ಪೋಸ್ಟ್‌ಗಳು

ಅಳಿಸುವವರೇ ನಗುವಾಗ ನೀನೇಕೆ ಅಳುವೇ

                          ನೀನು ಆಳಬೇಕೆಂದು ಆಂದಿರುವ ಮಾತುಗಳನ್ನು ಕೇಳಿಸಿ ನೀನು ಅತ್ತರೆ ಅವರಿಗೆ ನಾವು ಇನ್ನಷ್ಟು ಕೀಳಾಗಿ ಕಾಣುತ್ತೇವೆ ಅದರ ಬದಲಾಗಿ ನೀನು ಅವರ ಮಾತುಗಳನ್ನು ಕೇಳಿಸಿಕೊಂಡು ತಲೆಕೆಡಿಸಿಕೊಳ್ಳದೆ ನಿನ್ನ ಬಗ್ಗೆ ನಿನಗೆ ಗೊತ್ತಿದ್ದರೆ ಸಾಕು ಎಂದು ಮುಂದೆ ಸಾಗಿದರೆ ಯಾವ ಬೇಸರವೂ ನಮ್ಮ ಜೀವನದಲ್ಲಿ ಇರುವುದಿಲ್ಲ                      ನಮ್ಮ ಜೀವನದಲ್ಲಿ ಅಲಿಸುವವರೂ ತುಂಬಾ ಜನ ಇರುತ್ತಾರೆ ನಮ್ಮ ಹೆಜ್ಜೆ ಹೆಜ್ಜೆ ಎಲ್ಲೂ ಅಂತವರು ಒಬ್ಬರಾದರು ಸಿಗುತ್ತಾರೆ ಆದರೆ ನಾವು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನ ಹೇಗಿದೆ ಎಂದು ನಮಗೆ ಗೊತ್ತಿದ್ದರೆ ಸಾಕು ನಾವು ಬೇರೆಯವರ ಮುಂದೆ ತಲೆ ಬಗ್ಗಿಡುವ ಅವಶ್ಯಕತೆ ಇಲ್ಲ ನಾವು ಅವರ ಮುಂದೆ ತಲೆ ಬಗ್ಗಿಸಿ ಅಳುತ್ತಾ ನಿಂತರೆ ಅವರು ನಮ್ಮನ್ನು ಅವರ ಚುಚ್ಚು ಮಾತುಗಳಿಂದ ಇನ್ನಷ್ಟು ಅಳಿಸುವರು ಅದೇ ನಾವು ಅವರಿಗೆ ತಲೆ ಎತ್ತ್ತಿ ನಾನೇಕೆ ನಿಮ್ಮ ಮಾತು ಕೇಳಿ ಅಳಬೇಕು ಎಂದು ಅವರಿಗೆ ಎದುರು ಉತ್ತರ ಕೊಟ್ಟರೆ ಅವರು ನಮ್ಮನ್ನು  ಮತ್ತೆ ಅಳಿಸಲು ಪ್ರಯತ್ನಿಸುವುದಿಲ್ಲ ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದಿ ಬುದ್ಧಿ ಹೇಳಲು ನಮ್ಮ ಹೆತ್ತ ತಂದೆ ತಾಯಿ ಮತ್ತು ನಮ್ಮ ಕುಟುಂಬದವರು ಇದ್ದಾರೆ ಇವರ ಒಂದು ಮಾರ್ಗದಲ್ಲಿ ನಾ...
