ಪೋಸ್ಟ್‌ಗಳು

 *✰━ ಅಪ್ಪ ಎಂದರೆ ಆಕಾಶ ━✰* ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು.  ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲಾ ಕೈಲಾದಷ್ಟು ಕೊಡಿಸುವವನು... ಅಪ್ಪ ಅಂದ್ರೆ ಕುಟುಂಬದ ಶಕ್ತಿ... ಮಕ್ಕಳಿಗೆ ಮೊದಲ ಹೀರೋ... ಅಪ್ಪ ಅಂದ್ರೆ ಆಕಾಶ...                    ಪ್ರತಿ ಸಂಸಾರದ ಆಧಾರಸ್ತಂಭವಾಗಿ ಮನೆಯವರ ಪೊರೆಯನ್ನು, ಸಂಭಾಳಿಸುವ ಅದ್ಬುತ ಶಕ್ತಿಯೇ ಅಪ್ಪ ! ಅಮ್ಮ ಮನೆಯ ನಂದಾದೀಪವಾದರೆ ಅಪ್ಪ ಮನೆಯೊಳಗು, ಹೊರಗೂ ಪ್ರಜ್ವಲಿಸುವ ದೀಪ. ಇಡೀ ಜಗವು ಪ್ರತಿ ಬಾರಿ ಅಮ್ಮನನ್ನು ದೈವೀ ಸ್ವರೂಪ,  ಮಮತೆಯ - ಕಾಳಜಿಯ ಸಂಕೇತವೆಂದು ಸಾರುತ್ತದೆ ಆದರೆ ಅಪ್ಪ ಎಂಬ ಅಗಣಿತ ಪ್ರೇಮ,  ಶಿಸ್ತಿನ ಶಕ್ತಿಯನ್ನು ನೆನೆಪಿಸಿಕೊಳ್ಳುವುದು ಕೇವಲ "ಅಪ್ಪಂದಿರ ದಿನಕ್ಕೆ" ಮಾತ್ರ !               ಮಕ್ಕಳು ಅತ್ತಾಗ, ನೋವಾದಾಗ ಕೂಡಲೇ ತಾಯಿಯು ಕಳವಳಗೊಂಡು ಮಮಕರಿಸಿ, ಒಲುಮೆಯ ಧಾರೆ ಹರಿಸಿ ಸಂತೈಸುವುದು ಹೌದಾದರೂ, ತಂದೆ ಎಂಬ ಭಾವ ತನಗೇನು ಸಂಬಂಧವಿಲ್ಲದಂತೆ ಒಮ್ಮೊಮ್ಮೆ ವರ್ತಿಸಿದರೂ, ಅಮ್ಮ ಮಕ್ಕಳ ಮಮಕಾರವನ್ನು ಕಣ್ಣಲ್ಲೇ ತುಂಬಿಕೊಂಡು, ಒಳಗೊಳಗೇ ಸಂಭ್ರಮಿಸುವ  ಪರಿ ಕೇವಲ ಅಮ್ಮನಿಗೆ ಮಾತ್ರ ತಿಳಿಯುವಂತದ್ದು. ತನ್ನ ಪ್ರೇಮ ಅತಿಯಾದ ಕಾಳಜಿ ತನ್ನ ಮಗುವಿನ ಭವಿಷ್ಯಕ್ಕೆ ತೊಡಕಾಗಬಾರದೆಂದು,  ತನ್ನೆಲ್ಲಾ ಅಕ್ಕರೆಯನ್ನ ಹೃದಯದೊಳಗೆ  ಅದುಮಿಟ್ಟು ಶಿಸ್ತಿನ ಮುಖವಾಡ ಧರಿಸಿ ಕೆಲವೊಮ್ಮೆ ಮಕ್ಕಳ ಪಾಲಿನ ಖಳನಾಗುವುದು ಇದೇ ಅಪ್ಪ !              
