ಪೋಸ್ಟ್‌ಗಳು

ಅಕ್ಟೋಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಳಿಸುವವರೇ ನಗುವಾಗ ನೀನೇಕೆ ಅಳುವೇ

                          ನೀನು ಆಳಬೇಕೆಂದು ಆಂದಿರುವ ಮಾತುಗಳನ್ನು ಕೇಳಿಸಿ ನೀನು ಅತ್ತರೆ ಅವರಿಗೆ ನಾವು ಇನ್ನಷ್ಟು ಕೀಳಾಗಿ ಕಾಣುತ್ತೇವೆ ಅದರ ಬದಲಾಗಿ ನೀನು ಅವರ ಮಾತುಗಳನ್ನು ಕೇಳಿಸಿಕೊಂಡು ತಲೆಕೆಡಿಸಿಕೊಳ್ಳದೆ ನಿನ್ನ ಬಗ್ಗೆ ನಿನಗೆ ಗೊತ್ತಿದ್ದರೆ ಸಾಕು ಎಂದು ಮುಂದೆ ಸಾಗಿದರೆ ಯಾವ ಬೇಸರವೂ ನಮ್ಮ ಜೀವನದಲ್ಲಿ ಇರುವುದಿಲ್ಲ                      ನಮ್ಮ ಜೀವನದಲ್ಲಿ ಅಲಿಸುವವರೂ ತುಂಬಾ ಜನ ಇರುತ್ತಾರೆ ನಮ್ಮ ಹೆಜ್ಜೆ ಹೆಜ್ಜೆ ಎಲ್ಲೂ ಅಂತವರು ಒಬ್ಬರಾದರು ಸಿಗುತ್ತಾರೆ ಆದರೆ ನಾವು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನ ಹೇಗಿದೆ ಎಂದು ನಮಗೆ ಗೊತ್ತಿದ್ದರೆ ಸಾಕು ನಾವು ಬೇರೆಯವರ ಮುಂದೆ ತಲೆ ಬಗ್ಗಿಡುವ ಅವಶ್ಯಕತೆ ಇಲ್ಲ ನಾವು ಅವರ ಮುಂದೆ ತಲೆ ಬಗ್ಗಿಸಿ ಅಳುತ್ತಾ ನಿಂತರೆ ಅವರು ನಮ್ಮನ್ನು ಅವರ ಚುಚ್ಚು ಮಾತುಗಳಿಂದ ಇನ್ನಷ್ಟು ಅಳಿಸುವರು ಅದೇ ನಾವು ಅವರಿಗೆ ತಲೆ ಎತ್ತ್ತಿ ನಾನೇಕೆ ನಿಮ್ಮ ಮಾತು ಕೇಳಿ ಅಳಬೇಕು ಎಂದು ಅವರಿಗೆ ಎದುರು ಉತ್ತರ ಕೊಟ್ಟರೆ ಅವರು ನಮ್ಮನ್ನು  ಮತ್ತೆ ಅಳಿಸಲು ಪ್ರಯತ್ನಿಸುವುದಿಲ್ಲ ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದಿ ಬುದ್ಧಿ ಹೇಳಲು ನಮ್ಮ ಹೆತ್ತ ತಂದೆ ತಾಯಿ ಮತ್ತು ನಮ್ಮ ಕುಟುಂಬದವರು ಇದ್ದಾರೆ ಇವರ ಒಂದು ಮಾರ್ಗದಲ್ಲಿ ನಾವು ನಡೆದರೆ ನಮ್ಮನ್ನು ಲಿಸುವವರು ಯಾರು ಇರುವುದಿಲ್ಲ ಮತ್ತು ನಾವು ಅಳುವ ಸಂದರ್ಭವೂ ಇರುವುದಿಲ್ಲ ನಮ್ಮ ತಂದೆ ತಾಯಿ ಗೆ ಗೌರವವನ್ನು ಕೊಡಬೇಕು ಆಗ ನಾವು ಎಲ್ಲೂ