 ಕೆಟ್ಟ ಕಣ್ಣುಗಳು ಸ್ತ್ರೀ ಎಂಬ ಪದವು ಸಂಸ್ಕೃತ ಪದದಿಂದ ಬಂದಿದೆ.  ಹಿಂದಿನ ಕಾಲದಲ್ಲಿ ಸ್ತ್ರೀಯನ್ನು ದೇವರ ಸಮಾನವಾಗಿ ಕಾಣುತ್ತಿದ್ದರು.ಹೆಣ್ಣು ಎಂಬ  ಪದವೇ ಒಂದು ಅದ್ಭುತ. ಮಮತೆ ,ಕರುಣೆ, ವಾತ್ಸಲ್ಯ,ಅಕ್ಕರೆ ಹಾಗೂ ತಾಳ್ಮೆಯನ್ನು  ಹೊಂದಿರುವವಳೇ  ಹೆಣ್ಣು. ಒಂದು ಹೆಣ್ಣು 9 ತಿಂಗಳು  ತನ್ನ ಗರ್ಭದಲ್ಲಿ ಮಗುವನ್ನು ಸಾಕಿ ಸಲಹುತ್ತಾಳೆ. ಅದೇ ಮಗುವನ್ನು ಜನನ ನೀಡುವಾಗ  ಆ ತಾಯಿ ಬಹಳ ನೋವನ್ನು ಅನುಭವಿಸಿರುತ್ತಾಳೆ. ಒಬ್ಬ ಮನುಷ್ಯನು 4.7ಡೆಲ್ ಷ್ಟು ನೋವನ್ನು ತಡೆದುಕೊಳ್ಳುತ್ತಾನೆ.ಆದರೆ ತಾಯಿಯು ಮಗುವಿಗೆ ಜನ್ಮ ನೀಡುವಾಗ 5.7ಡೆಲ್ ಷ್ಟು ನೋವಾಗುತ್ತದೆ. ಆ ಕ್ಷಣವನ್ನು ಊಹಿಸಿಕೊಂಡರೆ ಮೈ ಜುಮ್ ವೆನಿಸುತ್ತದೆ. ಇಷ್ಟೆಲ್ಲಾ ನೋವನ್ನು ಸಹಿಸಿಕೊಳ್ಳುವ ಕರುಣಾಯಿಯೇ  ಹೆಣ್ಣು.ತಾಯಿಯ ಋಣವನ್ನು ಎಷ್ಟೇ ವಜ್ರ,ವೈಢೂರ್ಯ  ಹಣ ಕೊಟ್ಟರೂ ತೀರಿಸಲು ಸಾದ್ಯವಿಲ್ಲ .                         ಹೆಣ್ಣು ಒಲಿದರೆ ನಾರಿ ಮುನಿದರೆ  ಮಾರಿ ಎಂಬ ಗಾದೆ ಮಾತು ಇದೆ. ಭೂಮಿಯು ಒಂದು ಹೆಣ್ಣು, ಪ್ರಕೃತಿಯೂ ಒಂದು ಹೆಣ್ಣು. ಭೂಮಿಯಿಂದ  ಜನಿಸಿದ ಹೆಣ್ಣೆಂದರೆ ಅದು ಸೀತಾ ಮಾತೆ ಹಾಗೂ  ಅಗ್ನಿಯಲ್ಲಿ ಜನಿಸಿದ ಹೆಣ್ಣೆಂದರೆ ಅವಳೇ ದ್ರೌಪದಿ. ಇವರನ್ನೆಲ್ಲಾ ಜನರು ದೇವರ ಸಮಾನವಾಗಿ ಕಂಡರು. ಆದರೆ ಈಗಿನ ಕಾಲದಲ್ಲಿ ದೇವರ ಸ...

ಆಕೆ ಮಹಾತ್ಮನ ಮಗಳು

