ಯಕ್ಷಗಾನ , ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳ ನ್ನೊಳಗೊ೦ಡ ಒಂದು ಸ್ವತಂತ್ರವಾದ ಅತೀ ಅದ್ಬುತ ವಾದ ಶಾಸ್ತ್ರೀಯ ಕಲೆಯೇ ಯಕ್ಷಗಾನ. ಯಕ್ಷಗಾನ ಪೌರಾಣಿಕ ಮತ್ತು ಐತಿಹಾಸಿಕ  ಸಂಗೀತ, ನೃತ್ಯ ಮತ್ತು ಸಂಭಾಷಣೆಗಳನ್ನು  ಒಳಗೊಂಡ ನಾಟಕದ ರೂಪದಲ್ಲಿ ವ್ಯಕ್ತ ಪಡಿಸುವ ಕಲೆ. 

ಯಕ್ಷ ಎಂದರೆ ನರದೇವ ಮತ್ತು ಗಾನ ಎಂದರೆ ಸಂಗೀತ ಎಂದರ್ಥ. ಸಾಮಾನ್ಯವಾಗಿ ಯಕ್ಷಗಾನವು ರಾತ್ರಿ ವೇಳೆ ನಡೆಯುತ್ತದೆ.

ಇದನ್ನು ಹಳ್ಳಿಗರು "ಆಟ"ಯೆಂದು ಕರೆಯುತ್ತಾರೆ . ಇದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹುಟ್ಟುಕೊಂಡಿತ್ತು ಮತ್ತು ಅಲ್ಲಿಯೇ ಹೆಚ್ಚಾಗಿ ಪ್ರಚಲಿತವಾಗಿದೆ. 

ಇದು 11 ಶತಮಾನದ ವೈಷ್ಣವ ಭಕ್ತಿ ಚಳುವಳಿ ಸಮಯದಲ್ಲಿ ಪ್ರಾರಂಭವಾಯಿತು.

ಕರಾವಳಿ ಭಾಗದ ಜನರರು ತಾವು ಬಯಸಿದ್ದನ್ನು ಪಡೆದಾಗ ದೇವರಿಗೆ ಹರಕೆಯ ರೂಪದಲ್ಲಿ   ಯಕ್ಷಗಾನವನ್ನು ನೋಡುದು ಅಥವಾ ಆಟ ಆಡುವುದರ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಾರೆ.

ದಕ್ಷಿಣ ಕನ್ನಡ ದಿಂದ ಕಾಸರಗೋಡಿನವರಗೆ ಯಕ್ಷಗಾನ ರೂಪವನ್ನು ತೆಂಕು ತಿಟ್ಟು ಎನ್ನುತ್ತಾರೆ ಹಾಗೆ ಉಡುಪಿ ಇಂದ ಉತ್ತರ ಕನ್ನಡದವರೆಗೆ ಬಡಗು ತಿಟ್ಟು ಇಂದ ಕರೆಯುದು ವಾಡಿಕೆಯಾಗಿದೆ.

ಯಕ್ಷಗಾನದಲ್ಲಿ ಬಳಸುವಂತಹ ವೇಷಭೂಷಣ ವಿಶಿಷ್ಟವಾಗಿರುತ್ತದೆ.

ದೊಡ್ಡ ಗಾತ್ರದ ಕಿರೀಟ ಮುಖದ ಮೇಲೆ ಹಲವು ಬಣ್ಣಗಳು ಕೈ ಕಾಲು ಗಳಿಗೆ ಹಲವು ಪರಿಕರಣಗಳು, ಕಾಲಿಗೆ ಗೆಜ್ಜೆ ಕಟ್ಟಲಾಗುತ್ತದೆ ಸಂದರ್ಭಕ್ಕೇ ತಕ್ಕಂತೆ ಕತ್ತಿ,ಗದೆ, ಮುಂತಾದ ಉಪಕರಣಗಳನ್ನು ಬಳಸುತ್ತಾರೆ.

ಯಕ್ಷಗಾನ ಹಿರಿಯ ಕಲಾವಿದರು ಯಕ್ಷ ವಿಭೂಷಣ ಹೊನ್ನಾವರದ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ಹಾಗೂ ಹೊನ್ನಾವರ ತಾಲ್ಲೂಕಿನ ಮಣ್ಣಿಗೆ ಶ್ರೀ ಗಜಾನನರವರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗೂ ಪ್ರಥಮ ಪ್ರಶಸ್ತಿ ಹಿರಿಯ ವಿದ್ವಾಂಸರಾದ ಡಾ. ಆರ್ ಗಣೇಶ್ ರವರಿಗೆ ದೊರಕಿದೆ.ಹಾಗೂ ಯಕ್ಷಗಾನ ದಿನವೆಂದು ನವೆಂಬರ್ 12ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಕಗ್ಗ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಅಡಕೆ ಬೀಳದಿರಲಿ ಕೆಳಕ್ಕೆ