ನೀರಿನ ಬಾಟಲ್ ಬೇಸಿಗೆ ರಜಾ ಬಂದರೆ ಮಕ್ಕಳಿಗೆ ಖುಷಿಯಾಗುತ್ತದೆಯೋ ಅದೇ ರೀತಿ ಭೂಮಿಯ ಮಕ್ಕಳಾದ ರೈತರಿಗೆ ದುಃಖವಾಗುತ್ತದೆ ನೀರನ್ನು ಕೈಯಿಂದ ಹಿಡಿಯಲು ಸಾಧ್ಯವಾಗದು ಆದರೆ ಹಿಡಿಯಲು ಒಂದು ಸಾಧನವಿದೆ ಅದೇನಂದರೆ ಬಾಟಲ್ ನೀರು ಹಾಗೂ ಇದನ್ನು ಜೋಡೆತ್ತು ಎಂದರೆ ತಪ್ಪಾಗಲಾರದು ನೀರು ಒಂದು ಅಮೂಲ್ಯವಾದದ್ದು ಎಲ್ಲಾ ಸಂದರ್ಭದಲ್ಲಿ ನೀರು ಪ್ರಮುಖವಾದ ಪಾತ್ರ ವಹಿಸುತ್ತದೆ ನೀರನ್ನು ಯಾವುದೇ ಬಾಟಲಿಗೆ ಹಾಕಿದಾಗ ಅದರ ಬಣ್ಣವನ್ನು ಮೈಗೂಡಿಸಿಕೊಂಡು ಸ್ಥಿರವಾಗಿ ನಿಂತಿರುತ್ತದೆ ನೀರಿನ ಪ್ರಮುಖ ವಿಶೇಷ ಎಂದರೆ ಬಾಟಲಿಯ ಯಾವುದೇ ಆಕಾರವಿರಲಿ ನೀರು ಅದೇ ಆಕಾರಕ್ಕೇ ಒಗ್ಗಿಕೊಳ್ಳುವುದು ಒಂದು ವಿಶೇಷ ಮನುಷ್ಯನ ಜೀವನದಲ್ಲಿ ನೀರು ಬಹಳ ಮುಖ್ಯವಾಗಿರುತ್ತದೆ ನೀರನ್ನು ತೆಗೆದುಕೊಂಡು ಹೋಗಲು ನೀರಿನ ಬಾಟಲ್ ಒಂದು ವಸ್ತು ಮನುಷ್ಯನು ತಾಪಮಾನದಿಂದ ತನ್ನನ್ನು ರಕ್ಷಿಸಲು ತನ್ನ ತಲೆಯ ಮೇಲೆ ಹ್ಯಾಟ ನ್ನು ಧರಿಸಿರುತ್ತಾನೆ ನೀರನ್ನು ಸುರಕ್ಷಿತವಾಗಿ ಶುದ್ಧವಾಗಿ ಇಡಲು ಬಾಟಲಿಯ ತಲೆ ಮೇಲೆ ಒಂದು ಮುಚ್ಚುಳವನ್ನು ಧರಿಸಿರುತ್ತದೆ, ಮನುಷ್ಯನಿಗೆ ಬಾಯಾರಿಕೆ ಆದಾಗ ಬಾಟಲಿಯಲ್ಲಿರುವ ನೀರು ಕುಡಿದು ಹಾಗೆ ಮತ್ತೆ ಬಾಯಾರಿಕೆ ಆದಾಗ ನೀರನ್ನು ಸಂಗ್ರಹಿಸಲು ಉತ್ತಮವಾದ ಮಾರ್ಗವಾಗಿದೆ ಯಾವುದೇ ಸಮಾರಂಭದಲ್ಲಿ ಬಾಳೆ ಎಲೆ ಹಾಗೂ ಬಾಟಲಿ ಎರಡು ಜಂಟಿಯಾಗಿ ಕಾರ್ಯನಿರ್ವಹಿಸುತ್ತದ ಕೆಲವೊಂದು ಸಂದರ್ಭದಲ್ಲಿ ನಾವು ಜಾಸ್ತಿ ನೋಡುವುದು ಮದುವೆಯಲ್ಲಿ ಮಕ್ಕಳು ಬಾಟಲಿಯೊಂದಿಗ...