    ಮಹಾತ್ಮ ಗಾಂಧಿ ಅವರಿಗೆ ಕರ್ನಾಟಕದಲ್ಲಿ ಒಬ್ಬ ಮಗಳಿದ್ದಳು ಅಂತ ಹೇಳಿದರೆ ನಿಮಗೆ ಆಶ್ಚರ್ಯ ಅನ್ನಿಸಬಹುದು.ಆಕೆ ಹಾಗೂ ಮಹಾತ್ಮನ ಸಂಬಂಧ ಎಷ್ಟು ಗಾಢವಾಗಿತ್ತು ಅಂದ್ರೆ ಮಹಾತ್ಮನ ಮರಣದ ನಂತರ ಅವರ ಅಸ್ತಿ ಕರ್ನಾಟಕದ ಹಾವೇರಿಗೆ ಬರುತ್ತದೆ ಅದನ್ನು ಅಲ್ಲಿ ಇವತ್ತಿಗೂ ಪೂಜಿಸಲಾಗುತ್ತಿದೆ. ಆ ಮಗಳ ಹೆಸರು ಸಂಗೂರ ವೀರಮ್ಮ ಇನ್ನೂ ಇಡೀ ದೇಶ ಗಾಂಧೀಜಿಯನ್ನ ಬಾಪು ಅಂತಲೂ ಮಹಾತ್ಮ ಅಂತಲೂ ಕರೆದರೆ ಹಾವೇರಿ ಜಿಲ್ಲೆಗೆ ಮಾತ್ರ ಅವರನ್ನು ಮಾವ ಅಂತ ಕರೆಯುವ ಹಕ್ಕು ಅಧಿಕಾರಿ ಅಧಿಕಾರಗಳೆರಡು ಇವೆ ಅದಕ್ಕೆ ಕಾರಣ ಕೂಡ ವೀರಮ್ಮ ತಾಯಿನೇ.   26 ಮೇ 1924 ರಂದು ಶಿರಸಿಯ ದಲಿತ ಕುಟುಂಬದಲ್ಲಿ ಜನಿಸಿದ ವೀರಮ್ಮನ ಮಹಾತ್ಮ ಗಾಂಧಿ ದತ್ತುಮಗಳಾಗಿಸಿಕೊಂಡಿದ್ದು ಒಂದು ಸ್ವಾರಸ್ಯಕರ ವಿಷಯ 1934ಕ್ಕೆ ಮಹಾತ್ಮ ಗಾಂಧಿಯವರು ಶಿರಸಿಗೆ ಬಂದಾಗ ಅವರನ್ನು ದಲಿತ ಬಾಲಕಿಯೊಬ್ಬಳು ಮಾತನಾಡಿಸುತ್ತಾಳೆ ಆಕೆಯ ಚುರುಕು ಕಣ್ಣುಗಳು ಬುದ್ಧಿವಂತಿಕೆ ಮಹಾತ್ಮ ಗಾಂಧಿಯನ್ನು ಆಕರ್ಷಿಸಿದವು ಆಕೆ ಬಗ್ಗೆ ವಿಚಾರಿಸಿದ ಗಾಂಧೀಜಿ ಆ ದಲಿತ ಬಾಲಕಿಯನ್ನು ದತ್ತು ಪಡೆದು ಗುಜರಾತಿನ ಸಾಬರಮತಿ ಆಶ್ರಮಕ್ಕೆ ಕರೆಯೊಯ್ದರು. ಆಶ್ರಮದಲ್ಲಿಯೇ ಬೆಳೆದ ವೀರಮ್ಮ ಗಾಂಧಿ ಹಾಗೂ ಕಸ್ತೂರಿಬಾ ಅವರ ಪ್ರೀತಿಯ ಮಗಳೇ ಆಗಿದ್ದಳು ಅದು ಸ್ವಾತಂತ್ರ್ಯ ಹೋರಾಟದ ಸಮಯ ಸಬರಮತಿ ಆಶ್ರಮ ಕೇಳ ಬೇಕಾ ಸದಾ ಹೋರಾಟಗಾರರು ಗಾಂಧಿ ಅನುಯಾಯಿಗಳು ಕಾಂಗ್ರೆಸ್ ನಾಯಕರಿಂದ ಗಿಜಿಗುಡುತ್ತ ಇರುತ್ತಿತ್ತು. ಅಲ್ಲಿಗೆ ಬಂ...
