*ಗುರಿ ಇಲ್ಲದ ವಿದ್ಯಾರ್ಥಿ ಜೀವನ ನಿಯಂತ್ರಿಸಲು ಹಾಸ್ಟೆಲ್ ಉತ್ತಮ ದಾರಿ:*
ದಿನೇ ದಿನೇ ನಮ್ಮ ಶಿಕ್ಷಣ ಜಗತ್ತು ಬದಲಾವಣೆಯಾಗುವ ಹಾಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಂಬಲಿಸುತ್ತ ದೂರದ ಊರಿಗೆ ಪಯಣ ಬೆಳೆಸುತ್ತಿದ್ದಾರೆ ಶಿಕ್ಷಣವು ವಿದ್ಯಾರ್ಥಿ ಜೀವನದ ಹೊಸ ತಿರುವನ್ನುಕೊಡುತ್ತಿದೆ ದೂರದ ಊರಿಗೆ ಹೋದಾಗ ಹಾಸ್ಟೆಲ ಎಂಬುದು ಎಲ್ಲರಿಗೂ ಅನಿವಾರ್ಯವಾಗುತ್ತದೆ ಹಾಸ್ಟೆಲ್ ಗಳಿಗೆ ಮಕ್ಕಳನ್ನು ಸೇರಿಸುವಾಗ ಪೋಷಕರು ಹೆಚ್ಚಾದ ಆತಂಕ ಪಡುತ್ತಾರೆ ಕಾರಣ ಏನೆಂದರೆ ಅಲ್ಲಿ ಅಪ್ಪ ಅಮ್ಮ ಮತ್ತು ಸಹೋದರರ ಪ್ರೀತಿ ಸಿಗುವುದಿಲ್ಲ ಎಂಬ ಆತಂಕ ಹಾಗೂ ಇಷ್ಟವಾದ ಆಹಾರ ಸಿಗುವುದಿಲ್ಲ ಸರಿಯಾದ ಪಾಲನೆ ಸಿಗುವುದಿಲ್ಲ ಇದರ ಜೊತೆಗೆ ಹಬ್ಬ ಹರಿದಿನ ಬಂದರೆ ಮಕ್ಕಳು ಮನೆಗೆ ಬರುವುದಿಲ್ಲ ಹಾಗಾಗಿ ಕೆಲ ಪೋಷಕರು ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂಜರಿಯುತ್ತಾರೆ, ಆದರೆ ಹಾಸ್ಟೆಲ್ ಗೆ ಹೂಕ್ಕ ಮೇಲೆ ಅಲ್ಲಿನ ನೀತಿ ನಿರೂಪಣೆ ತಕ್ಕಂತೆ ನಡೆದುಕೊಂಡಲ್ಲಿ ಮನೆಯಿಂದ ಸಿಗುವ ಮೌಲ್ಯಗಳು ಜೊತೆಗೆ ಸ್ವಾಲಂಬಿ ಬದುಕು ಸಹ ಬಾಳ್ವೆ ಮೊದಲಾದ ಜೀವನ ರೂಪಿಸುವ ಮೌಲ್ಯಗಳು ದೊರೆಯುತ್ತದೆ ಅನ್ನುವುದು ಅಷ್ಟೇ ಸತ್ಯ.
ಮನೆಯಲ್ಲಿ ಅಪ್ಪ ಅಮ್ಮನ ಶಿಸ್ತಿನ ಗರಡಿಯಲ್ಲಿ ಇರುವ ಮಕ್ಕಳು ಒಮ್ಮೊಮ್ಮೆ ಯಾಮಾರಿಸಿ ತನ್ನಿಷ್ಟದಂತೆ ನಡೆಯುವುದುಂಟು ಆದರೆ ಹಾಸ್ಟೆಲ್ ನಲ್ಲಿ ಆ ತರಹ ಮಾಡುವುದು ಅಷ್ಟು ಸುಲಭವಲ್ಲ. ಆರಂಭದ ದಿನಗಳಲ್ಲಿ ಕೊಂಚ ಕಷ್ಟ ಅನಿಸಿದರೆ ಅದನ್ನು ಸಹಿಸಿಕೊಂಡು ನಿಂತರೆ, ಅದರಿಂದ ಸಿಗುವ ಲಾಭ ಅಧಿಕ ನಾವು ಬೆಳಗ್ಗೆ ಸಮಯದಿಂದ ಹಿಡಿದು ರಾತ್ರಿ ನಿದ್ದೆ ಜಾರುವವರಿಗೆ ನಮ್ಮ ಜೀವನವನ್ನು ನಾವೇ ನಿರೂಪಿಸುವ ಪಾಠ ಕಲಿಸುತ್ತದೆ. ನಮ್ಮ ಜವಾಬ್ದಾರಿಗಳನ್ನು ನಾವೇ ಪಾಲಿಸುವುದು ಸಮಯಕ್ಕೆ ತಕ್ಕ ಬೆಲೆ ಕೊಡುವುದು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮತ್ತು ದೈನಂದಿನ ಕಾರ್ಯಗಳನ್ನು ಮುಗಿಸುವ ಹೊಸ ಅಧ್ಯಯನವನ್ನೇ ಹೊಸ ರೂಪದಲ್ಲಿ ನಾವೇ ನಿರೂಪಣೆ ಮಾಡುವ ಹಾಗೆ ನಮಗೆ ಕಲಿಸುತ್ತದೆ. ನಮಗೆ ಸಂಬಂಧಿಸಿದ ಕೆಲಸಗಳು ನಾವೇ ಮಾಡಿಕೊಳ್ಳಬೇಕು. ಮತ್ತು ಸ್ವಚ್ಛತೆಯ ಬದುಕನ್ನ ನಾವು ಸಾಗಿಸಬೇಕು ಎಂಬ ಮುಖ್ಯ ಅಂಶಗಳನ್ನು ನಮ್ಮ ತಲೆಯಲ್ಲಿ ಅಳಿಸದ ಹಾಗೆ ಉಳಿಸುತ್ತದೆ. ನಮ್ಮ ಜೀವನದಲ್ಲಿ ಒಂದು ಮಾರ್ಗಸೂಚಿ ಹಾಕಿಕೊಂಡು ನಮ್ಮ ಜೀವನವನ್ನು ನಾವೇ ನಿರ್ಮಿಸುವ ಅಧಿಕಾರವನ್ನು ಈ ಹಾಸ್ಟೆಲ್ ಎಂಬುದು ನಮಗೆ ಕಲಿಸುತ್ತದೆ. ಗೊತ್ತು ಗುರಿ ಇಲ್ಲದ ಟೈಮ್ ಟೇಬಲ್ ಅನ್ನು ಹಾಕಿಕೊಂಡು ಒಂದೇ ರೂಮಿನಲ್ಲಿ ಆರು ಜನ ಸೇರಿಕೊಂಡು ಆ ಟೈಮ್ ಟೇಬಲ್ ಅನ್ನು ಪಾಲಿಸುವ ಸೂಚನೆಯನ್ನು ನೀಡುತ್ತಿರುತ್ತದೆ.
ಹಾಸ್ಟೆಲ್ ನಲ್ಲಿ ಜಾತಿ, ಧರ್ಮ, ಬಡವ, ಶ್ರೀಮಂತ, ಎಂಬ ಹಂಗಿಲ್ಲ ಇಲ್ಲಿ ಎಲ್ಲರೂ ಒಂದೇ, ದುಃಖವಾದಾಗ ಸಂತೈಸುವ ಸಂತಸ ವಾದಾಗ ಹಂಚಿಕೊಳ್ಳುವ ಕಷ್ಟ ಬಂದಾಗ ಪರಸ್ಪರ ಜೊತೆಯಾಗುವ ಸಹ ಬಾಳ್ವೆಯ ಪಾಠವಿಲಿದೆ ಪ್ರತಿದಿನ ಎಲ್ಲರೂ ಒಂದೇ ತರಹದ ಊಟ ಆಹಾರ ಸೇವಿಸಬೇಕು ಇವೆಲ್ಲವೂ ಹಂಚಿಕೊಂಡು ಬದುಕಲು ಸಿಗುವ ಪ್ರೇರಣೆಗಳು ಗುಂಪು ಸ್ಟಡಿ ಇಕೋ ಕ್ಲಬ್ ವಿಶೇಷ ದಿನಗಳಲ್ಲಿ ಕಾರ್ಯಕ್ರಮ.
ಒಟ್ಟಾರಿಯಾಗಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನನ್ಯ ಅನುಭವಗಳನ್ನು ನೀಡುತ್ತದೆ. ಇದು ಅವರ ವ್ಯಕ್ತಿತ್ವವನ್ನ ರೂಪಿಸಲು ಹೊಸ ಸ್ನೇಹ ಗಳನ್ನು ನಿರ್ಮಿಸಲು ಮತ್ತು ಶಿಕ್ಷಣದಲ್ಲಿ ಯಶಸ್ವಿಯಾಗಲು ನೆರವಾಗುತ್ತದೆ ಹೀಗಾಗಿ ಹಾಸ್ಟೆಲ್ ಜೀವನವನ್ನು ಕೇವಲ ನಿರಂತರ ಅಧ್ಯಯನದ ಸ್ಥಳವಲ್ಲ ಅದು ಜೀವನದ ನಿಜವಾದ ಪಾಠಗಳನ್ನು ಕಲಿಯುವ ವೇದಿಕೆ.
ವಿನಾಯಕ ಪಾಟೀಲ
B A ಪ್ರಥಮ ವರ್ಷ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