 ಕೆಟ್ಟ ಕಣ್ಣುಗಳು ಸ್ತ್ರೀ ಎಂಬ ಪದವು ಸಂಸ್ಕೃತ ಪದದಿಂದ ಬಂದಿದೆ.  ಹಿಂದಿನ ಕಾಲದಲ್ಲಿ ಸ್ತ್ರೀಯನ್ನು ದೇವರ ಸಮಾನವಾಗಿ ಕಾಣುತ್ತಿದ್ದರು.ಹೆಣ್ಣು ಎಂಬ  ಪದವೇ ಒಂದು ಅದ್ಭುತ. ಮಮತೆ ,ಕರುಣೆ, ವಾತ್ಸಲ್ಯ,ಅಕ್ಕರೆ ಹಾಗೂ ತಾಳ್ಮೆಯನ್ನು  ಹೊಂದಿರುವವಳೇ  ಹೆಣ್ಣು. ಒಂದು ಹೆಣ್ಣು 9 ತಿಂಗಳು  ತನ್ನ ಗರ್ಭದಲ್ಲಿ ಮಗುವನ್ನು ಸಾಕಿ ಸಲಹುತ್ತಾಳೆ. ಅದೇ ಮಗುವನ್ನು ಜನನ ನೀಡುವಾಗ  ಆ ತಾಯಿ ಬಹಳ ನೋವನ್ನು ಅನುಭವಿಸಿರುತ್ತಾಳೆ. ಒಬ್ಬ ಮನುಷ್ಯನು 4.7ಡೆಲ್ ಷ್ಟು ನೋವನ್ನು ತಡೆದುಕೊಳ್ಳುತ್ತಾನೆ.ಆದರೆ ತಾಯಿಯು ಮಗುವಿಗೆ ಜನ್ಮ ನೀಡುವಾಗ 5.7ಡೆಲ್ ಷ್ಟು ನೋವಾಗುತ್ತದೆ. ಆ ಕ್ಷಣವನ್ನು ಊಹಿಸಿಕೊಂಡರೆ ಮೈ ಜುಮ್ ವೆನಿಸುತ್ತದೆ. ಇಷ್ಟೆಲ್ಲಾ ನೋವನ್ನು ಸಹಿಸಿಕೊಳ್ಳುವ ಕರುಣಾಯಿಯೇ  ಹೆಣ್ಣು.ತಾಯಿಯ ಋಣವನ್ನು ಎಷ್ಟೇ ವಜ್ರ,ವೈಢೂರ್ಯ  ಹಣ ಕೊಟ್ಟರೂ ತೀರಿಸಲು ಸಾದ್ಯವಿಲ್ಲ .                         ಹೆಣ್ಣು ಒಲಿದರೆ ನಾರಿ ಮುನಿದರೆ  ಮಾರಿ ಎಂಬ ಗಾದೆ ಮಾತು ಇದೆ. ಭೂಮಿಯು ಒಂದು ಹೆಣ್ಣು, ಪ್ರಕೃತಿಯೂ ಒಂದು ಹೆಣ್ಣು. ಭೂಮಿಯಿಂದ  ಜನಿಸಿದ ಹೆಣ್ಣೆಂದರೆ ಅದು ಸೀತಾ ಮಾತೆ ಹಾಗೂ  ಅಗ್ನಿಯಲ್ಲಿ ಜನಿಸಿದ ಹೆಣ್ಣೆಂದರೆ ಅವಳೇ ದ್ರೌಪದಿ. ಇವರನ್ನೆಲ್ಲಾ ಜನರು ದೇವರ ಸಮಾನವಾಗಿ ಕಂಡರು. ಆದರೆ ಈಗಿನ ಕಾಲದಲ್ಲಿ ದೇವರ ಸಮಾನವಾಗಿರುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ದುಷ್ಕರ್ಮಿಗಳು.ಇತ್ತೀಚಿಗಂತೂ ಹೆಣ್ಣು ಒಬ್ಬಳೇ ರಾತ್ರಿಯಲ್ಲಿ ಹೋದರೆ ಸಾಕು ಅವಳನ

