ಪೋಸ್ಟ್‌ಗಳು

"ಹಸಿರೆಲೆಯ ಮೇಲೆ ಹಳ್ಳಿಯ ಹೊಂಗನಸು "

 ಬೆಳಿಗ್ಗೆ ಎದ್ದ ತಕ್ಷಣ ಶುರುವಾಗುವ ನಮ್ಮ ಜೀವನ ಎಂಬ ದಿನಚರಿಯು ಅದರಲ್ಲೂ ಹಳ್ಳಿಯ ಜೀವನ ಶೈಲಿಯನ್ನು ನೋಡುತ್ತಾ ಹೋದಂತೆ ಈಗ ಕೋಳಿ ಕೂಗುವ ಶಬ್ದ ಕೇಳಿ ಎದ್ದೇಳುವ ಪರಿಸ್ಥಿತಿ ಇಂದು ಎಲ್ಲ ಮನೆಗಳಲ್ಲಿ ಕಾಣ ಬರುತ್ತಿರುವುದೇ ಸಹಜ.  ಹಾಗೆಯೇ ಹಳ್ಳಿಯ ವಿವಿಧ ಕೆಲಸ ಕಾರ್ಯಗಳನ್ನು ನೋಡುತ್ತಾ ಹಚ್ಚಹಸುರಿನಿಂದ ಕಂಗೊಳಿಸುತ್ತಿದ್ದ ಕಾಡುಗಳು ಈಗ ನೋಡಲು ಸಿಗುವುದು ತುಂಬಾ ಕಡಿಮೆ. ಹಾಗೆಯೇ ಹಸಿರು ಗದ್ದೆಗಳುಬಯಲುಗಳಂತು ಇಲ್ಲವೇ ಇಲ್ಲ. ಆರಾಮದಾಯಕವಾದ ಕಾರು ಬೈಕುಗಳು ಹೊಗೆಗಳು ಅಂತಹ ಯಂತ್ರೋಪಕರಣಗಳ ಬಳಕೆಯಿಂದ ಅದರ ಎಲ್ಲಾ ಕೆಲಸಗಳನ್ನು ಮಾಡುವ ಪರಿಸ್ಥಿತಿ ಎದುರಾಗಿದೆ.  ಹಳ್ಳಿಗಳು ಜನರ ಜೀವನಾಡಿ ಗಳಾಗಿದ್ದವು ಆದರೆ ಈಗ ಹರಿದು ಚಿದ್ರ ಚಿದ್ರವಾದ ಜೇಡರ ಬಲೆ ಹೇಗೆ ನಮ್ಮ ಕಣ್ಣಿಗೆ  ಕಾಣುತ್ತದೆಯೋ ಹಳ್ಳಿಗರ ಜೀವನ ಶೈಲಿಯೂ ಹಾಗೆ ಆಗಿದೆ. ಇದಕ್ಕೆ ಕಾರಣ ಜನರ ತಾನು ತನ್ನದು ಎಂಬ ಮನಸ್ಥಿತಿ. ಆದರೆ ಅವರಿಗೆ ಮೊದಲು ತಿಳಿದಿರುವುದಿಲ್ಲ ಒಂದೊಂದು ದಿನ ಕಳೆದಂತೆ ಗೊತ್ತಾಗುತ್ತದೆ ಸುಖಕರ ಜೀವನದ ಸುಧೀರ್ಘ ನಿಟ್ಟುಸಿರು ಹಳ್ಳಿಯ ಜನರೇ ಎಂದು. ಸಂಪ್ರದಾಯದಿಂದ ಕೂಡಿದ ಹಳ್ಳಿಯ ಸೊಗಡು ಇಂದು ಬರಡಾಗುವ ಸನ್ನಿವೇಶ ಎದುರಾಗಿದೆ.  ಇಂದು ಮನುಷ್ಯ ಆರೋಗ್ಯವನ್ನು ಲೆಕ್ಕಿಸದೆ ಹಣಗಳಿಸುವತ್ತ ಮುಖ ಮಾಡಿದ್ದಾನೆ. ಕುಡಿಯುವ ನೀರಿಗೂ ಕಷ್ಟ ಪಡುತ್ತಿರುವ ಸ್ಥಿತಿಗೆ ಇಂದು ಮಾನವ ಸಮಾಜ ಹಾಗೂ ಹಳ್ಳಿಗಳು ಲಗ್ಗಿಟ್ಟಿವೆ. ಹಳ್ಳಿಯ ಹಸಿರು ಮರಗಳು ...

