“ಹೋರಿ ಹಬ್ಬ”
ಹೋರಿ ಹಬ್ಬ, ಹಟ್ಟಿ ಹಬ್ಬ, ಅಥವಾ ಕೊಬ್ಬರಿ ಹೋರಿ ಸ್ಪರ್ಧೆಯು ಒಂದು ಗ್ರಾಮೀಣ ಕ್ರೀಡೆಯಾಗಿದ್ದು, ಇದರಲ್ಲಿ ನೂರಾರು ತರಬೇತಿ ಪಡೆದ ಮತ್ತು ಅಲಂಕರಿಸಿದ ರಾಸುಗಳು ಮತ್ತು ಗೂಳಿಗಳನ್ನು ಭಾರಿ ಜನಸಂದಣಿಯ ನಡುವೆ ಓಡಿಸಲಾಗುತ್ತದೆ . ಈ ಗೂಳಿಗಳ ಕೊರಳಿಗೆ ಕೊಬ್ಬರಿ ಗಳನ್ನು ಕಟ್ಟಲಾಗಿರುತ್ತದೆ. ಗೂಳಿ ಹಿಡಿಯುವವರು , ಈ ಗೂಳಿಯ ಕೊರಳಲ್ಲಿ ಇರುವ ಕೊಬ್ಬರಿಯನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಕ್ರೀಡೆಯನ್ನು ಮುಖ್ಯವಾಗಿ ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ.ನಮ್ಮ ಹಾವೇರಿ ಜೆಲ್ಲೆಯನು ಹೋರಿಹಬ್ಬದ ತ್ತವರೂರು ಎಂದು ಕರೆಯುತ್ತಾರೆ.
ಹೋರಿಗಳ ಮಾಲೀಕರು ಋತುವಿನ ಮುಂಚೆಯೇ ಅವುಗಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಅವುಗಳನ್ನು ಹೋರಿಹಬ್ಬಕ್ಕಾಗಿ ತಯಾರು ಮಾಡುತ್ತಾರೆ. ಅವರು ಅವುಗಳನ್ನು ಮುದ್ದಿಸುತ್ತಾರೆ, ಅವುಗಳನ್ನು ತಂಪಾಗಿರಿಸಲು ನಿಯಮಿತವಾಗಿ ಸ್ನಾನವನ್ನು ಮಾಡಿಸುತ್ತಾರೆ.ಇದರಿಂದಾಗಿ ಗೂಳಿಗಳು ನಿಸ್ಸಂದೇಹವಾಗಿ, ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತವೆ. ಹತ್ತಿರದ ಪ್ರದೇಶಗಳ ಮಾಲೀಕರು ಎತ್ತುಗಳನ್ನು ನಿಯಮಿತವಾಗಿ ಓಡಿಸುವ ಮೂಲಕ ನಿಜವಾದ ಅಖಾಡದ ಓಟಕ್ಕೆ ತರಬೇತಿ ನೀಡುತ್ತಾರೆಯಾವುದೇ ಎರಡು ಜಾನುವಾರುಗಳನ್ನು ಸಾಕಷ್ಟು ಸಮಯದ ಮಧ್ಯಂತರದೊಂದಿಗೆ ಪೂರ್ವನಿರ್ಧರಿತ ಅಖಾಡದಲ್ಲಿ ಒಂದೊಂದಾಗಿ ಓಡುವಂತೆ ಪ್ರೆರೇಪಿಸಲಾಗುತ್ತದೆ. ಗೂಳಿ ಗೆಲ್ಲಬೇಕಾದರೆ ಅದರ ಕೊರಳಿಗೆ ಕಟ್ಟಿರುವ ಕೊಬ್ಬರಿಯ ಮಾಲೆಯನ್ನು ಅದು ಕಳೆದುಕೊಳ್ಳಬಾರದು. ಹೀಗೆ ಪದೇ ಪದೇ ಗೂಳಿಯನ್ನು ಓಡಿಸಲಾಗುತ್ತದೆ.ಹಾಗೂ ಅತೀ ಹೆಚ್ಚು ಸಂಖ್ಯೆಯ ಗೆಲುವಿನ ಓಟಗಳನ್ನು ಓಡಿರುವ ಜಾನುವಾರುಗಳನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಅದೇ ರೀತಿ ಅತಿ ಹೆಚ್ಚು ಕೊಬ್ಬರಿಯ ಮಾಲೆಗಳನ್ನು ಗೂಳಿಯ ಕೊರಳಿನಿಂದ ಕಿತ್ತುಕೊಳ್ಳುವವರಿಗೆ ಪ್ರಶಸ್ತಿ ನೀಡಲಾಗುತ್ತದೆ.