ಆಕೆ ಮಹಾತ್ಮನ ಮಗಳು

    ಮಹಾತ್ಮ ಗಾಂಧಿ ಅವರಿಗೆ ಕರ್ನಾಟಕದಲ್ಲಿ ಒಬ್ಬ ಮಗಳಿದ್ದಳು ಅಂತ ಹೇಳಿದರೆ ನಿಮಗೆ ಆಶ್ಚರ್ಯ ಅನ್ನಿಸಬಹುದು.ಆಕೆ ಹಾಗೂ ಮಹಾತ್ಮನ ಸಂಬಂಧ ಎಷ್ಟು ಗಾಢವಾಗಿತ್ತು ಅಂದ್ರೆ ಮಹಾತ್ಮನ ಮರಣದ ನಂತರ ಅವರ ಅಸ್ತಿ ಕರ್ನಾಟಕದ ಹಾವೇರಿಗೆ ಬರುತ್ತದೆ ಅದನ್ನು ಅಲ್ಲಿ ಇವತ್ತಿಗೂ ಪೂಜಿಸಲಾಗುತ್ತಿದೆ. ಆ ಮಗಳ ಹೆಸರು ಸಂಗೂರ ವೀರಮ್ಮ ಇನ್ನೂ ಇಡೀ ದೇಶ ಗಾಂಧೀಜಿಯನ್ನ ಬಾಪು ಅಂತಲೂ ಮಹಾತ್ಮ ಅಂತಲೂ ಕರೆದರೆ ಹಾವೇರಿ ಜಿಲ್ಲೆಗೆ ಮಾತ್ರ ಅವರನ್ನು ಮಾವ ಅಂತ ಕರೆಯುವ ಹಕ್ಕು ಅಧಿಕಾರಿ ಅಧಿಕಾರಗಳೆರಡು ಇವೆ ಅದಕ್ಕೆ ಕಾರಣ ಕೂಡ ವೀರಮ್ಮ ತಾಯಿನೇ.   26 ಮೇ 1924 ರಂದು ಶಿರಸಿಯ ದಲಿತ ಕುಟುಂಬದಲ್ಲಿ ಜನಿಸಿದ ವೀರಮ್ಮನ ಮಹಾತ್ಮ ಗಾಂಧಿ ದತ್ತುಮಗಳಾಗಿಸಿಕೊಂಡಿದ್ದು ಒಂದು ಸ್ವಾರಸ್ಯಕರ ವಿಷಯ 1934ಕ್ಕೆ ಮಹಾತ್ಮ ಗಾಂಧಿಯವರು ಶಿರಸಿಗೆ ಬಂದಾಗ ಅವರನ್ನು ದಲಿತ ಬಾಲಕಿಯೊಬ್ಬಳು ಮಾತನಾಡಿಸುತ್ತಾಳೆ ಆಕೆಯ ಚುರುಕು ಕಣ್ಣುಗಳು ಬುದ್ಧಿವಂತಿಕೆ ಮಹಾತ್ಮ ಗಾಂಧಿಯನ್ನು ಆಕರ್ಷಿಸಿದವು ಆಕೆ ಬಗ್ಗೆ ವಿಚಾರಿಸಿದ ಗಾಂಧೀಜಿ ಆ ದಲಿತ ಬಾಲಕಿಯನ್ನು ದತ್ತು ಪಡೆದು ಗುಜರಾತಿನ ಸಾಬರಮತಿ ಆಶ್ರಮಕ್ಕೆ ಕರೆಯೊಯ್ದರು. ಆಶ್ರಮದಲ್ಲಿಯೇ ಬೆಳೆದ ವೀರಮ್ಮ ಗಾಂಧಿ ಹಾಗೂ ಕಸ್ತೂರಿಬಾ ಅವರ ಪ್ರೀತಿಯ ಮಗಳೇ ಆಗಿದ್ದಳು ಅದು ಸ್ವಾತಂತ್ರ್ಯ ಹೋರಾಟದ ಸಮಯ ಸಬರಮತಿ ಆಶ್ರಮ ಕೇಳ ಬೇಕಾ ಸದಾ ಹೋರಾಟಗಾರರು ಗಾಂಧಿ ಅನುಯಾಯಿಗಳು ಕಾಂಗ್ರೆಸ್ ನಾಯಕರಿಂದ ಗಿಜಿಗುಡುತ್ತ ಇರುತ್ತಿತ್ತು. ಅಲ್ಲಿಗೆ ಬಂದವರ ಊಟ ಉಪಚಾರದ