 *ಗುರಿ ಇಲ್ಲದ ವಿದ್ಯಾರ್ಥಿ ಜೀವನ ನಿಯಂತ್ರಿಸಲು ಹಾಸ್ಟೆಲ್ ಉತ್ತಮ ದಾರಿ:* ದಿನೇ ದಿನೇ ನಮ್ಮ ಶಿಕ್ಷಣ ಜಗತ್ತು ಬದಲಾವಣೆಯಾಗುವ ಹಾಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಂಬಲಿಸುತ್ತ ದೂರದ ಊರಿಗೆ ಪಯಣ ಬೆಳೆಸುತ್ತಿದ್ದಾರೆ ಶಿಕ್ಷಣವು ವಿದ್ಯಾರ್ಥಿ ಜೀವನದ ಹೊಸ ತಿರುವನ್ನುಕೊಡುತ್ತಿದೆ ದೂರದ ಊರಿಗೆ ಹೋದಾಗ ಹಾಸ್ಟೆಲ  ಎಂಬುದು ಎಲ್ಲರಿಗೂ ಅನಿವಾರ್ಯವಾಗುತ್ತದೆ ಹಾಸ್ಟೆಲ್ ಗಳಿಗೆ ಮಕ್ಕಳನ್ನು ಸೇರಿಸುವಾಗ ಪೋಷಕರು ಹೆಚ್ಚಾದ ಆತಂಕ ಪಡುತ್ತಾರೆ ಕಾರಣ ಏನೆಂದರೆ ಅಲ್ಲಿ ಅಪ್ಪ ಅಮ್ಮ ಮತ್ತು ಸಹೋದರರ ಪ್ರೀತಿ ಸಿಗುವುದಿಲ್ಲ ಎಂಬ ಆತಂಕ ಹಾಗೂ ಇಷ್ಟವಾದ ಆಹಾರ ಸಿಗುವುದಿಲ್ಲ ಸರಿಯಾದ ಪಾಲನೆ ಸಿಗುವುದಿಲ್ಲ ಇದರ ಜೊತೆಗೆ ಹಬ್ಬ ಹರಿದಿನ ಬಂದರೆ ಮಕ್ಕಳು ಮನೆಗೆ ಬರುವುದಿಲ್ಲ ಹಾಗಾಗಿ ಕೆಲ ಪೋಷಕರು ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂಜರಿಯುತ್ತಾರೆ, ಆದರೆ ಹಾಸ್ಟೆಲ್ ಗೆ ಹೂಕ್ಕ ಮೇಲೆ ಅಲ್ಲಿನ ನೀತಿ ನಿರೂಪಣೆ ತಕ್ಕಂತೆ ನಡೆದುಕೊಂಡಲ್ಲಿ ಮನೆಯಿಂದ ಸಿಗುವ ಮೌಲ್ಯಗಳು ಜೊತೆಗೆ ಸ್ವಾಲಂಬಿ ಬದುಕು ಸಹ ಬಾಳ್ವೆ ಮೊದಲಾದ ಜೀವನ ರೂಪಿಸುವ ಮೌಲ್ಯಗಳು ದೊರೆಯುತ್ತದೆ ಅನ್ನುವುದು ಅಷ್ಟೇ ಸತ್ಯ. ಮನೆಯಲ್ಲಿ ಅಪ್ಪ ಅಮ್ಮನ ಶಿಸ್ತಿನ ಗರಡಿಯಲ್ಲಿ ಇರುವ ಮಕ್ಕಳು ಒಮ್ಮೊಮ್ಮೆ ಯಾಮಾರಿಸಿ ತನ್ನಿಷ್ಟದಂತೆ ನಡೆಯುವುದುಂಟು ಆದರೆ ಹಾಸ್ಟೆಲ್ ನಲ್ಲಿ ಆ ತರಹ ಮಾಡುವುದು ಅಷ್ಟು ಸುಲಭವಲ್ಲ‌. ಆರಂಭದ ದಿನಗಳಲ್ಲಿ ಕೊಂಚ ಕಷ್ಟ ಅನಿಸಿದರೆ ಅದನ್ನು ಸಹಿಸಿಕೊಂಡು ನಿಂತರೆ, ಅದರಿಂದ ಸಿಗ
 "__ನಮ್ಮ  ಕಲೆ  ಯಕ್ಷಗಾನ__" ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣ ಗಳನ್ನು ಒಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆಯೇ ಯಕ್ಷಗಾನ .                                         ಯಕ್ಷಗಾನವು ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳನ್ನು ಪ್ರಸ್ತುತಪಡಿಸುವ ಒಂದು ನಾಟಕೀಯ ರೂಪವಾಗಿದೆ.ಇದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ  ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.ಇದರಲ್ಲಿ ಎರಡು ಪ್ರಕಾರಗಳಿವೆ.ಒಂದು ತೆಂಕುತಿಟ್ಟು ಇದು ದಕ್ಷಿಣ ಕನ್ನಡದಿಂದ ತುಳುನಾಡು ಪ್ರದೇಶದ ಕಾಸರಗೋಡಿನವರೆಗೆ ಯಕ್ಷಗಾನದ ರೂಪವನ್ನು ತೆಂಕುತಿಟ್ಟು ಎನ್ನುವರು.ಮತ್ತು ಎರಡನೆಯದು ಬಡಗುತಿಟ್ಟು ಇದು ಉಡುಪಿಯಿಂದ ಉತ್ತರ ಕನ್ನಡದವರೆಗೆ ಬಡಗುತಿಟ್ಟು ಎನ್ನುವರು.ಈ ಎರಡು ಪ್ರಕಾರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಈ ಕಲೆಯು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದೇ ನಮ್ಮ ಹೆಮ್ಮೆ.                                         ಯಕ್ಷಗಾನದ ಪ್ರಮುಖ ಅಂಶಗಳು:–     1) ಪ್ರಸಂಗ:   ಯಕ್ಷಗಾನದಲ್ಲಿ ಯಾವುದಾದರೂ ಒಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು ಅಭಿನಯ ನೃತ್ಯಗಳೊಂದಿಗೆ ಆಡಿ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯಲಾಗಿದೆ. ಇದು ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಳ್ಳುತ್ತಾರೆ.  2)ಪಾತ್ರಧಾರಿಗಳು:   ಪ್ರಸಂಗದಲ್ಲಿ ಬರುವ ಕಥೆಗಳನ್ನು ಅಭಿನಯಿಸುವ
 ಭೂಮಿಯಿಂದ ಸೂರ್ಯ ಬಹಳಷ್ಟು ದೂರವಿದ್ದಾನೆ ಆದರೆ ನಮ್ಮ ಆಲೋಚನೆ ಪ್ರಕಾರ ತೆಂಗಿನಮರದ ಹಾಗೆ ಎತ್ತರವಿರುವ ಅದರ ತುತ್ತ ತುದಿಯಲ್ಲಿ  ಹಲವಾರು ಕಾಯಿಗಳ ಸಮೂಹವಿದೆ ಆದರೆ ತೆಂಗಿನ  ಮರಕ್ಕಿಂತ ಸ್ವಲ್ಪ ಕಿರಿದಾಗಿ ನಮ್ಮ ಮುಂದಕ್ಕೆ  ಕೈಹಿಡಿದು, ಕರೆದುಕೊಂಡು ಹೋಗುವುದೇ ಬೀದಿ ದೀಪ  ಬೀದಿ ದೀಪದ ಕಂಬವು ಅನೇಕ ತಂತಿಗಳಿದ ಸುತ್ತಿಕೊಂಡು ಕೆಲವು ತಂತಿಗಳು ಅನೇಕ ಮನೆಗಳಿಗೆ ಸಹಕರಿಸಿ ವಿದ್ಯುತ್ತನ್ನು ಪೂರೈಸುವ ಮೂಲಕ ಮನೆ ಬೆಳಗುತ್ತಿದೆ ಜನರು ಸೂರ್ಯನ ಹತ್ತಿರ ಹೋಗುವುದು ಒಂದು ಹಾಸ್ಯಸ್ಪದ ಮಾತಾಗಿದೆ ಬೀದಿ ದೀಪವನ್ನು ನೋಡಿ ಸೂರ್ಯನಂತೆ ಕಲ್ಪಿಸಿಕೊಂಡರೆ ಮಾನವನ ಬುದ್ಧಿವಂತಿಕೆಯನ್ನು ತೋರಿಸುತ್ತದೆ ಒಂದು ಕ್ಷಣ ನಾವು ಯೋಚಿಸೋಣ ಬೀದಿ ದೀಪಗಳ ಒಂದು ವಿಷಯವಿಲ್ಲದಿದ್ದರೆ ಎಷ್ಟು ಸಾವು ನೋವು