ಆಕಾಶದಲ್ಲಿ ಮೀನಿನಂತೆ....

ಆಕಾಶಕ್ಕೆ ಏಣಿ ಯಾರೂ ಹಾಕೋಕೆ ಆಗಲ್ಲ!" ಯಾರೋ ಹೇಳಿದ ಮಾತು ನೆನಪಾಯಿತು. ಹೀಗೆ ಬರುವಾಗ 'ಪ್ರತಿ ಕನಸುಗಳು ನಮ್ಮ ಮನಸ್ಸಿನ ಹಿಡಿತದಲ್ಲಿರಬೇಕು'.ಯಾರೋ ಹಿರಿಯರು ಅವರ ಸಹದ್ಯೋಗಿಗಳಿಗೆ ಹೇಳುತ್ತಿರುವ ಮಾತಿನ ಸಂದರ್ಭ ನನ್ನ ಎದುರಿತ್ತು.    ನನಗೆ ಒಂದು ಕ್ಷಣ ಮೋಗದಲ್ಲಿ ಮಂದಹಾಸ ಬೀರಿತ್ತು. ಅದೇಕೆಂದರೆ ನನ್ನ ಮನಸಿನಲ್ಲಿ ನಡೆಯುತ್ತಿರುವ ಯೋಚನೆಗೂ, ಇಲ್ಲಿ ನಡೆಯುತ್ತಿರುವ ಸಂದರ್ಭಕ್ಕೂ ಸಾಮ್ಯತೆ ಇದೆ ಅಲ್ಲವೇ!ಎಂದು ಮನಸಿನಲ್ಲಿಯೇ, ಅಂದುಕೊಂಡೆ. ಹೀಗೆ ಯೋಚಿಸುತ್ತ ಹೋದರೇ, 'ಎಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ.ಆದರೆ ಇನ್ನೆಷ್ಟೋ ಕನಸುಗಳಿಗೆ ಆಸರೆಗಳಿರುವುದಿಲ್ಲ. ಸಾಧಿಸುವ ಹುಮ್ಮಸ್ಸು ಇರುವುದಿಲ್ಲ?  ನಮಗೆ ಕನಸುಗಳು ಅತೀ ಆದರೆ, ದೇವರು ಕೂಡ ಒಮ್ಮೊಮ್ಮೆ ಶತ್ರುವಾಗಿ ಬಿಡುತ್ತಾನೆ. ಏಕೆಂದರೆ ಮನದಲ್ಲಿ ಸಾವಿರ ಚಿಂತೆ ಇದ್ದರೂ, ಇರುಳಲ್ಲಿ ಚಂದ್ರನನ್ನು ಮರೆತು ಹಗಲಲ್ಲಿ ನಕ್ಷತ್ರಗಳನ್ನು ಹುಡುಕುವ ಆಸೆ. ಈ ಒಂದೊಂದು ಟೈಮಲ್ಲಿ ವಿಚಿತ್ರವಾಗಿ ಆಡುವುದನ್ನ ನೋಡಿದರೆ, ಹುಟ್ಟಿಸುವ ದೇವರಿಗೂ ಮಾನವನ ಬಗ್ಗೆ ತಿಳಿಯುವುದಿಲ್ಲ ಅಂತ ಅನಿಸುತ್ತದೆ.   ಹೀಗೆ ಹುಟ್ಟಿದ ಮಗು ಅದರ ಪೋಷಕರ ಸ್ವಾಧೀನದಲ್ಲಿ ಬೆಳೆಯುತ್ತದೆ. ಹಾಗೇ ಪಾಲಕರ ಕನಸುಗಳು ಆ ಮಗುವಿನಲ್ಲಿ ಕಾಣುತ್ತಾರೆ. ಪಾಲಕರು ಮಕ್ಕಳಿಗೂ ಹೊಸ ಹೊಸ ಆಕಾಶದಂತೆ ವಿಶಾಲವಾದ ಕನಸುಗಳು ಕಾಣುವಂತೆ ಓಲೈಸುತ್ತಾರೆ. ಆ ಮಗು ಬೆಳೆಯುತ್ತ ಹೊಸ ಕಾಣುತ್ತಾ, ಅದನ್ನು ಗುರಿ ತಲುಪಲು ಪ್...