 ಸೀಗೆ ಹುಣ್ಣಿಮೆ ಫಸಲು ಬಂದಾಗ ಭೂಮಿ ತಾಯಿಗೆ ಉಡಿ ತುಂಬುವ ದಿನವೇ ಸೀಗಿ ಹುಣ್ಣಿಮೆ..  ಜನ್ಮ ನೀಡುತ್ತಾಳೆ ನಮ್ಮ ತಾಯಿ,ಅನ್ನ ನೀಡುತ್ತಾಳೆ ಭೂಮಿ ತಾಯಿ, ಅನ್ನೋ ಹಾಡನ್ನ ನೀವೆಲ್ಲ ಕೇಳಿದ್ದೀರಿ. ಹೌದು ಭೂಮಿ ತಾಯಿ ಅನ್ನವನ್ನ ಕೊಟ್ಟು ನಮ್ಮನ್ನ ಪೊರೆಯದೆ ಇದ್ದಿದ್ದರೇ ಈ ಭೂಮಿಯ ಮೇಲೆ ಯಾವ ಜೀವಿವು ಇರುತ್ತಿರಲಿಲ್ಲ. ಏಸುಂದರೆ, ಇಳೆ, ಧರಣಿ. ಪೃಥ್ವಿ, ಭೂಮಿ ತಾಯಿ ಇನ್ನೂ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ಭೂಮಿ ತಾಯಿ ವಿಷ್ಣುವಿನ ಹೆಂಡತಿ. ಬೆಳೆಗಳು ತುಂಬಿ ನಿಂತಿರುವ ಹೊಲವನ್ನ ವರ್ಷಕ್ಕೆ ಒಂದು ಬಾರಿ ಪೂಜೆ ಮಾಡುವಂತಹ ಸಂಪ್ರದಾಯವನ್ನ ನಮ್ಮ ಹಿರಿಯರು ಅನಾದಿಕಾಲದಿಂದ ರೋಡಿಯಲಿಟ್ಟುಕೊಂಡು ಬಂದಿದ್ದಾರೆ.                           ಹೊಲಗಳಿರುವ ರೈತ ಕುಟುಂಬಗಳು ಈ ಹಬ್ಬವನ್ನ ಆಚರಿಸುತ್ತಾರೆ. ಈ ಸೀಗೆ ಹುಣ್ಣಿಮೆಯು ಆಶ್ಚಜ ಮಾಸ ದ ಅಕ್ಟೋಬರ್ ನವೆಂಬರ ನಡುವೆ ಆದರೆ ವಿಜಯ ದಶಮಿಯ ನಂತರ ಇದು ಬರುತ್ತದೆ.   ಈ ಹಬ್ಬವನ್ನ ದಕ್ಷಿಣ ಭಾರತದ ಕರ್ನಾಟಕದಲ್ಲಿ ಬಹಳಷ್ಟು ಜನ ಈ ಹಬ್ಬವನ್ನ ಮಾಡುತ್ತಾರೆ. ಮಲೆನಾಡಿನ ಪ್ರದೇಶದಲ್ಲಿ ಈ ಹಬ್ಬವನ್ನ ಭೂಮಿ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬವನ್ನ ಈಗಲೇ ಯಾಕೆ ಆಚರಣೆ ಮಾಡುತ್ತಾರೆ ಎಂದರೆ ರೈತ ಭೀತಿದ ಬೀಜ ಕಾಳು ಕಾಳಾಗಿ ಮೈತುಂಬಿನಿಂತಂತಹ ತೆನೆಗಳು ರೈತಪಟ್ಟ ಶ್ರಮಕ್ಕೆ ಇದೇ ನೋಡು ಪ್ರತಿಫಲ ಅನ್ನ...

ಪ್ರಕೃತಿಯ ಮಡಿಲಿನಲ್ಲೊಂದು ಸುಂದರ ತಾಣ ಮತ್ತಿಘಟ್ಟ

ಇಮೇಜ್
ಮಲೆನಾಡಿನಲ್ಲಿ ಹುಟ್ಟುವುದೇ  ಒಂದು ಅದೃಷ್ಟ. ಪ್ರಕೃತಿಯ ನಡುವಿನ ಸೊಬಗಿನ ತಾಣ ಶಿರಸಿ. ಶಿರಸಿಯಲ್ಲೊಂದು ಸುಂದರವಾದ ಪುಟ್ಟದಾದ ಊರು ಮತ್ತಿಘಟ್ಟ . ಇಲ್ಲಿನ ಹಸಿರಿನಿಂದ ಕಂಗೊಳಿಸುವ ಪ್ರಕೃತಿ, ಪ್ರಶಾಂತ ವಾತಾವರಣ, ತಂಪಾಗಿ ಬೀಸುವ ತಂಗಾಳಿ, ಚಿಲಿಪಿಲಿಗುಡುತ್ತಿರುವ ಹಕ್ಕಿಗಳ ಕಲರವ, ಕಾಡುಪ್ರಾಣಿಗಳು ಹಾಗೂ ಔಷಧೀಯ ಗುಣವಿರುವ ಗಿಡಗಳು, ಅಲ್ಲಲ್ಲಿ ಸಣ್ಣ ಸಣ್ಣದಾಗಿ ಹರಿಯುವ ಹೊಳೆಗಳು, ಇವೆಲ್ಲವೂ ನೋಡಲು ಬಲು ಸುಂದರ.                         