ಸಂಭವಿಸುವುದು ಎಂದು ಪ್ರತಿಯೊಂದು ಕೆಲಸದಲ್ಲಿ ವಿದ್ಯುತ್ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿದೆ ಪ್ರತಿಯೊಂದು ಬೀದಿ ದೀಪವು ಹೋಗುವರಿಗೆ ಮಾರ್ಗಸೂಚಿಯಾಗಿದೆ ವಿವಿಧ ಕಾರ್ಯ ಮತ್ತು ಚಟುವಟಿಕೆಗಳಲ್ಲಿ ಬೀದಿದೀಪವು ಅನಿವಾರ್ಯವಾಗಿದೆ ಪಂದ್ಯಾವಳಿಗಳಲ್ಲಿ ಮನೋರಂಜನ ಕಾರ್ಯಕ್ರಮದಲ್ಲಿ ಅಗತ್ಯವಾಗಿದೆ ಬೀದಿ ದೀಪದ ಮೂಲವಾದ ವಿದ್ಯುತ್ ಉತ್ಪಾದನೆ ಮತ್ತು ರಫ್ತಿನಲ್ಲಿ ಅನೇಕ ಬದಲಾವಣೆಯಾದರೆ ಕೈಗೊಂಡಂತ ಕಾರ್ಯಗಳು ಸ್ಥಗಿತಗೊಳ್ಳುವುದು ನಾವು ಗಮನಿಸಬಹುದು ರಸ್ತೆಯಲ್ಲಿ ರಾತ್ರಿ ನಡೆದಾಡುವವರಿಗೆ ಅತ್ಯುತ್ತಮವಾದ ಸಾಧನವಾಗಿದೆ ಹಾಗೆ ಯಾವುದೇ ಪಕ್ಷಿ ಲೈನ್ ಮೇಲೆ ಕುಳಿತುಕೊಂಡು

ಅಳಿವಿನಂಚಿನಲ್ಲಿರುವ ಕಗ್ಗ

ಇಮೇಜ್
              ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗೋವಿಗೆ ಅಗ್ರಮಾನ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಹಿಂದುಗಳಿಗೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇವೆ ಎಂಬ ನಂಬಿಕೆಯಿಂದ ಗೋವು ಪೂಜ ನಿಯವಾಗಿದೆ.ಹಳೆಯ ಕಾಲದಿಂದಲೂ ಭಾರತದ ಜನರು ಗೋವುಗಳ ಸಾಕಾಣಿಕೆ ಮಾಡಿದ್ದರಿಂದ ಅನೇಕ ದೇಶಿಯ ತಳಿಗಳ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣವಾಯಿತು.ಗಿರ್, ಸಾಹಿವಾಲ , ರೆಡ್ ಸಿಂಧಿ, ಕಾಂಕ್ರೇಜ್, ಹಳ್ಳಿಕಾರ್, ಮಲೆನಾಡು ಗಿಡ್ಡ ಹೀಗೆ ಇನ್ನಿತರ ಕೆಲವೇ ಕೆಲವು ತಳಿಗಳು ಮಾತ್ರ ಇಂದು ಹೆಚ್ಚಾಗಿ ಕಾಣಿಸುತ್ತಿವೆ.               ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿಗಳ ಪಟ್ಟಿಗೆ ಒಂದು ಕಾಲನ್ನು ಕಿತ್ತಿಟ್ಟ ವಿಶಿಷ್ಟ ತಳಿ ಕಗ್ಗ .ಇವು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುತ್ತವೆ.ಹಿಂದೆ ಈ ತಳಿಯ ಹೋರಿಗಳನ್ನು ಹೊಲವನ್ನು  ಉಳುಮೆ ಮಾಡಲು ಬಳಸುತ್ತಿದ್ದರು .ಇವು ಕಪ್ಪು, ಬಿಳಿ,  ನಸುಗೆಂಪು,  ಬೂದು,  ಹೀಗೆ ನಾನಾ ವರ್ಣದಲ್ಲಿ ಕಂಡು ಬರುತ್ತವೆ. ಬಹುಶಹ ಮಲೆನಾಡು ಗಿಡ್ಡ, ಓಂಗೋಲ್ ಮತ್ತು ಕಿಲಾರಿ ತಳಿಗಳ ಮಿಶ್ರಣದಿಂದ ಉತ್ಪತ್ತಿಯಾದ ಜಾತಿಯಾಗಿದೆ.