 ಸೀಗೆ ಹುಣ್ಣಿಮೆ ಫಸಲು ಬಂದಾಗ ಭೂಮಿ ತಾಯಿಗೆ ಉಡಿ ತುಂಬುವ ದಿನವೇ ಸೀಗಿ ಹುಣ್ಣಿಮೆ..  ಜನ್ಮ ನೀಡುತ್ತಾಳೆ ನಮ್ಮ ತಾಯಿ,ಅನ್ನ ನೀಡುತ್ತಾಳೆ ಭೂಮಿ ತಾಯಿ, ಅನ್ನೋ ಹಾಡನ್ನ ನೀವೆಲ್ಲ ಕೇಳಿದ್ದೀರಿ. ಹೌದು ಭೂಮಿ ತಾಯಿ ಅನ್ನವನ್ನ ಕೊಟ್ಟು ನಮ್ಮನ್ನ ಪೊರೆಯದೆ ಇದ್ದಿದ್ದರೇ ಈ ಭೂಮಿಯ ಮೇಲೆ ಯಾವ ಜೀವಿವು ಇರುತ್ತಿರಲಿಲ್ಲ. ಏಸುಂದರೆ, ಇಳೆ, ಧರಣಿ. ಪೃಥ್ವಿ, ಭೂಮಿ ತಾಯಿ ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ಭೂಮಿ ತಾಯಿ ವಿಷ್ಣುವಿನ ಹೆಂಡತಿ. ಬೆಳೆಗಳು ತುಂಬಿ ನಿಂತಿರುವ ಹೊಲವನ್ನ ವರ್ಷಕ್ಕೆ ಒಂದು ಬಾರಿ ಪೂಜೆ ಮಾಡುವಂತಹ ಸಂಪ್ರದಾಯವನ್ನ ನಮ್ಮ ಹಿರಿಯರು ಅನಾದಿಕಾಲದಿಂದ ರೋಡಿಯಲಿಟ್ಟುಕೊಂಡು ಬಂದಿದ್ದಾರೆ.                           ಹೊಲಗಳಿರುವ ರೈತ ಕುಟುಂಬಗಳು ಈ ಹಬ್ಬವನ್ನ ಆಚರಿಸುತ್ತಾರೆ. ಈ ಸೀಗೆ ಹುಣ್ಣಿಮೆಯು ಆಶ್ಚಜ ಮಾಸ ದ ಅಕ್ಟೋಬರ್ ನವೆಂಬರ ನಡುವೆ ಆದರೆ ವಿಜಯ ದಶಮಿಯ ನಂತರ ಇದು ಬರುತ್ತದೆ.   ಈ ಹಬ್ಬವನ್ನ ದಕ್ಷಿಣ ಭಾರತದ ಕರ್ನಾಟಕದಲ್ಲಿ ಬಹಳಷ್ಟು ಜನ ಈ ಹಬ್ಬವನ್ನ ಮಾಡುತ್ತಾರೆ. ಮಲೆನಾಡಿನ ಪ್ರದೇಶದಲ್ಲಿ ಈ ಹಬ್ಬವನ್ನ ಭೂಮಿ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬವನ್ನ ಈಗಲೇ ಯಾಕೆ ಆಚರಣೆ ಮಾಡುತ್ತಾರೆ ಎಂದರೆ ರೈತ ಭೀತಿದ ಬೀಜ ಕಾಳು ಕಾಳಾಗಿ ಮೈತುಂಬಿನಿಂತಂತಹ ತೆನೆಗಳು ರೈತಪಟ್ಟ ಶ್ರಮಕ್ಕೆ ಇದೇ ನೋಡು ಪ್ರತಿಫಲ ಅನ್ನೋ ಹಾಗೆ ಬೆಳೆದು ನಿಂತಿರುವ ಹೊಲಗಳು ಇರುತ್ತವೆ. ಈ ಬೆಳೆಯನ್ನ ಕೊಯ್ದು ಸುಗ್ಗಿ ಮಾಡುವ ಮೊದಲು ಭೂ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಇಮೇಜ್