ನೋಡ ಬಾ ನಮ್ಮೂರ ಸಸ್ಯಲೋಕ "

ಉತ್ತರಕನ್ನಡ ಜಿಲ್ಲೆಯ ಸಹ್ಯಾದ್ರಿಯ ಶೃಂಗ ಶಿರಸಿಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಬಕ್ಕಳ ಎಂಬ ಪುಟ್ಟ ಹಳ್ಳಿ ನಮ್ಮೂರು. ಬಕುಲಾಪುರ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮ ಇಂದು ಬಕ್ಕಳ ಎಂದು ತನ್ನ ಹೆಸರನ್ನು ಕಿರಿದಾಗಿಸಿಕೊಂಡಿದೆ. ಹೆಸರೇನೋ ಚಿಕ್ಕದಾಗಿರಬಹುದು ಆದರೆ ಊರಿನ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಕಾರಣ ಮಾನವನ ಪರಿಸರ ಪ್ರೀತಿಯ ಪ್ರತೀಕವಾಗಿ ನಿರ್ಮಿಸಿರುವ ಬಕ್ಕಳ ಸಸ್ಯಶಾಸ್ತ್ರೀಯ ವನ ಹಾಗೂ ನಿಸರ್ಗದ ಮಡಿಲಿನಲ್ಲಿರುವ ಧಾರ್ಮಿಕ ಕೇಂದ್ರ ಶ್ರೀ ಸತ್ಯನಾಥೇಶ್ವರ ದೇವಾಲಯ.     ಸಾಮಾನ್ಯವಾಗಿ ಉತ್ತರಕನ್ನಡ ಪ್ರವಾಸ ಕೈಗೊಂಡವರು ಶಾಸ್ತ್ರೀಯ ವನಕ್ಕೆ ಭೇಟಿ ಕೊಡದೆ ತಮ್ಮ ಯಾನವನ್ನು ಕೊನೆಗೊಳಿಸುವುದೇ ಇಲ್ಲ ಅದರಲ್ಲೂ ಜೀವ ವೈವಿಧ್ಯತೆಯ ಪ್ರೀತಿ ಹೊಂದಿರುವ, ವೈದ್ಯಕೀಯ ಆಸಕ್ತಿ ಹೊಂದಿರುವ ಆಯುರ್ವೇದದ ಕುರಿತು ಜ್ಞಾನ ಪಡೆಯಲಿಚ್ಚಿಸುವ ಜನರಿಗೆ ಶಾಸ್ತ್ರೀಯ ವನ ಒಂದು ಹಾಟ್ ಝೋನ್ ಇದ್ದಂತೆ.   ಸಸ್ಯ ಸಂಕುಲದ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಆ ಮೂಲಕ ಔಷದೀಯ ಸಸ್ಯಗಳ ಉಪಯುಕ್ತತೆಯನ್ನು ಬಹಿರಂಗಪಡಿಸುವುದು ಶಾಸ್ತ್ರೀಯ ವನದ ಮುಖ್ಯ ಉದ್ದೇಶ ಆದುದರಿಂದಲೇ ವಿಭಿನ್ನ ರೀತಿಯ ಸಸ್ಯಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳನ್ನು ಬೆಳೆಸಲಾಗುತ್ತಿದೆ ಕರ್ನಾಟಕ ಅರಣ್ಯ ಇಲಾಖೆಯು ಈ ವನದ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ   ಶಾಸ್ತ್ರೀಯ ವನದ ವಿಶ...