ಆ ದಟ್ಟವಾದ ಕಾಡಿನಲ್ಲಿ ದೂರ ದೂರದಲ್ಲಿ ಒಂದೊಂದು ಮನೆಗಳು, ಯಾವ ಗಲಾಟೆ ಗದ್ದಲಗಳಿಲ್ಲದೆ ವಾಸಿಸುತ್ತಿರುವ ಜನರು, ಮನೆಯ ಸುತ್ತಮುತ್ತ ಇರುವ ಅಡಿಕೆ ಮರಗಳು, ತೆಂಗಿನ ಮರಗಳನ್ನು ನೋಡುವುದೇ ಆನಂದ . ಮನೆಯ ಮುಂದಿರುವ ಹೊಳೆ , ಆ ಹೊಳೆಯ ನೀರು ಹರಿಯುವ ಜುಳು ಜುಳು ಸದ್ದು ಅದನ್ನು ಕೇಳಿಸಿಕೊಳ್ಳುವುದೇ ಒಂದು ಅದ್ಭುತ.                                                                ಇನ್ನು ಮಳೆಗಾಲದಲ್ಲಂತೂ ಬಲು ಸೊಗಸಾದ ಊರು ನಮ್ಮೂರು, ತುಂಬಿ ಹರಿಯುವ ಹೊಳೆ, ಅಚ್ಛಹಸಿರಿನಿಂದ ಕೂಡಿರುವ ಪ್ರಕೃತಿ. ನಮ್ಮ ಊರ...

ಹಳ್ಳಿಯ ಬಾಳು

  ನಮ್ಮ ದೇಶದ ರೈತ ನಮ್ಮ ದೇಶದ ಬೆನ್ನು ಮೂಳೆ . ಅವನೇ ನಮ್ಮ ಜನತೆಯ ಜೀವಾಳ. ಅವನಲ್ಲಿ ಅಡಗಿರುವ ಸಂಸ್ಕೃತಿಯೇ ನಮ್ಮ ಪ್ರಾಣವಾಯು. ಪರದೇಶದ ನಾಗರಿಕತೆ ಪ್ರಭಾವಕ್ಕೆ ಒಳಗಾದ ನಾವು  ನಮ್ಮದೆನ್ನುವುದನ್ನೆಲ್ಲ ಕಳೆದುಕೊಂಡಿದ್ದೇವೆ. ಪಾಶ್ಚಾತ್ಯ ನಾಗರಿಕತೆಗೆ ವಿದ್ಯಾವಂತರೆನಿಸಿಕೊಂಡವರು ಬಲಿಯಾಗಿರುವಷ್ಟು ಅವಿದ್ಯಾವಂತರಾದ ಹಳ್ಳಿಯವರು ಒಳಗಾಗಿಲ್ಲವೆಂಬುದು ನಿಜ. ಅಧಿಕ ವಿದ್ಯೆಯನ್ನು ಹೊಂದಿದ ವಿದ್ಯಾವಂತರಿಗೆ ರಾಮಾಯಣ, ಮಹಾಭಾರತ ಚರಿತ್ರೆಗಳು ಕನ್ನಡ ನಾಡಿನಲ್ಲಿದ್ದರೂ ಸಹ ಅದರ ಬಗ್ಗೆ ಸರಿಯಾಗಿ ತಿಳಿದಿಲ್ಲ .ಅಷ್ಟರಮಟ್ಟಿಗೆ ಕೇವಲ ಪಾಶ್ಚಾತ್ಯ ಶಿಕ್ಷಣಕ್ಕೆ ಮಾರುಹೋಗಿದ್ದಾರೆ.                                   ಕಾಲಕ್ರಮೇಣವಾಗಿ  ತಮ್ಮ ದೇಶದ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಕಾಲದ ಸುಳಿಯಲ್ಲಿ ಹಳ್ಳಿಗಳು ಸಿಲುಕಿಕೊಂಡಿಲ್ಲ. ಇದಕ್ಕೆ ಕಾರಣ ಇಂಗ್ಲಿಷರ  ರಾಜ್ಯ ಇಲ್ಲಿ 200 ವರ್ಷಗಳಿಂದ ಆಳಿದರೂ  ಹಳ್ಳಿಗಳಿಗೆ ಆ ನಾಗರಿಕತೆಯ ಪ್ರಭಾವ ಹೆಚ್ಚಾಗಿ ಸೋಕಿಲ್ಲದಿರುವುದು, ನಮ್ಮ ಜನ ಯಾವುದನ್ನು ಸ್ವೀಕರಿಸುವುದೂ  ನಿಧಾನ, ಹಳೆಯ ಆಚಾರ- ವಿಚಾರವನ್ನು ಬಿಡುವುದೂ ನಿಧಾನ, ಇದರಿಂದಲೇ ಹಳ್ಳಿಗಳಲ್ಲಿ ಉಳಿದಿರುವ ಸಂಸ್ಕೃತಿ ನಮ್ಮ ಜೀವನದ ನಿಜವಾದ ಜೀವಾಳ.    ...