ಹೋರಿಗಳು ಓಂ ಗೋಲ್  ತಳಿಯಂತೆ ದೇಹದ ರೂಪವನ್ನು ಹೊಂದಿರುತ್ತವೆ. ಮಲೆನಾಡು ಗಿಡ್ಡಕ್ಕಿಂತ ಬಲವಾದ ಕಾಲುಗಳನ್ನು ಹೊಂದಿದ್ದು, ಗಾತ್ರದಲ್ಲೂ ಸ್ವಲ್ಪ ದೊಡ್ಡದಿರುತ್ತವೆ. ಕೋಡುಗಳು ಅಗಲ, ನೇರ ಮತ್ತು ನೀಳವಾಗಿದ್ದು ತಳಿಯ ಬಲಿಷ್ಠತೆಯನ್ನು ತೋರ್ಪಡಿಸುತ್ತವೆ. ಸರಾಸರಿ ದಿನವೊಂದಕ್ಕೆ ನಾಲ್ಕು ಲೀಟರ್, ಗರಿಷ್ಠ

ಅಳಿಸುವವರೇ ನಗುವಾಗ ನೀನೇಕೆ ಅಳುವೇ

                          ನೀನು ಆಳಬೇಕೆಂದು ಆಂದಿರುವ ಮಾತುಗಳನ್ನು ಕೇಳಿಸಿ ನೀನು ಅತ್ತರೆ ಅವರಿಗೆ ನಾವು ಇನ್ನಷ್ಟು ಕೀಳಾಗಿ ಕಾಣುತ್ತೇವೆ ಅದರ ಬದಲಾಗಿ ನೀನು ಅವರ ಮಾತುಗಳನ್ನು ಕೇಳಿಸಿಕೊಂಡು ತಲೆಕೆಡಿಸಿಕೊಳ್ಳದೆ ನಿನ್ನ ಬಗ್ಗೆ ನಿನಗೆ ಗೊತ್ತಿದ್ದರೆ ಸಾಕು ಎಂದು ಮುಂದೆ ಸಾಗಿದರೆ ಯಾವ ಬೇಸರವೂ ನಮ್ಮ ಜೀವನದಲ್ಲಿ ಇರುವುದಿಲ್ಲ                      ನಮ್ಮ ಜೀವನದಲ್ಲಿ ಅಲಿಸುವವರೂ ತುಂಬಾ ಜನ ಇರುತ್ತಾರೆ ನಮ್ಮ ಹೆಜ್ಜೆ ಹೆಜ್ಜೆ ಎಲ್ಲೂ ಅಂತವರು ಒಬ್ಬರಾದರು ಸಿಗುತ್ತಾರೆ ಆದರೆ ನಾವು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನ ಹೇಗಿದೆ ಎಂದು ನಮಗೆ ಗೊತ್ತಿದ್ದರೆ ಸಾಕು ನಾವು ಬೇರೆಯವರ ಮುಂದೆ ತಲೆ ಬಗ್ಗಿಡುವ ಅವಶ್ಯಕತೆ ಇಲ್ಲ ನಾವು ಅವರ ಮುಂದೆ ತಲೆ ಬಗ್ಗಿಸಿ ಅಳುತ್ತಾ ನಿಂತರೆ ಅವರು ನಮ್ಮನ್ನು ಅವರ ಚುಚ್ಚು ಮಾತುಗಳಿಂದ ಇನ್ನಷ್ಟು ಅಳಿಸುವರು ಅದೇ ನಾವು ಅವರಿಗೆ ತಲೆ ಎತ್ತ್ತಿ ನಾನೇಕೆ ನಿಮ್ಮ ಮಾತು ಕೇಳಿ ಅಳಬೇಕು ಎಂದು ಅವರಿಗೆ ಎದುರು ಉತ್ತರ ಕೊಟ್ಟರೆ ಅವರು ನಮ್ಮನ್ನು  ಮತ್ತೆ ಅಳಿಸಲು ಪ್ರಯತ್ನಿಸುವುದಿಲ್ಲ ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದಿ ಬುದ್ಧಿ ಹೇಳಲು ನಮ್ಮ ಹೆತ್ತ ತಂದೆ ತಾಯಿ ಮತ್ತು ನಮ್ಮ ಕುಟುಂಬದವರು ಇದ್ದಾರೆ ಇವರ ಒಂದು ಮಾರ್ಗದಲ್ಲಿ ನಾವು ನಡೆದರೆ ನಮ್ಮನ್ನು ಲಿಸುವವರು ಯಾರು ಇರುವುದಿಲ್ಲ ಮತ್ತು ನಾವು ಅಳುವ ಸಂದರ್ಭವೂ ಇರುವುದಿಲ್ಲ ನಮ್ಮ ತಂದೆ ತಾಯಿ ಗೆ ಗೌರವವನ್ನು ಕೊಡಬೇಕು ಆಗ ನಾವು ಎಲ್ಲೂ