ಮಡಿ

     ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನತೆಯನ್ನು ನೀಡಿರುವನು. ಉಸಿರಾಡುವ ಗಾಳಿ ,ಜಲ, ಗಿಡಮರಗಳು ಬೆಳಕು ಪ್ರಕೃತಿ ಇವೆಲ್ಲವುಗಳ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಕೃತಿಯು ಇಷ್ಟೆಲ್ಲಾ ಸಮಾನತೆಯನ್ನು ನೀಡಿದರು ಮನುಷ್ಯನಾದವನು ಮಾತ್ರ ತನ್ನ ಜಾತಿ ಧರ್ಮ ಮತಗಳ ಅಂಧಕಾರದ ಸುಳಿಯಲ್ಲಿ ಸಿಲುಕಿರುವುದು ದುರಂತವೆ ಸರಿ.        ಅದು ಹೊಸಪೇಟೆ ಸಮಾಜದಲ್ಲಿ ಎಲ್ಲಾ ಆಯಾಮಗಳಲ್ಲೂ ಉನ್ನತವಾದ ಹಂತದಲ್ಲಿದ್ದ ಒಂದು ವರ್ಗದ ದೀಕ್ಷಾ ಕಾರ್ಯಕ್ರಮವಿತ್ತು. ನಾನು ಹಾಗೂ ನನ್ನ ಮೂರು ಜನ ಸ್ನೇಹಿತರು ಆ ಕಾರ್ಯಕ್ರಮಕ್ಕೆ ಹೋಗಿದ್ದೆವು  ಅತಿಥಿಗಳಗಿ ಅಲ್ಲಾ ,ಕ್ಯಾಟರಿಂಗ್ ಕೆಲಸಕ್ಕಾಗಿ.   ಸಾಮಾನ್ಯವಾಗಿ ಊಟ ಎಂದರೆ ಹಸಿದಾಗ ಹೊಟ್ಟೆ ತುಂಬಿಸುವುದಾಗಿದೆ ಅಲ್ಲವೇ? ಆದರೆ ಅಲ್ಲಿ ನಾವು ಬಡಿಸುವ ಊಟಕ್ಕೂ ಮಡಿ ಊಟ ಹಾಗೂ ಹೊರಗಿನ ಊಟ ಎಂಬೆರಡು ವಿಧಗಳು ಇದ್ದವು. ಮನುಷ್ಯರು ತಮ್ಮನ್ನು ಜಾತಿ ಮತ-ಧರ್ಮಗಳ ಆಧಾರದಲ್ಲಿ ವಿಂಗಡಣೆ   ಮಾಡಿಕೊಂಡಿದ್ದಲ್ಲದೆ ಕುಡಿಯುವ ನೀರು, ತಿನ್ನುವ ಅನ್ನಕ್ಕೂ ಜಾತಿ ಭೇದ ಮಾಡುತ್ತಿರುವರು.ಎಂತಹ ದುರಂತ.                ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಿದರು. ಭಾರತೀಯ ಪರಂಪರೆಯಲ್ಲಿ ಮದುವೆ,ಮುಂಜಿ,ದೀಕ್ಷಾ ಕಾರ್ಯಕ್ರಮ ಯಾವುದೇ ಇರಲಿ ಊಟ ಹಾಕಿಸುವುದು ಸರ್ವಶ್ರೇಷ್ಠ...

ಎಂದೆಂದಿಗೂ ಅಳಿಯದ ಅಪ್ಪಟ ಕ್ರಾಂತಿಕಾರಿ....