 ಅಭಿನಂದನೀಯ ಸನಾತನ ಶೈಲಿ ಕೋವಿಡ್-19 ಎಂಬ ಮಹಾಮಾರಿ ಸೋಂಕು ಕೆಲ ವರ್ಷಗಳ ಹಿಂದೆ  ಎಲ್ಲರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಕ್ಷಣ. ವ್ಯಾಪಕವಾಗಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ  ಭಾರತದ ಪ್ರಾಚೀನ ಜೀವನ ಶೈಲಿ ,ಆಯೂರ್ವೇದ ಸೇರಿದಂತೆ  ವೈದ್ಯಕೀಯ ಪದ್ದತಿಯು ಮುನ್ನಲೆಗೆ ಬಂದಿದೆ.    "ಓಲ್ಡ್ ಇಸ್ ಗೋಲ್ಡ್ "     ಎಂಬ ಮಾತು  ಸರಿ ಎಂಬ ಅಭಿಪ್ರಾಯಕ್ಕೆ ಜನ ತಲೆದೂಗುತ್ತಿದ್ದಾರೆ.                    ನಮ್ಮ ಹಳೆಯ ಆಚಾರ ವಿಚಾರಗಳನ್ನು ಗಮನಿಸಿದರೆ ಹಿರಿಯರು ನಮಗೆ ಏನೇ ಹೇಳಿದರು ಅದು ನಮ್ಮ ಒಳ್ಳೆಯದಕ್ಕೆ ಆಗಿರುತ್ತದೆ, ಎಂದು ಅದು ಕೋವಿಡ್ ನ ಸಮಯದಲ್ಲಿ ಅರಿವಾಯಿತು.         ಉದಾ: ನೋಡುವುದಾದರೇ ಕುಟುಂಬದ ಹಿರಿಯರು ಪ್ರತಿ ಊಟದ ಮೊದಲು ನೀವು ನಿಮ್ಮ ಕೈಗಳನ್ನು ಮತ್ತು ಕಾಲುಗಳನ್ನು ತೊಳೆದುಕೊಳ್ಳಿ ಎಂದು ಒತ್ತಾಯಿಸಿದ್ದು ನಿಮಗೆ ಇನ್ನು ನೆನಪಿರಬಹುದು.....             ಯಾವುದೇ ಋತುವಾದರೂ ಸರಿ  ಎದ್ದೊಡನೆ ಸ್ನಾನ ಮಾಡಬೇಕು ಬಾಗಿಲ ಹೊರಗೆ ಚಪ್ಪಲಿಯನ್ನು ಬಿಡಬೇಕು. ಇತ್ತೀಚಿನ ದಿನಗಳವರೆಗೂ ಇವೆಲ್ಲವೂ ಹಳೆಯ ಕಾಲದ ಪದ್ಧತಿಗಳು ಎಂದುಕೊಳ್ಳಲಾಗಿತ್ತು. ಆದರೆ ಕೋವಿಡ್ 19 ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿಕೊಂಡಿರುವುದರಿಂದ ದಿಢೀರ್ ಎಂದು...