 ಕೆಟ್ಟ ಕಣ್ಣುಗಳು ಸ್ತ್ರೀ ಎಂಬ ಪದವು ಸಂಸ್ಕೃತ ಪದದಿಂದ ಬಂದಿದೆ.  ಹಿಂದಿನ ಕಾಲದಲ್ಲಿ ಸ್ತ್ರೀಯನ್ನು ದೇವರ ಸಮಾನವಾಗಿ ಕಾಣುತ್ತಿದ್ದರು.ಹೆಣ್ಣು ಎಂಬ  ಪದವೇ ಒಂದು ಅದ್ಭುತ. ಮಮತೆ ,ಕರುಣೆ, ವಾತ್ಸಲ್ಯ,ಅಕ್ಕರೆ ಹಾಗೂ ತಾಳ್ಮೆಯನ್ನು  ಹೊಂದಿರುವವಳೇ  ಹೆಣ್ಣು. ಒಂದು ಹೆಣ್ಣು 9 ತಿಂಗಳು  ತನ್ನ ಗರ್ಭದಲ್ಲಿ ಮಗುವನ್ನು ಸಾಕಿ ಸಲಹುತ್ತಾಳೆ. ಅದೇ ಮಗುವನ್ನು ಜನನ ನೀಡುವಾಗ  ಆ ತಾಯಿ ಬಹಳ ನೋವನ್ನು ಅನುಭವಿಸಿರುತ್ತಾಳೆ. ಒಬ್ಬ ಮನುಷ್ಯನು 4.7ಡೆಲ್ ಷ್ಟು ನೋವನ್ನು ತಡೆದುಕೊಳ್ಳುತ್ತಾನೆ.ಆದರೆ ತಾಯಿಯು ಮಗುವಿಗೆ ಜನ್ಮ ನೀಡುವಾಗ 5.7ಡೆಲ್ ಷ್ಟು ನೋವಾಗುತ್ತದೆ. ಆ ಕ್ಷಣವನ್ನು ಊಹಿಸಿಕೊಂಡರೆ ಮೈ ಜುಮ್ ವೆನಿಸುತ್ತದೆ. ಇಷ್ಟೆಲ್ಲಾ ನೋವನ್ನು ಸಹಿಸಿಕೊಳ್ಳುವ ಕರುಣಾಯಿಯೇ  ಹೆಣ್ಣು.ತಾಯಿಯ ಋಣವನ್ನು ಎಷ್ಟೇ ವಜ್ರ,ವೈಢೂರ್ಯ  ಹಣ ಕೊಟ್ಟರೂ ತೀರಿಸಲು ಸಾದ್ಯವಿಲ್ಲ .                         ಹೆಣ್ಣು ಒಲಿದರೆ ನಾರಿ ಮುನಿದರೆ  ಮಾರಿ ಎಂಬ ಗಾದೆ ಮಾತು ಇದೆ. ಭೂಮಿಯು ಒಂದು ಹೆಣ್ಣು, ಪ್ರಕೃತಿಯೂ ಒಂದು ಹೆಣ್ಣು. ಭೂಮಿಯಿಂದ  ಜನಿಸಿದ ಹೆಣ್ಣೆಂದರೆ ಅದು ಸೀತಾ ಮಾತೆ ಹಾಗೂ  ಅಗ್ನಿಯಲ್ಲಿ ಜನಿಸಿದ ಹೆಣ್ಣೆಂದರೆ ಅವಳೇ ದ್ರೌಪದಿ. ಇವರನ್ನೆಲ್ಲಾ ಜನರು ದೇವರ ಸಮಾನವಾಗಿ ಕಂಡರು. ಆದರೆ ಈಗಿನ ಕಾಲದಲ್ಲಿ ದೇವರ ಸಮಾನವಾಗಿರುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ದುಷ್ಕರ್ಮಿಗಳು.ಇತ್ತೀಚಿಗಂತೂ ಹೆಣ್ಣು ಒಬ್ಬಳೇ ರಾತ್ರಿಯಲ್ಲಿ ಹೋದರೆ ಸಾಕು ಅವಳನ

ಆಕೆ ಮಹಾತ್ಮನ ಮಗಳು

    ಮಹಾತ್ಮ ಗಾಂಧಿ ಅವರಿಗೆ ಕರ್ನಾಟಕದಲ್ಲಿ ಒಬ್ಬ ಮಗಳಿದ್ದಳು ಅಂತ ಹೇಳಿದರೆ ನಿಮಗೆ ಆಶ್ಚರ್ಯ ಅನ್ನಿಸಬಹುದು.ಆಕೆ ಹಾಗೂ ಮಹಾತ್ಮನ ಸಂಬಂಧ ಎಷ್ಟು ಗಾಢವಾಗಿತ್ತು ಅಂದ್ರೆ ಮಹಾತ್ಮನ ಮರಣದ ನಂತರ ಅವರ ಅಸ್ತಿ ಕರ್ನಾಟಕದ ಹಾವೇರಿಗೆ ಬರುತ್ತದೆ ಅದನ್ನು ಅಲ್ಲಿ ಇವತ್ತಿಗೂ ಪೂಜಿಸಲಾಗುತ್ತಿದೆ. ಆ ಮಗಳ ಹೆಸರು ಸಂಗೂರ ವೀರಮ್ಮ ಇನ್ನೂ ಇಡೀ ದೇಶ ಗಾಂಧೀಜಿಯನ್ನ ಬಾಪು ಅಂತಲೂ ಮಹಾತ್ಮ ಅಂತಲೂ ಕರೆದರೆ ಹಾವೇರಿ ಜಿಲ್ಲೆಗೆ ಮಾತ್ರ ಅವರನ್ನು ಮಾವ ಅಂತ ಕರೆಯುವ ಹಕ್ಕು ಅಧಿಕಾರಿ ಅಧಿಕಾರಗಳೆರಡು ಇವೆ ಅದಕ್ಕೆ ಕಾರಣ ಕೂಡ ವೀರಮ್ಮ ತಾಯಿನೇ.   