ಅಳಿವಿನಂಚಿನಲ್ಲಿರುವ ಕಗ್ಗ
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗೋವಿಗೆ ಅಗ್ರಮಾನ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಹಿಂದುಗಳಿಗೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇವೆ ಎಂಬ ನಂಬಿಕೆಯಿಂದ ಗೋವು ಪೂಜ ನಿಯವಾಗಿದೆ.ಹಳೆಯ ಕಾಲದಿಂದಲೂ ಭಾರತದ ಜನರು ಗೋವುಗಳ ಸಾಕಾಣಿಕೆ ಮಾಡಿದ್ದರಿಂದ ಅನೇಕ ದೇಶಿಯ ತಳಿಗಳ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣವಾಯಿತು.ಗಿರ್, ಸಾಹಿವಾಲ , ರೆಡ್ ಸಿಂಧಿ, ಕಾಂಕ್ರೇಜ್, ಹಳ್ಳಿಕಾರ್, ಮಲೆನಾಡು ಗಿಡ್ಡ ಹೀಗೆ ಇನ್ನಿತರ ಕೆಲವೇ ಕೆಲವು ತಳಿಗಳು ಮಾತ್ರ ಇಂದು ಹೆಚ್ಚಾಗಿ ಕಾಣಿಸುತ್ತಿವೆ. ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿಗಳ ಪಟ್ಟಿಗೆ ಒಂದು ಕಾಲನ್ನು ಕಿತ್ತಿಟ್ಟ ವಿಶಿಷ್ಟ ತಳಿ ಕಗ್ಗ .ಇವು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುತ್ತವೆ.ಹಿಂದೆ ಈ ತಳಿಯ ಹೋರಿಗಳನ್ನು ಹೊಲವನ್ನು ಉಳುಮೆ ಮಾಡಲು ಬಳಸುತ್ತಿದ್ದರು .ಇವು ಕಪ್ಪು, ಬಿಳಿ, ನಸುಗೆಂಪು, ಬೂದು, ಹೀಗೆ ನಾನಾ ವರ್ಣದಲ್ಲಿ ಕಂಡು ಬರುತ್ತವೆ. ಬಹುಶಹ ಮಲೆನಾಡು ಗಿಡ್ಡ, ಓಂಗೋಲ್ ಮತ್ತು ಕಿಲಾರಿ ತಳಿಗಳ ಮಿಶ್ರಣದಿಂದ ಉತ್ಪತ್ತಿಯಾದ ಜಾತಿಯಾಗಿದೆ.ಹೋರಿಗಳು ಓಂ ಗೋಲ್ ತಳಿಯಂತೆ ದೇಹದ ರೂಪವನ್ನು ಹೊಂದಿರುತ್ತವೆ. ಮಲೆನಾಡು ಗಿಡ್ಡಕ್ಕಿಂತ ಬಲವಾದ ಕಾಲುಗಳನ್ನು ಹೊಂದಿದ್ದು, ಗಾತ್ರದಲ್ಲೂ ಸ್ವಲ್ಪ ದೊಡ್ಡದಿರುತ್ತವೆ. ಕೋಡುಗಳು ಅಗಲ, ನೇರ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