ಮಲೆನಾಡಿನಲ್ಲಿ ಹುಟ್ಟುವುದೇ  ಒಂದು ಅದೃಷ್ಟ. ಪ್ರಕೃತಿಯ ನಡುವಿನ ಸೊಬಗಿನ ತಾಣ ಶಿರಸಿ. ಶಿರಸಿಯಲ್ಲೊಂದು ಸುಂದರವಾದ ಪುಟ್ಟದಾದ ಊರು ಮತ್ತಿಘಟ್ಟ . ಇಲ್ಲಿನ ಹಸಿರಿನಿಂದ ಕಂಗೊಳಿಸುವ ಪ್ರಕೃತಿ, ಪ್ರಶಾಂತ ವಾತಾವರಣ, ತಂಪಾಗಿ ಬೀಸುವ ತಂಗಾಳಿ, ಚಿಲಿಪಿಲಿಗುಡುತ್ತಿರುವ ಹಕ್ಕಿಗಳ ಕಲರವ, ಕಾಡುಪ್ರಾಣಿಗಳು ಹಾಗೂ ಔಷಧೀಯ ಗುಣವಿರುವ ಗಿಡಗಳು, ಅಲ್ಲಲ್ಲಿ ಸಣ್ಣ ಸಣ್ಣದಾಗಿ ಹರಿಯುವ ಹೊಳೆಗಳು, ಇವೆಲ್ಲವೂ ನೋಡಲು ಬಲು ಸುಂದರ.                         ಆ ದಟ್ಟವಾದ ಕಾಡಿನಲ್ಲಿ ದೂರ ದೂರದಲ್ಲಿ ಒಂದೊಂದು ಮನೆಗಳು, ಯಾವ ಗಲಾಟೆ ಗದ್ದಲಗಳಿಲ್ಲದೆ ವಾಸಿಸುತ್ತಿರುವ ಜನರು, ಮನೆಯ ಸುತ್ತಮುತ್ತ ಇರುವ ಅಡಿಕೆ ಮರಗಳು, ತೆಂಗಿನ ಮರಗಳನ್ನು ನೋಡುವುದೇ ಆನಂದ . ಮನೆಯ ಮುಂದಿರುವ ಹೊಳೆ , ಆ ಹೊಳೆಯ ನೀರು ಹರಿಯುವ ಜುಳು ಜುಳು ಸದ್ದು ಅದನ್ನು ಕೇಳಿಸಿಕೊಳ್ಳುವುದೇ ಒಂದು ಅದ್ಭುತ.                                                                ಇನ್ನು ಮಳೆಗಾಲದಲ್ಲಂತೂ ಬಲು ಸೊಗಸಾದ ಊರು ನಮ್ಮೂರು, ತುಂಬಿ ಹರಿಯುವ ಹೊಳೆ, ಅಚ್ಛಹಸಿರಿನಿಂದ ಕೂಡಿರುವ ಪ್ರಕೃತಿ. ನಮ್ಮ ಊರು ಎಷ್ಟು ಸುಂದರವಾಗಿದೆಯೋ ಅಷ್ಟೇ ಕಷ್ಟಕರವಾಗಿ ತೊಂದರೆಗಳಿಂದ ಕೂಡಿದೆ. ಇನ್ನೂ ಸರಿಯಾಗಿ ಅಭಿವೃದ್ಧಿ ಹೊಂದದ ರಸ್ತೆ. ಮಳೆಗಾಲದಲ್ಲಂತೂ ತಿಂಗಳುಗಟ್ಟಲೆ ವಿದ್ಯುತ್ #ಕಣ್ಣಾಮುಚ್ಚಾಲೆ. ಕಾರಣ ಕರೆಂಟ್ ಕಂಬಗಳ ಮೇಲೆ ಬೀಳುವ ಮರಗಳು, ನೆಟ್ವರ್ಕ್ ಇರುವುದಿಲ್ಲ.  ನೆಟ್ವರ್ಕ್ ಇಲ್ಲದ ಜ