26 ಮೇ 1924 ರಂದು ಶಿರಸಿಯ ದಲಿತ ಕುಟುಂಬದಲ್ಲಿ ಜನಿಸಿದ ವೀರಮ್ಮನ ಮಹಾತ್ಮ ಗಾಂಧಿ ದತ್ತುಮಗಳಾಗಿಸಿಕೊಂಡಿದ್ದು ಒಂದು ಸ್ವಾರಸ್ಯಕರ ವಿಷಯ 1934ಕ್ಕೆ ಮಹಾತ್ಮ ಗಾಂಧಿಯವರು ಶಿರಸಿಗೆ ಬಂದಾಗ ಅವರನ್ನು ದಲಿತ ಬಾಲಕಿಯೊಬ್ಬಳು ಮಾತನಾಡಿಸುತ್ತಾಳೆ ಆಕೆಯ ಚುರುಕು ಕಣ್ಣುಗಳು ಬುದ್ಧಿವಂತಿಕೆ ಮಹಾತ್ಮ ಗಾಂಧಿಯನ್ನು ಆಕರ್ಷಿಸಿದವು ಆಕೆ ಬಗ್ಗೆ ವಿಚಾರಿಸಿದ ಗಾಂಧೀಜಿ ಆ ದಲಿತ ಬಾಲಕಿಯನ್ನು ದತ್ತು ಪಡೆದು ಗುಜರಾತಿನ ಸಾಬರಮತಿ ಆಶ್ರಮಕ್ಕೆ ಕರೆಯೊಯ್ದರು. ಆಶ್ರಮದಲ್ಲಿಯೇ ಬೆಳೆದ ವೀರಮ್ಮ ಗಾಂಧಿ ಹಾಗೂ ಕಸ್ತೂರಿಬಾ ಅವರ ಪ್ರೀತಿಯ ಮಗಳೇ ಆಗಿದ್ದಳು ಅದು ಸ್ವಾತಂತ್ರ್ಯ ಹೋರಾಟದ ಸಮಯ ಸಬರಮತಿ ಆಶ್ರಮ ಕೇಳ ಬೇಕಾ ಸದಾ ಹೋರಾಟಗಾರರು ಗಾಂಧಿ ಅನುಯಾಯಿಗಳು ಕಾಂಗ್ರೆಸ್ ನಾಯಕರಿಂದ ಗಿಜಿಗುಡುತ್ತ ಇರುತ್ತಿತ್ತು. ಅಲ್ಲಿಗೆ ಬಂದವರ ಊಟ ಉಪಚಾರದ
 ಸೀಗೆ ಹುಣ್ಣಿಮೆ ಫಸಲು ಬಂದಾಗ ಭೂಮಿ ತಾಯಿಗೆ ಉಡಿ ತುಂಬುವ ದಿನವೇ ಸೀಗಿ ಹುಣ್ಣಿಮೆ..  ಜನ್ಮ ನೀಡುತ್ತಾಳೆ ನಮ್ಮ ತಾಯಿ,ಅನ್ನ ನೀಡುತ್ತಾಳೆ ಭೂಮಿ ತಾಯಿ, ಅನ್ನೋ ಹಾಡನ್ನ ನೀವೆಲ್ಲ ಕೇಳಿದ್ದೀರಿ. ಹೌದು ಭೂಮಿ ತಾಯಿ ಅನ್ನವನ್ನ ಕೊಟ್ಟು ನಮ್ಮನ್ನ ಪೊರೆಯದೆ ಇದ್ದಿದ್ದರೇ ಈ ಭೂಮಿಯ ಮೇಲೆ ಯಾವ ಜೀವಿವು ಇರುತ್ತಿರಲಿಲ್ಲ. ಏಸುಂದರೆ, ಇಳೆ, ಧರಣಿ. ಪೃಥ್ವಿ, ಭೂಮಿ ತಾಯಿ ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ಭೂಮಿ ತಾಯಿ ವಿಷ್ಣುವಿನ ಹೆಂಡತಿ. ಬೆಳೆಗಳು ತುಂಬಿ ನಿಂತಿರುವ ಹೊಲವನ್ನ ವರ್ಷಕ್ಕೆ ಒಂದು ಬಾರಿ ಪೂಜೆ ಮಾಡುವಂತಹ ಸಂಪ್ರದಾಯವನ್ನ ನಮ್ಮ ಹಿರಿಯರು ಅನಾದಿಕಾಲದಿಂದ ರೋಡಿಯಲಿಟ್ಟುಕೊಂಡು ಬಂದಿದ್ದಾರೆ.                           ಹೊಲಗಳಿರುವ ರೈತ ಕುಟುಂಬಗಳು ಈ ಹಬ್ಬವನ್ನ ಆಚರಿಸುತ್ತಾರೆ. ಈ ಸೀಗೆ ಹುಣ್ಣಿಮೆಯು ಆಶ್ಚಜ ಮಾಸ ದ ಅಕ್ಟೋಬರ್ ನವೆಂಬರ ನಡುವೆ ಆದರೆ ವಿಜಯ ದಶಮಿಯ ನಂತರ ಇದು ಬರುತ್ತದೆ.   