ಜನವರಿ 23 ಭಾರತೀಯರು ಪಾಲಿಗೆ ಯಾವತ್ತೂ ಮರೆಯಲಾಗದ ದಿನವಾಗಿದೆ. ಒಂದು ಸ್ವತಂತ್ರ ಸೇನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತು ಭಾರತದ ಭೂಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ಸ್ವತಂತ್ರ ಭಾರತದ ಧ್ವಜ ಹಾರಿಸಿ ಭಾರತೀಯರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ನಾಯಕರಾದ ಸುಭಾಷ್  ಚಂದ್ರಬೋಸರ ಹುಟ್ಟಿದ ದಿನವಾಗಿದೆ. ಜಡಗಟ್ಟಿದ  ಭಾರತೀಯರ ಮನಸ್ಸುಗಳಿಗೆ ಹೊಸ ಉತ್ಸಾಹವನ್ನು ತುಂಬಿ ಭಾರತಕ್ಕಾಗಿ ಹೊರದೇಶಗಳಲ್ಲಿ ಮಿಡಿಯುವ ಹೃದಯಗಳನ್ನು ಸಂಪಾದಿಸಿದ ಮಹಾನ್ ನಾಯಕರು ಇವರು.. ಜೈ ಹಿಂದ್.. ಎನ್ನುವ ವಿರಘೋಷದ ಮೂಲಕ ಬ್ರಿಟಿಷರ ಎದೆನಡುಗಿಸಿದವರು ಇವರು. ಈ ಘೋಷ ವಾಕ್ಯವು ಹುಟ್ಟಿದ್ದು 1907 ರಲ್ಲಿ. ಇದರ ಕರ್ತೃ ನಮ್ಮ ದಕ್ಷಿಣದ "ಶಣ್ಬಾಗ್ ರಾಮನ್ ಪಿಳ್ಳೆ". ಅವತ್ತು ಜೈ ಹಿಂದ್ ಘೋಷವನ್ನು ಸುಭಾಷರಿಗೆ ಪರಿಚಯಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಾದ 'ಜೈನಲುದ್ದೀನ್'. ಜನವರಿ 23 1897 ರಲ್ಲಿ ಇವತ್ತಿನ ಒರಿಸ್ಸಾದ ಕಟಕ್ನಲ್ಲಿದ್ದ ಬಂಗಾಳಿ ಕುಟುಂಬದ ಪ್ರಭಾವತಿ ದತ್ತ ಬೋಸ್ ಹಾಗೂ ಜಾನಕಿ ನಾಥ್ ಬೋಸರ ಹದಿನಾಲ್ಕು ಮಕ್ಕಳ ಪೈಕಿಯಲ್ಲಿ ಒಂಬತ್ತನೇಯವರಾದ ಸುಭಾಷ್ ಚಂದ್ರ ಬೋಸ್. ಇವರ ತಂದೆ ಬಂಗಾಳ ಪ್ರಾಂತ್ಯದ ಪ್ರಸಿದ್ಧ ವಕೀಲರಾಗಿದ್ದರಿಂದ  ಇವರಿಗೆ ಶಿಕ್ಷಣವನ್ನು ಪಡೆಯುವಲ್ಲಿ ಯಾವುದೇ ರೀತಿಯ ತೊಂದರೆಯು ಉಂಟಾಗಲಿಲ್ಲ.. 1918 ರ ವೇಳೆಗೆ ಇವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಸ್ಟ್ ಚರ್ಚ್ ಕಾಲೇಜಿನಿಂದ ಬಿ...