ಪೋಸ್ಟ್‌ಗಳು
ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಫ್ರೆಂಡ್ ಅನ್ನೋ ಶಿಪ್ ಗೆ ನಾವೇ ಮೊಳೆ ಹೊಡೆದುಕೊಂಡರೆ ಹೇಗೆ? ತುಂಬಾ ಸಲ ಹೀಗಾಗುತ್ತದೆ. ಫ್ರೆಂಡ್ ಗೆ ಫೋನ್ ಮಾಡಬೇಕು ಅಂದುಕೊಳ್ಳುತ್ತಿರುತ್ತೇವೆ. ಆದರೆ ಮಾಡಲ್ಲ. ಫೋನ್ ಮಾಡೋಕೆ ಸಾಧ್ಯವಾಗೋಲ್ಲ ಅನ್ನುವುದು ಬೇರೆ ವಿಚಾರ, ಅದಕ್ಕೆ ನೂರೆಂಟು ಕಾರಣಗಳಿರುತ್ತವೆ. ಕೆಲಸದ ಒತ್ತಡ, ಟ್ರಾವೆಲಿಂಗ್, ಮೀಟಿಂಗ್, ಈಟಿಂಗ್, ಆಯಾಸ, ಹುಷಾರಿಲ್ಲ. ಅವಳು ಬ್ಯುಸಿ ಯಾಗಿರಬೇಕು ಬಿಡು ಅಂತ ಇವನು. ಇವನು ಬ್ಯುಸಿ ಯಾಗಿದ್ದಾನೋ ಏನು ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತ ಅವಳು. ಒಟ್ಟಿನಲ್ಲಿ ನೋ ಕಾಂಟಾಕ್ಟ್, ಫೋನ್ ಮಾಡದೇ ಇರುವುದಕ್ಕೆ ಬ್ಯುಸಿ ಅನ್ನೋದು ಒಂದು ಅಡ್ಡ ನೆಪ ಅಷ್ಟೇ. ಆದರೆ ಇನ್ನೊಂದು ಕಾರಣವಿದೆ. ಅವನು ಮಾಡಲಿ ಬಿಡು, ಏನು ದಾಡಿ ಅವನಿಗೆ? ಒಂದು ಫೋನ್ ಮಾಡೋದಕ್ಕೆ ಆಗೋಲ್ವಾ? ಪ್ರತಿ ಸಲ ನಾನೇ ಮಾಡ್ಬೇಕಾ? ಅನ್ನೋ ಅಹಂ, ಅದು ಒಂದು ಸಾರಿ ಬಂದು ಇಬ್ಬರ ಮನದಲ್ಲೂ ಕುಳಿತು ಬಿಟ್ಟರೆ ಆ ಫ್ರೆಂಡ್ ಶಿಪ್ ಹಳಿಸಿತು ಅಂತಲೇ ಅರ್ಥ. ಹೀಗಾದಾಗ ಫ್ರೆಂಡ್ ಅನ್ನೋ ಶಿಪ್ ಅಹಂ ಅನ್ನೇ ಅಲೆಯಾಗಿಸಿಕೊಂಡು ಮುಳಗಿ ಹೋಗುತ್ತದೆ. ಕೊನೆಗೆ ಫ್ರೆಂಡ್ ಎಲ್ಲೋ ಮರೆತೇ ಹೋಗುತ್ತಾನೆ. ಮಾತು ನಿಂತು ಹೋಗುತ್ತದೆ. ಫೋನ್ ನಂಬರ್ ಮರೆತು ಹೋಗುತ್ತದೆ. ಕೆಲವೇ ದಿನಗಳ ಹಿಂದೆ ಪ್ರತಿಯೊಂದಕ್ಕೂ ಬೇಕಾಗಿದ್ದ ಫ್ರೆಂಡ್ ನ ಸ್ಥಾನಕ್ಕೆ ಇನ್ಯಾರೋ ಒಬ್ಬ ಫ್ರೆಂಡ್ ಬಂದು ಕುಳಿತುಬಿಡುತ್ತಾನೆ. ನೆನಪಿರಲಿ ಆ ಫ್ರೆಂಡು ಒಂದಲ್ಲ ಒಂದು ದ...