ಗುಡಿಗಾರ ಸಮಾಜ

     ಮರೆಗೆಲಸ ಮಾಡುವವರನ್ನು ಬಡಗಿ ಆಚಾರಿ ಎಂದು ಕರೆಯುವುದು ವಾಡಿಕೆ. ಆದರೆ ಶ್ರೀಗಂಧದ ಮರದ ಕೆತ್ತನೆ ಮಾಡುವವರನ್ನು ಗುಡಿಕಾರರೆಂದು ಕರೆಯುತ್ತಾರೆ. ಕಟ್ಟಿಗೆಯ ಕೆಲಸದೊಂದಿಗೆ ಕೆಲ  ಮಟ್ಟಿಗೆ ಬೆಂಡು ಮಣ್ಣು ಕೊಂಬು ದಂತಗಳ ಕೆಲಸವನ್ನು ಇವರು ಮಾಡುತ್ತಾರೆ. ಬೆಂಡಿನಿಂದ ಹೂಮಾಲೆ ತಯಾರಿಸುತ್ತಾರೆ. ಮಣ್ಣಿನಿಂದ ಮೂರ್ತಿ ತಯಾರಿಸುತ್ತಾರೆ. ಕೊಂಬು ದಂತಗಳಿಂದ ವಿವಿಧ ವಸ್ತುಗಳನ್ನು ರಚಿಸುತ್ತಾರೆ. ಆದರೆ ಹೆಚ್ಚಾಗಿ ಗಂಧದ ಕಟ್ಟಿಗೆಯಿಂದ ಇವರು ತಮ್ಮ ಕೌಶಲ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಮೂಡಿಸುತ್ತಾರೆ. ಗಂಧದ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಗುಡಿಗಾರ ಎಂದು ಕರೆಯುತ್ತಾರೆ. ಈ ಗುಡಿಗಾರರನ್ನು ಕೆಲವೆಡೆ ಶೇಟ್ ಎಂದು ಶೆಟ್ಟಿ ಎಂದು ಹೀಗೆ ಗೋವಾದಲ್ಲಿ ಚಿತಾರಿ ಎಂದು ಕರೆಯುತ್ತಾರೆ. ಅವರ ಕೆಲಸವನ್ನು ನೋಡಿಯೇ ಅವರನ್ನು ಗುಡಿಗಾರರೆಂದು ಗುರುತಿಸಬೇಕಾದ ಪರಿಸ್ಥಿತಿ ಕೆಳಗಡೆ ಉಂಟು.           ಇಂದಿನ ಬಡಗಿಗಳು ವಿಶ್ವಕರ್ಮನ ವಂಶಸ್ಥರು ನಾವು ಎಂದು ಹೇಳಿಕೊಳ್ಳುತ್ತಾರೆ. ಗುಡಿಗಾರರಲ್ಲಿಯೇ ಮರದ ಕೆತ್ತನೆಯ ಬಾಗಿಲು ರಥ ತಯಾರಿಕೆ ದೇವರ ಮಂಟಪ ಗುಡಿ ಗೋಪುರ ನಿರ್ಮಾಣ ಗುಡಿ ಒಳಗಿನ ಕೆತ್ತನೆ ಮೇಲ್ಚಾವಣಿ ವೃತ್ತು ಕೆತ್ತುವುದರಲ್ಲಿಯೂ ಕೆಲವರು  ಸಿದ್ಧಿ ಪಡೆಯುವುದು ಈ ಮಾತಿಗೆ ಸಮರ್ಥನೆಯನ್ನು ಕೊಡುತ್ತದೆ.         ಕನ್ನಡ ನಾಡಿನ ಗುಡಿಗಾರರು ಮೂಲತ...
 ಯಾಣ, ಭಾರತ ಯಾಣ ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಕುಮಟಾ ತಾಲೂಕು ಉತ್ತರಕನ್ನಡ ಜಿಲ್ಲೆಗೆ ಸೇರುತ್ತದೆ. ಇದು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಶ್ರೇಣಿಗಳಿಂದ ಕೂಡಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಕುಮಟಾದಿಂದ ೩೧ ಕಿಲೋಮೀಟರ್ ದೂರದಲ್ಲಿದೆ. ಕಾರವಾರದಿಂದ ೯೦ ಕಿಲೋಮೀಟರ್ ದೂರದಲ್ಲಿದೆ. ಅಂಕೋಲಾದಿಂದ ೫೬ ಕಿಲೋಮೀಟರ್ ಇದೆ. ಯಾಣದ ಪ್ರಮುಖವಾದ ಆಕರ್ಷಣೆ ಎಂದರೆ ಭೈರವೇಶ್ವರ ಶಿಖರ ಮತ್ತು ಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು ಕಲ್ಲಿನಿಂದ ಕೂಡಿದೆ. ಭೈರವೇಶ್ವರ ಶಿಖರವು ೧೨೦ ಮೀಟರ್(೩೯೦ಅಡಿ) ಎತ್ತರವಿದೆ. ಮೋಹಿನಿ ಶಿಖರವು ೯೦ ಮೀಟ‌ರ್ (೩೦೦ಅಡಿ) ಎತ್ತರವಿದೆ. ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ್ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕಪ್ಪು ಪರದೆಯಂತೆ ಬೃಹದಾಕಾರದ ಶಿಲಾ ರೂಪವಾಗಿದೆ. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ. ಈ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ್ ಎತ್ತರವಾಗಿದೆ. ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ. ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರ ಈಶ್ವರನಿಂದ ಉರಿಹಸ್ತದ ವರಮೊಹಿನಿ ಶಿಖರ ಈ ಎರಡು ಶಿಖರಗಳು ಕಡಿದಾದ ಕಪ್ಪು...

ಶಿಲಾ ರೂಪಿ ಕೈಟಬೇಶ್ವರ

ಇಮೇಜ್
   ಅಟ್ಟಹಾಸ ಎಲ್ಲೇ ಮೀರಿದಾಗ ಸರ್ವ ಶಕ್ತನಾದ ಭಗವಂತ ಭೂಮಿಯಲ್ಲಿ ಅವತರಿಸಿ ನಂಬಿ ಬಂದ ಭಕ್ತರನ್ನ ಬೆನ್ನ ಬಿಡದೆ ಕಾಪಾಡುತ್ತಾನೆ. ಹಾಗೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕೋಟಿಪುರದಲ್ಲಿ ಕೈಟಬೇಶ್ವರ ನೆಲೆ ನಿಂತು ತನ್ನ ನಂಬಿ ಬಂದ ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ.                ಚಿನ್ಮಯಿ ರೂಪದಲ್ಲಿರುವ ಈಶ್ವರನು ದೇವರ ಗರ್ಭಗುಡಿಯೊಳಗೆ ಶಾಂತವಾದ ಮುಖ ಮುದ್ರೆಯಿಂದ ಕಂಗೊಳಿಸುತ್ತಿದ್ದಾನೆ .ಇವನನ್ನ ನಂಬಿ ಬಂದ ಭಕ್ತರಿಗೆ ತನ್ನ ಬಲವು ಅನುಗ್ರಹವನ್ನು ಎಂದಿಗೂ ಇಟ್ಟು ಕಾಪಾಡುತ್ತಿರುವ ಪರಮೇಶ್ವರನು.                      ಈ ದೇವಾಲಯವು ಕ್ರಿಸ್ತಶಕ 100 ರಲ್ಲಿ ಹೊಯ್ಸಳರ ರಾಜ್ಯ ವಿಕ್ರಮಾದಿತ್ಯನಿಂದ ನಿರ್ಮಿತವಾಗಿದೆ.ಎಲ್ಲಾ ದೇವಾಲಯದಲ್ಲಿಯೂ ಸಾಮಾನ್ಯವಾಗಿ ಲಿಂಗಗಳು ಕಪ್ಪು ಬಣ್ಣದಲ್ಲಿದ್ದರೆ ಇಲ್ಲಿ ಮಾತ್ರ ನೀಲವರ್ಣ ಪರಮೇಶ್ವರನ ಲಿಂಗವು ಕಂಗೊಳಿಸುತ್ತದೆ. ಈ ಅಪರೂಪದ ಪರಮಾತ್ಮನನ್ನು ನೋಡುವುದೇ ಒಂದು ಅದ್ಭುತವಾಗಿದೆ.               ಈ ಕ್ಷೇತ್ರದ ಮತ್ತೊಂದು ಮಹಿಮೆ ಏನೆಂದರೆ ಯುಗಾದಿ ಹಬ್ಬದ ದಿನ ಸೂರ್ಯನ ಕಿರಣಗಳು ನೇರವಾಗಿ ಪರಶಿವನ ನೆತ್ತರದ ಮೇಲೆ ಸ್ಪರ್ಶವಾಗಿ ಬೀಳುತ್ತದೆ. ಆ ದಿನ ಸಾವಿರಾರು ಭಕ್ತರು ಈ ದೃಶ್ಯವನ್ನು ನೋಡಿ ಕಣ್ತುಂಬಿಸಿಕೊಳ್ಳಲ...