮಾವ ಅಂತ ಕರೆಯುವ ಹಕ್ಕು ಅಧಿಕಾರಿ ಅಧಿಕಾರಗಳೆರಡು ಇವೆ ಅದಕ್ಕೆ ಕಾರಣ ಕೂಡ ವೀರಮ್ಮ ತಾಯಿನೇ.
26 ಮೇ 1924 ರಂದು ಶಿರಸಿಯ ದಲಿತ ಕುಟುಂಬದಲ್ಲಿ ಜನಿಸಿದ ವೀರಮ್ಮನ ಮಹಾತ್ಮ ಗಾಂಧಿ ದತ್ತುಮಗಳಾಗಿಸಿಕೊಂಡಿದ್ದು ಒಂದು ಸ್ವಾರಸ್ಯಕರ ವಿಷಯ 1934ಕ್ಕೆ ಮಹಾತ್ಮ ಗಾಂಧಿಯವರು ಶಿರಸಿಗೆ ಬಂದಾಗ ಅವರನ್ನು ದಲಿತ ಬಾಲಕಿಯೊಬ್ಬಳು ಮಾತನಾಡಿಸುತ್ತಾಳೆ ಆಕೆಯ ಚುರುಕು ಕಣ್ಣುಗಳು ಬುದ್ಧಿವಂತಿಕೆ ಮಹಾತ್ಮ ಗಾಂಧಿಯನ್ನು ಆಕರ್ಷಿಸಿದವು ಆಕೆ ಬಗ್ಗೆ ವಿಚಾರಿಸಿದ ಗಾಂಧೀಜಿ ಆ ದಲಿತ ಬಾಲಕಿಯನ್ನು ದತ್ತು ಪಡೆದು ಗುಜರಾತಿನ ಸಾಬರಮತಿ ಆಶ್ರಮಕ್ಕೆ ಕರೆಯೊಯ್ದರು.
ಆಶ್ರಮದಲ್ಲಿಯೇ ಬೆಳೆದ ವೀರಮ್ಮ ಗಾಂಧಿ ಹಾಗೂ ಕಸ್ತೂರಿಬಾ ಅವರ ಪ್ರೀತಿಯ ಮಗಳೇ ಆಗಿದ್ದಳು ಅದು ಸ್ವಾತಂತ್ರ್ಯ ಹೋರಾಟದ ಸಮಯ ಸಬರಮತಿ ಆಶ್ರಮ ಕೇಳ ಬೇಕಾ ಸದಾ ಹೋರಾಟಗಾರರು ಗಾಂಧಿ ಅನುಯಾಯಿಗಳು ಕಾಂಗ್ರೆಸ್ ನಾಯಕರಿಂದ ಗಿಜಿಗುಡುತ್ತ ಇರುತ್ತಿತ್ತು. ಅಲ್ಲಿಗೆ ಬಂದವರ ಊಟ ಉಪಚಾರದ ವ್ಯವಸ್ಥೆಗಳ ಜವಾಬ್ದಾರಿ ವೀರಮ್ಮ ನೋಡಿಕೊಳ್ಳುತ್ತಿದ್ದರು ಹೀಗೆ ಹಲವು ರಾಷ್ಟ್ರ ನಾಯಕರಿಗೆ ಚಿರಪರಿಚಿತ ಮಹಿಳೆ ವೀರಮ್ಮ.
01 ಮಾರ್ಚ್ 1934 ರಂದು ಹಾವೇರಿಗೆ ಮಹಾತ್ಮ ಗಾಂಧಿಯವರು ಭೇಟಿ ನೀಡಿದಾಗ ಅವರಿಂದ ಪ್ರಭಾವಿತರಾಗಿದ್ದ ಸಂಗೂರು ಕರಿಯಪ್ಪನವರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದರು ಹುಬ್ಬಳ್ಳಿಯ ಹರಿಜನ ಸೇವಕ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಗೂರಿನ ಕರಿಯಪ್ಪ ಎರೇಶಿಮೆಯವರನ್ನು ಗಾಂಧಿಯವರು ಸಬರಮತಿ ಆಶ್ರಮಕ್ಕೆ ಕರೆದು ವೀರಮ್ಮಳ ಮದುವೆ ವಿಷಯ ಪ್ರಸ್ತಾಪಿಸುತ್ತಾರೆ.1940 ರಂದು ಮಹಾತ್ಮನ ಈ ಮಗಳ ವಿವಾಹ ಸಂಗೂರಿನ ಕರಿಯಪ್ಪ ಎರೇಶಿಮೆ ಅವರೊಂದಿಗೆ ನೆರವೇರಿತು ಮುಂದೆ ಈ ನವ ಜೋಡಿ ಸಂಗೂರಿಗೆ ಬಂದು ವಾಸ ಮಾಡಲು ಪ್ರಾರಂಭಿಸಿದರು ಗಾಂಧೀಜಿಯವರ ಪ್ರೇರಣೆಯಂತೆ ಹರಿಜನರಿಗಾಗಿ ಆಶ್ರಮ ಪ್ರಾರಂಭಿಸಿದರು ಸ್ವಾತಂತ್ರ್ಯ ಹೋರಾಟದಲ್ಲಿ ಕರಿಯಪ್ಪನವರು ಜೈಲಿವಾಸ ಅನುಭವಿಸಿದಾಗ ವೀರಮ್ಮ ಮಕ್ಕಳನ್ನು ಸಾಕುವುದರಿಂದ ಹೋರಾಟಗಾರರಿಗೆ ಉತ್ಸಾಹ ತುಂಬುತ್ತಿದ್ದರು.
ಮಹಾತ್ಮ ಹಾಗೂ ವೀರಮ್ಮನ ನಡುವೆ ನಿರಂತರ ಪತ್ರ ವ್ಯವಹಾರ ಇತ್ತು ವೀರಮ್ಮನವರು 12 ಮೇ 1992 ರಂದು ದೈವಾಧೀನರಾದರು..ಈ ಅವ್ವನ ಬಗ್ಗೆ ನಮಗೆ ಶಾಲೆಗಳಲ್ಲಿ ತಿಳಿಸದೆ ಉಳಿದದ್ದು ಇತಿಹಾಸದ ವೆಂಗ್ಯವಲ್ಲವೇ ಆ ತಾಯಿಗೆ ತಲೆಬಾಗಿ ನಮಿಸೋಣ ಸದಾ ನೆನಪಿನಲ್ಲಿಟ್ಟುಕೊಳ್ಳೋಣ.
ಬಸವರಾಜ ಪಾಟೀಲ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