ಪರಿಸರದ ಮೇಲೆ ಮಾನವನ ದೌರ್ಜನ್ಯ

ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ಬೆಲೆಯಿಲ್ಲ. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯುವ ಅಗತ್ಯವಿದೆ.              ಸುತ್ತಮುತ್ತಲೂ ವೈವಿಧ್ಯಮಯವಾದ ನಿಸರ್ಗದ ಸೊಬಗಿದೆ. ಹಲವಾರು ಗಿಡ ಮರಗಳಿವೆ. ವಿವಿಧ ಪ್ರಕಾರದ ಪ್ರಾಣಿ ಪಕ್ಷಿಗಳಿಗೆ. ಅನೇಕ ಸೂಕ್ಷ್ಮಜೀವಿಗಳಿವೆ. ಗುಡ್ಡ,ಬೆಟ್ಟ, ದೊಡ್ಡ ದೊಡ್ಡ ಪರ್ವತ ಶಿಖರಗಳು ಇದೆ. ಆದರೆ ವಿಜ್ಞಾನ,ತಂತ್ರಜ್ಞಾನ, ಅಭಿವೃದ್ಧಿ, ಆಧುನಿಕತೆ, ನಗರೀಕರಣ, ಕೈಗಾರೀಕರಣ ಎಂಬ ಹಲವು ಕಾರಣಗಳಿಗಾಗಿ ಅನೇಕ ರೀತಿಯಲ್ಲಿ ಅರಿತೋ ಅರಿಯದೆಯೋ ಪರಿಸರಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದೇವೆ.                  ಇತ್ತೀಚೆಗಂತೂ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ವಾಹನಗಳಿಗಾಗಿ ರಚನೆಯಾಗುತ್ತಿರುವ ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ನಿರಂತರವಾಗಿ ಕಡಿಯುತ್ತಿರುವ ಮರಗಳು,ಇತ್ಯಾದಿಗಳಿಂದ ಮಾಲಿನ್ಯಗಳು ಹೆಚ್ಚಾಗುತ್ತಿದ್ದು ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆ, ಹೊಗೆ ಬರುವ ವಾಹನ, ವಾಹನಗಳ ಸಂದಣಿ, ಪ್ಲಾಸ್ಟಿಕ್ ಇತ್ಯಾದಿಗಳಿಂದ ನಮ್ಮ ಪರಿಸರ ಹಾಳಾಗುತ್ತಿದೆ.       ...

