"__ನಮ್ಮ  ಕಲೆ  ಯಕ್ಷಗಾನ__"


ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣ ಗಳನ್ನು ಒಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆಯೇ ಯಕ್ಷಗಾನ .  

                                      ಯಕ್ಷಗಾನವು ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳನ್ನು ಪ್ರಸ್ತುತಪಡಿಸುವ ಒಂದು ನಾಟಕೀಯ ರೂಪವಾಗಿದೆ.ಇದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ  ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.ಇದರಲ್ಲಿ ಎರಡು ಪ್ರಕಾರಗಳಿವೆ.ಒಂದು ತೆಂಕುತಿಟ್ಟು ಇದು ದಕ್ಷಿಣ ಕನ್ನಡದಿಂದ ತುಳುನಾಡು ಪ್ರದೇಶದ ಕಾಸರಗೋಡಿನವರೆಗೆ ಯಕ್ಷಗಾನದ ರೂಪವನ್ನು ತೆಂಕುತಿಟ್ಟು ಎನ್ನುವರು.ಮತ್ತು ಎರಡನೆಯದು ಬಡಗುತಿಟ್ಟು ಇದು ಉಡುಪಿಯಿಂದ ಉತ್ತರ ಕನ್ನಡದವರೆಗೆ ಬಡಗುತಿಟ್ಟು ಎನ್ನುವರು.ಈ ಎರಡು ಪ್ರಕಾರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಈ ಕಲೆಯು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದೇ ನಮ್ಮ ಹೆಮ್ಮೆ. 

                                       ಯಕ್ಷಗಾನದ ಪ್ರಮುಖ ಅಂಶಗಳು:–

    1) ಪ್ರಸಂಗ:   ಯಕ್ಷಗಾನದಲ್ಲಿ ಯಾವುದಾದರೂ ಒಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು ಅಭಿನಯ ನೃತ್ಯಗಳೊಂದಿಗೆ ಆಡಿ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯಲಾಗಿದೆ. ಇದು ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಳ್ಳುತ್ತಾರೆ.


 2)ಪಾತ್ರಧಾರಿಗಳು:   ಪ್ರಸಂಗದಲ್ಲಿ ಬರುವ ಕಥೆಗಳನ್ನು ಅಭಿನಯಿಸುವವರೇ ಪಾತ್ರಧಾರಿಗಳು.ಸ್ತ್ರೀ ಪಾತ್ರ,ಖಳ ನಟನ ಪಾತ್ರ,ಹಾಸ್ಯ ಪಾತ್ರ,ನಾಯಕನ ಪಾತ್ರ ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. 

                     3)ವೇಷಭೂಷಣ: ಯಕ್ಷಗಾನದ ಪ್ರಮುಖ ಪ್ರಭೇದಗಳಲ್ಲಿ ಒಂದಾದ ಬಯಲಾಟ ದಲ್ಲಿ ವೇಷಭೂಷಣವು ಪ್ರಮುಖವಾದದ್ದು.ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಪ್ರಮುಖ ಖಳ ನಟ ಮತ್ತು  ರಾಜನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಕ್ಕಿಂತ ವಿಭಿನ್ನವಾಗಿರುತ್ತದೆ. ಸ್ತ್ರೀ ಪಾತ್ರಗಳ ಕಿರೀಟವು ಚಿಕ್ಕದಾಗಿರುತ್ತದೆ.ಅಲ್ಲದೆ ತೆಂಕುತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣಗಳು ಬಡಗುತಿಟ್ಟಿನ ಉಪಯೋಗಿಸುವ ವೇಷ ಭೂಷಣಗಳಿಗಿಂತ ವಿಭಿನ್ನವಾಗಿರುತ್ತದೆ.

   4)ಭಾಗವತಿಗೆ: 

ಯಕ್ಷಗಾನದ ಜೀವಾಳವೇ ಭಾಗವತಿಗೆ ಅಥವಾ ಹಾಡುಗಾರಿಕೆ ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ.ಹೀಗೆ ಹಾಡುವವರನ್ನು ಭಾಗವತರು ಎನ್ನುವರು. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ಅಭಿನಯಿಸುತ್ತಾರೆ. 



   5)ಮಾತುಗಾರಿಕೆ:  ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಆಡುಮಾತಿನಲ್ಲಿ ಸಂಭಾಷಿಸುತ್ತಾರೆ. 


   6)ಯಕ್ಷಗಾನದ ಪ್ರಮುಖ ಪಾತ್ರಧಾರಿಗಳು:   ಸುಬ್ರಮಣ್ಯ ಚಿಟ್ಟಾಣಿ, ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರು, ಕೊಂಡದ್ಕೊಳಿ ರಾಮಚಂದ್ರ ಹೆಗಡೆ, ಸುಬ್ರಮಣ್ಯ ಯಲಗುಪ್ಪ, ನೀಲಗೋಡು ಶಂಕರ್ ಹೆಗಡೆ,ಇತ್ಯಾದಿ

                

7)ಪ್ರಮುಖ ಭಾಗವತರು:  ಸುಬ್ರಹ್ಮಣ್ಯ ಧಾರೇಶ್ವರ, ರಾಘವೇಂದ್ರ ಆಚಾರ್ಯ, ಕೊಳಗಿ ಕೇಶವ ಹೆಗಡೆ, ಕಾವ್ಯಶ್ರೀ ಅಜೇರು, ಇತ್ಯಾದಿ. 


    8)ಪ್ರಮುಖ ಯಕ್ಷಗಾನದ ಮೇಳಗಳು: ಪೇರಡೂರು ಮೇಳ,  ಕಮಲೇಶಿಲೆ ಮೇಳ,ಸಾಲಿಗ್ರಾಮ ಮೇಳ,ಧರ್ಮಸ್ಥಳ ಮೇಳ,ಮಂದಾರ್ತಿ ಮೇಳ ,ಸಿಗಂದೂರು ಮೇಳ. ಇತ್ಯಾದಿ.

             ಇವು ಇಷ್ಟು ಯಕ್ಷಗಾನದ ಕಿರುಪರಿಚಯ ಆಗಿದೆ.

                      "ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ"


                                         


–ಸುಬ್ರಹ್ಮಣ್ಯ ಗೌಡ


ಪತ್ರಿಕೋದ್ಯಮ ವಿಭಾಗ,


ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಗುಡಿಗಾರ ಸಮಾಜ