ಮೊದಲಿಗೆ, ಸ್ಥಳೀಯರು ಸಂಘಟನಾ ಸಮಿತಿಯನ್ನು ರಚಿಸುತ್ತಾರೆ. ಇದೇ ಸಮಿತಿಯು ಸ್ಪರ್ಧೆಯ ದಿನಾಂಕಗಳನ್ನು ನಿರ್ಧರಿಸುತ್ತದೆ, ಸ್ಪರ್ಧೆಗಳ ನಿಯಮಗಳನ್ನು, ನಿಬಂಧನೆಗಳನ್ನು ರೂಪಿಸುತ್ತದೆ ಮತ್ತು ಪ್ರಶಸ್ತಿಗಳನ್ನು ಅಂತಿಮಗೊಳಿಸುತ್ತದೆ. ನಂತರ ಮಾಹಿತಿಯನ್ನು ಕರಪತ್ರಗಳು, ಸಾಮಾಜಿಕ ಮಾಧ್ಯಮ (ಫೇಸ್‌ಬುಕ್, ವಾಟ್ಸಾಪ್) ಇತ್ಯಾದಿಗಳ ಮೂಲಕ ಸಾರ್ವಜನಿಕರಿಗೆ ಪ್ರಸಾರ ಮಾಡಲಾಗುತ್ತದೆ. ಈ ಗೂಳಿ ಓಟಕ್ಕೆ ಗ್ರಾಮ ಮತ್ತು ಸುತ್ತಮುತ್ತ ಸೂಕ್ತವಾದ ಪ್ರದೇಶವನ್ನು ಆಯ್ಕೆ ಮಾಡಲಾಗುತ್ತದೆ. ಟ್ರ್ಯಾಕ್ಟರ್ ಟ್ರಾಲಿಗಳು ಇತ್ಯಾದಿಗಳನ್ನು ಬಳಸಿ ಅಖಾಡದ ಎರಡೂ ಬದಿಗಳನ್ನು ಭದ್ರಪಡಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳು ಕುಳಿತುಕೊಳ್ಳಲು, ವೀಕ್ಷಿಸಲು ಮತ್ತು ಗೂಳಿಗಳನ್ನೂ ಮತ್ತು ಭಾಗವಹಿಸುವವರನ್ನು ಹುರಿದುಂಬಿಸಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಪಕ್ಕದ ಮರಗಳು, ಕಾಂಪೌಂಡ್ ಗೋಡೆಗಳು ಮತ್ತು ಟೆರೇಸ್‌ಗಳು ಪ್ರೇಕ್ಷಕರ ಗ್ಯಾಲರಿಗಳಾಗಿ ಬದಲಾಗುತ್ತದೆ. ಆದರೂ ಅನೇಕರು ನಿಲ್ಲಲು ಬಯಸುತ್ತಾರೆ.
ಹೋರಿಗಳ ಮಾಲೀಕರು ಹೋರಿಗಳಿಗೆ ಅವರ ಇಷ್ಟದಂತೆ ಹೆಸರುಗಳನು ಇಡುತ್ತಾರೆ ಚಾಮುಂಡಿ express 202,ರಾಣೇಬೆನ್ನೂರ ಕಾ ರಾಜ 227, ಹಾವೇರಿ ಅನ್ನದಾತ 251, ಕೋಣನಕೊಪ್ಪದ ದುರಂತ 199 ಇನ್ನು ಹಲವಾರು ಹೋರಿಗಳು ಇದಾವೆ.ಇನ್ನು ಹಲವು ಹೋರಿಗಳನ್ನು ಸವಿನೆನಪಿಗಾಗಿ ಇಟ್ಟುಕೊಂಡಿದಾರೆ ಹೋರಿ ಬೆಳದಂತೆ ಹೋರಿ ಅಭಿಮಾನಿ ಬಳಗವು ಬೆಳೆಯುತ್ತದೆ.
ಹೋರಿ ಹಬ್ಬದಲ್ಲಿ ಜನರು ಎಷ್ಟು ಖುಷಿ ಪಡುತ್ತಾರೋ ಅಷ್ಟೇ ನೋವುಗಳು ಪಡುತ್ತಾರೆ. ಒಂದೇ ಪದದಲ್ಲಿ ಹೇಳುವುದಾದ್ರೆ ಸಾವಿನ ನೋವನು ಜನ ಹೆಚ್ಚು ಅನುಭವಿಸುತ್ತಾರೆ. ಕಾರಣವೇನೆದರೆ ಹೋರಿಯನು ಹಿಡಿಯುವ ಸಮಯದಲ್ಲಿ ಹೋರಿಗೆ ಮೂಗದಾರ ಇಲ್ಲದಿರುವ ಕಾರಣ ಹೋರಿಯು ಜನರ ಮೇಲೆ ಹರಿ ಹಾಯುವುದು.ಇದರ ಮಧ್ಯವು ಹೋರಿ ಹಬ್ಬವನು ಬಿಡದೆ ಮುಂದುವರೆಸಿಕೊಂಡು ಹೋಗುತಿದಾರೆ. ನಮ್ಮ ಪೂರ್ವಜರು ಈ ಹಬ್ಬವನು ಒಂದು ವಿಶೇಷ ಹಬ್ಬವನಾಗಿ ಆಚರಿಸುತಿದ್ದರು ಆದರೆ ಇಂದು ಈ... ಹಬ್ಬವನು ಆಟವೆಂದು ಕೊಂಡಿದಾರೆ
ಹೋರಿಯ ಮಾಲೀಕರು ಹೋರಿಯನು ಅವರ ಮನೆಯ ಸದ್ಯಸರಂತೆ ನೋಡಿಕೊಳುತಾರೆ.ಮಾಲೀಕ ಮತ್ತು ಹೋರಿಯ ನೋಡುವೆಯ ಸಂಬಂಧವನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಯಾಕೆಂದ್ರೆ ಮಾಲೀಕರು ಹೋರಿಯನು ಮಗುವಿನತೆ ನೋಡಿಕೊಳುತಾರೆ.
“ಹೋರಿ ಹಬ್ಬದ ಅಭಿಮಾನಿಗಳು ಯಾರ ಯಾರ ಇದಿರ ಪಾ ”
ಭೂಮಿಕಾ ಹೊಸೂರು
ಪತ್ರಿಕೋದ್ಯಮ ವಿಭಾಗ
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ
🙌🙌
ಪ್ರತ್ಯುತ್ತರಅಳಿಸಿ👌
ಪ್ರತ್ಯುತ್ತರಅಳಿಸಿ