ಈ ಹಬ್ಬವನ್ನ ದಕ್ಷಿಣ ಭಾರತದ ಕರ್ನಾಟಕದಲ್ಲಿ ಬಹಳಷ್ಟು ಜನ ಈ ಹಬ್ಬವನ್ನ ಮಾಡುತ್ತಾರೆ. ಮಲೆನಾಡಿನ ಪ್ರದೇಶದಲ್ಲಿ ಈ ಹಬ್ಬವನ್ನ ಭೂಮಿ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬವನ್ನ ಈಗಲೇ ಯಾಕೆ ಆಚರಣೆ ಮಾಡುತ್ತಾರೆ ಎಂದರೆ ರೈತ ಭೀತಿದ ಬೀಜ ಕಾಳು ಕಾಳಾಗಿ ಮೈತುಂಬಿನಿಂತಂತಹ ತೆನೆಗಳು ರೈತಪಟ್ಟ ಶ್ರಮಕ್ಕೆ ಇದೇ ನೋಡು ಪ್ರತಿಫಲ ಅನ್ನೋ ಹಾಗೆ ಬೆಳೆದು ನಿಂತಿರುವ ಹೊಲಗಳು ಇರುತ್ತವೆ. ಈ ಬೆಳೆಯನ್ನ ಕೊಯ್ದು ಸುಗ್ಗಿ ಮಾಡುವ ಮೊದಲು ಭೂ

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಇಮೇಜ್
ಮಲೆನಾಡಿನಲ್ಲಿ ಹುಟ್ಟುವುದೇ  ಒಂದು ಅದೃಷ್ಟ. ಪ್ರಕೃತಿಯ ನಡುವಿನ ಸೊಬಗಿನ ತಾಣ ಶಿರಸಿ. ಶಿರಸಿಯಲ್ಲೊಂದು ಸುಂದರವಾದ ಪುಟ್ಟದಾದ ಊರು ಮತ್ತಿಘಟ್ಟ . ಇಲ್ಲಿನ ಹಸಿರಿನಿಂದ ಕಂಗೊಳಿಸುವ ಪ್ರಕೃತಿ, ಪ್ರಶಾಂತ ವಾತಾವರಣ, ತಂಪಾಗಿ ಬೀಸುವ ತಂಗಾಳಿ, ಚಿಲಿಪಿಲಿಗುಡುತ್ತಿರುವ ಹಕ್ಕಿಗಳ ಕಲರವ, ಕಾಡುಪ್ರಾಣಿಗಳು ಹಾಗೂ ಔಷಧೀಯ ಗುಣವಿರುವ ಗಿಡಗಳು, ಅಲ್ಲಲ್ಲಿ ಸಣ್ಣ ಸಣ್ಣದಾಗಿ ಹರಿಯುವ ಹೊಳೆಗಳು, ಇವೆಲ್ಲವೂ ನೋಡಲು ಬಲು ಸುಂದರ.                         ಆ ದಟ್ಟವಾದ ಕಾಡಿನಲ್ಲಿ ದೂರ ದೂರದಲ್ಲಿ ಒಂದೊಂದು ಮನೆಗಳು, ಯಾವ ಗಲಾಟೆ ಗದ್ದಲಗಳಿಲ್ಲದೆ ವಾಸಿಸುತ್ತಿರುವ ಜನರು, ಮನೆಯ ಸುತ್ತಮುತ್ತ ಇರುವ ಅಡಿಕೆ ಮರಗಳು, ತೆಂಗಿನ ಮರಗಳನ್ನು ನೋಡುವುದೇ ಆನಂದ . ಮನೆಯ ಮುಂದಿರುವ ಹೊಳೆ , ಆ ಹೊಳೆಯ ನೀರು ಹರಿಯುವ ಜುಳು ಜುಳು ಸದ್ದು ಅದನ್ನು ಕೇಳಿಸಿಕೊಳ್ಳುವುದೇ ಒಂದು ಅದ್ಭುತ.                                                                ಇನ್ನು ಮಳೆಗಾಲದಲ್ಲಂತೂ ಬಲು ಸೊಗಸಾದ ಊರು ನಮ್ಮೂರು, ತುಂಬಿ ಹರಿಯುವ ಹೊಳೆ, ಅಚ್ಛಹಸಿರಿನಿಂದ ಕೂಡಿರುವ ಪ್ರಕೃತಿ. ನಮ್ಮ ಊರು ಎಷ್ಟು ಸುಂದರವಾಗಿದೆಯೋ ಅಷ್ಟೇ ಕಷ್ಟಕರವಾಗಿ ತೊಂದರೆಗಳಿಂದ ಕೂಡಿದೆ. ಇನ್ನೂ ಸರಿಯಾಗಿ ಅಭಿವೃದ್ಧಿ ಹೊಂದದ ರಸ್ತೆ. ಮಳೆಗಾಲದಲ್ಲಂತೂ ತಿಂಗಳುಗಟ್ಟಲೆ ವಿದ್ಯುತ್ #ಕಣ್ಣಾಮುಚ್ಚಾಲೆ. ಕಾರಣ ಕರೆಂಟ್ ಕಂಬಗಳ ಮೇಲೆ ಬೀಳುವ ಮರಗಳು, ನೆಟ್ವರ್ಕ್ ಇರುವುದಿಲ್ಲ.  ನೆಟ್ವರ್ಕ್ ಇಲ್ಲದ ಜ