ಭೂಮಿಯಿಂದ ಸೂರ್ಯ ಬಹಳಷ್ಟು ದೂರವಿದ್ದಾನೆ ಆದರೆ ನಮ್ಮ ಆಲೋಚನೆ ಪ್ರಕಾರ ತೆಂಗಿನಮರದ ಹಾಗೆ ಎತ್ತರವಿರುವ ಅದರ ತುತ್ತ ತುದಿಯಲ್ಲಿ ಹಲವಾರು ಕಾಯಿಗಳ ಸಮೂಹವಿದೆ ಆದರೆ ತೆಂಗಿನ ಮರಕ್ಕಿಂತ ಸ್ವಲ್ಪ ಕಿರಿದಾಗಿ ನಮ್ಮ ಮುಂದಕ್ಕೆ ಕೈಹಿಡಿದು, ಕರೆದುಕೊಂಡು ಹೋಗುವುದೇ ಬೀದಿ ದೀಪ
ಬೀದಿ ದೀಪದ ಕಂಬವು ಅನೇಕ ತಂತಿಗಳಿದ ಸುತ್ತಿಕೊಂಡು ಕೆಲವು ತಂತಿಗಳು ಅನೇಕ ಮನೆಗಳಿಗೆ ಸಹಕರಿಸಿ ವಿದ್ಯುತ್ತನ್ನು ಪೂರೈಸುವ ಮೂಲಕ ಮನೆ ಬೆಳಗುತ್ತಿದೆ ಜನರು ಸೂರ್ಯನ ಹತ್ತಿರ ಹೋಗುವುದು ಒಂದು ಹಾಸ್ಯಸ್ಪದ ಮಾತಾಗಿದೆ ಬೀದಿ ದೀಪವನ್ನು ನೋಡಿ ಸೂರ್ಯನಂತೆ ಕಲ್ಪಿಸಿಕೊಂಡರೆ ಮಾನವನ ಬುದ್ಧಿವಂತಿಕೆಯನ್ನು ತೋರಿಸುತ್ತದೆ ಒಂದು ಕ್ಷಣ ನಾವು ಯೋಚಿಸೋಣ ಬೀದಿ ದೀಪಗಳ ಒಂದು ವಿಷಯವಿಲ್ಲದಿದ್ದರೆ ಎಷ್ಟು ಸಾವು ನೋವು ಸಂಭವಿಸುವುದು ಎಂದು ಪ್ರತಿಯೊಂದು ಕೆಲಸದಲ್ಲಿ ವಿದ್ಯುತ್ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿದೆ ಪ್ರತಿಯೊಂದು ಬೀದಿ ದೀಪವು ಹೋಗುವರಿಗೆ ಮಾರ್ಗಸೂಚಿಯಾಗಿದೆ ವಿವಿಧ ಕಾರ್ಯ ಮತ್ತು ಚಟುವಟಿಕೆಗಳಲ್ಲಿ ಬೀದಿದೀಪವು ಅನಿವಾರ್ಯವಾಗಿದೆ ಪಂದ್ಯಾವಳಿಗಳಲ್ಲಿ ಮನೋರಂಜನ ಕಾರ್ಯಕ್ರಮದಲ್ಲಿ ಅಗತ್ಯವಾಗಿದೆ ಬೀದಿ ದೀಪದ ಮೂಲವಾದ ವಿದ್ಯುತ್ ಉತ್ಪಾದನೆ ಮತ್ತು ರಫ್ತಿನಲ್ಲಿ ಅನೇಕ ಬದಲಾವಣೆಯಾದರೆ ಕೈಗೊಂಡಂತ ಕಾರ್ಯಗಳು ಸ್ಥಗಿತಗೊಳ್ಳುವುದು ನಾವು ಗಮನಿಸಬಹುದು ರಸ್ತೆಯಲ್ಲಿ ರಾತ್ರಿ ನಡೆದಾಡುವವರಿಗೆ ಅತ್ಯುತ್ತಮವಾದ ಸಾಧನವಾಗಿದೆ ಹಾಗೆ ಯಾವುದೇ ಪಕ್ಷಿ ಲೈನ್ ಮೇಲೆ ಕುಳಿತುಕೊಂಡು ತನ್ನ ರೆಕ್ಕೆ ಯನ್ನು ತಾಗಿಸಿದರೆ ಪಕ್ಷಿಯ ಜೀವ ಒಂದು ಸೆಕೆಂಡ್ ಗೆ ಹೋಗುತ್ತದೆ ಹಾಗೂ ಮನುಷ್ಯನ ಜೀವನ ಕೂಡ ಇದೇ ರೀತಿ ಹಾರಿಹೋಗುತ್ತದೆ ಎಲ್ಲರಿಗೂ ಎಚ್ಚರಿಕೆ ವಿಚಾರ ಮಳೆಗಾಲದಲ್ಲಿ ಬೀದಿ ದೀಪದ ಕಂಬದ ಹತ್ತಿರ ಹೋಗುವುದು ತಡೆಗಟ್ಟಬೇಕು ಬೀದಿ ದೀಪವನ್ನು 2ನೇ ಚಂದಿರ ಎಂದರು ತಪ್ಪಾಗಲಾರದ ಪ್ರಪಂಚಕ್ಕೆ ತಿಂಗಳ ಬೆಳಕು ಕೊಡುವನು ಚಂದಿರ ಹಾಗೆ ಗಾತ್ರದಲ್ಲಿ ಚಿಕ್ಕದಾದರೂ ತನ್ನ ಕಾರ್ಯ ವ್ಯಾಪ್ತಿಗೆ ತಕ್ಕಂತೆ ಬೆಳಕು ನೀಡುತ್ತದೆ ಹಳ್ಳಿಗಳಲ್ಲಿ ಬೀದಿ ದೀಪವು ಅತ್ಯಂತ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ ಕಾಡು ಪ್ರಾಣಿಗಳಲ್ಲಿ ಪ್ರಾಣಿಗಳ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ ಆದ ಕಾರಣ ತಮ್ಮನ್ನು ಹಾಗೂ ಇತರರನ್ನು ರಕ್ಷಿಸಲು ಪ್ರಮುಖವಾಗಿದೆ. ಈ ಬೀದಿ ದೀಪವು ಭಾರತರತ್ನ ಪಡೆದ ಸರ್ ವಿಶ್ವೇಶ್ವರಯ್ಯ ಕೂಡ ದಾರಿದೀಪವಾಗಿತ್ತು ಎಂಬುದು ಒಂದು ಪ್ರೇರಣೆಯ ಕಥೆಯಾಗಿದೆ ಕತ್ತಲು ಕ್ರಮೇಣವಾಗಿ ಆಕ್ರಮಿಸುತ್ತಿರುವಾಗ ಬೀದಿ ದೀಪವು ತನ್ನ ಬೆಳಕನ್ನು ರಸ್ತೆಯ ಮೇಲೆ ಹರಡುತ್ತದೆ ಈ ರೀತಿ ಯಾವುದೇ ಒಂದು ಊರಿನ ಅಥವಾ ಗ್ರಾಮದ ಸೌಂದರ್ಯವನ್ನು ಬಿಂಬಿಸುವ ಕೇಂದ್ರಬಿಂದುವಾಗಿದೆ ಬೀದಿ ದೀಪವು ಒಂದು ರೀತಿಯ ಮನೋರಂಜನೆಯ ತಾಣವಾಗಿದೆ ಎಂದರು ತಪ್ಪಾಗಲಾರದು ಚಿಕ್ಕ ಮಕ್ಕಳು ದೀಪಕ್ಕೆ ಕಲ್ಲನ್ನು ಎಸೆಯುವದರ ಮೂಲಕ ಸಂತೋಷಕ್ಕೆ ಒಳಗಾಗುವುದು ಹಾಗೆ ಬೀದಿ ದೀಪದ ಸುತ್ತ ಕೀಟಗಳ ತುಂಟಾಟವನ್ನು ನಾವು ಗಮನಿಸಬಹುದು
ಪತ್ರಿಕೋದ್ಯಮ ವಿಭಾಗ
ಕಿಶೋರ್ ಜೆ ಅಪ್ಪಿನ ಬೈಲ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