ನನ್ನ ಕನಸಿನ ಭಾರತದ ಹಳ್ಳಿಗಳು

"ಹಳ್ಳಿಗಳು ಪಟ್ಟಣಿಗರ ಅನ್ನ ನೀಡುವ ಬಟ್ಟಲು "ಎಂಬ ಮಾತಿದೆ. ಭಾರತದ ಅಭಿವೃದ್ಧಿಯ ತಳಪಾಯವೇ ಹಳ್ಳಿಗಳು. ಪ್ರಾಚೀನ ಕಾಲದಿಂದ ತನ್ನ ಸಂಸ್ಕೃತಿ,  ಸಂಪ್ರದಾಯ, ಆಚಾರ ವಿಚಾರ ಪಾರಂಪರಿಕ ವೈದ್ಯ ಪದ್ಧತಿ ಹಾಗೂ ವಿಶಿಷ್ಟ ಜೀವನಶೈಲಿಯಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡು ಬಂದಂತಹ ಅಪಾರ ವಿಶೇಷತೆ ನಮ್ಮ ಹಳ್ಳಿಗಳದ್ದು.ಹಳ್ಳಿಗಳಲ್ಲಿ ಕಾಣುವ ಸಂಸ್ಕಾರ, ನೈತಿಕತೆಯ ಮೌಲ್ಯಗಳು, ಆಚರಣೆಗಳು,ಹಳ್ಳಿ ಮಣ್ಣಿನ ಮೇಲೆ ಅಲ್ಲಿನ ಜನರಿಗಿರುವ  ಅಕ್ಕರೆ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಅನ್ನ ನೀಡುವ ಭೂಮಿಯನ್ನು ಸಾಕ್ಷಾತ್ ದೈವವೆಂದು ಪೂಜಿಸುವ ಮನಸು ನಮ್ಮ ಹಳ್ಳಿಗರದ್ದು. ಇಲ್ಲಿನ ಅನೇಕ ಜಾನಪದ ಸಾಂಪ್ರದಾಯಿಕ ಶೈಲಿಗಳು ವಿದೇಶದಲ್ಲಿಯು ಮನ್ನಣೆ ಪಡೆದಿದೆ.               ಭಾರತದ ಹಳ್ಳಿಗಳಲ್ಲಿರುವ ಅತ್ಯದ್ಭುತ ವಿಶೇಷತೆಗಳು ಇರಲು ಸಾಧ್ಯವಿಲ್ಲ. ಆಧುನಿಕರಣದತ್ತ ಮುಖ ಮಾಡುತ್ತಿರುವ ನಮ್ಮ ಸಮಾಜದ ಮನಸ್ಸಿನಲ್ಲಿ ಹಳ್ಳಿಗಳೆಂದರೆ ವಿಚಿತ್ರ ತಾತ್ಸಾರ ಮನೋಭಾವ ಎದ್ದು ಕಾಣುತ್ತಿದೆ. ಹಳ್ಳಿಗಳೆಂದರೆ ಕೇವಲ ಅನಾಗರಿಕರ ತಾಣವೆಂದು ಮೂಗು ಮುರಿಯುವರು ಸಹ ಇದ್ದಾರೆ. ಹಳ್ಳಿಗಳಲ್ಲಿನ ಭೂಮಿಗಳನ್ನು ಕೈಗಾರಿಕೆಗೆ ಬಳಸಿಕೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ನಿಲುವನ್ನು ವಾದಿಸುವವರು ಸಹ ಇದ್ದಾರೆ. ಆದರೆ ದೇಶ ಅಭಿವೃದ್ಧಿ ಹೊಂದಬೇಕೆಂದರೆ ಹಳ್ಳಿಗಳ ಅಭಿವೃದ್ಧಿಯಿಂದ ಸಾಧ್ಯವೇ ಹೊರತು ಕೈಗಾರಿಕೆಗಳಿಂದ ಪರಿವರ್ತನೆ ಹ...

ಬೆಳಕು

ಬೆಳಕು ಏನಿದು ಬೆಳಕು? ಎಲ್ಲಿದೆ ಬೆಳಕು? ಹೇಗಿರುತ್ತದೆ ಬೆಳಕು? ಈ ಬೆಳಕಿನ ಬಗ್ಗೆ ಪ್ರಶ್ನೆಗಳು ನನಗೆ ಆಗಾಗ ಹುಟ್ಟುತ್ತಿರುತ್ತವೆ.   ಬೆಳಕಿನ ಬಗೆಗೆ ನನ್ನ ಮನದಲ್ಲಿ ಪ್ರಶ್ನೆಗಳುಮೂಡಿದಾಗಲೆಲ್ಲ ನನ್ನಲ್ಲಿಯೇ ನಾನು ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.  ನನ್ನ ಪ್ರಕಾರ ಬೆಳಕು ಎಂಬುವುದು ಪ್ರತಿಯೊಬ್ಬರಿಗೂ ಬೇರೆ ಬೇರೆ ರೂಪದಲ್ಲಿ ತೋರುತ್ತದೆ.  ಬೆಳಕು ಒಂದು ಶಾಂತಿಯ ಸಂಕೇತ,  ಬೆಳಕು ಒಂದು ಕ್ರಾಂತಿಯ ಸಂಕೇತ, ಅಭಿವೃದ್ಧಿ, ಯಶಸ್ಸು , ಹೊಸ ಹುಮ್ಮಸ್ಸುಗಳ ಸಮ್ಮಿಲನ.    ನಾವುಗಳು  ಜಗತ್ತಿನ ಪ್ರತಿಯೊಂದು ವಸ್ತು ವಿಷಯಗಳನ್ನು ನಮ್ಮ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಹೊಲಿಸುತ್ತೇವೆ , ಹಾಗೆಯೇ ಬೆಳಕು ಕೂಡ..!    ಈಗ ಬೆಳಕು , ಇದನ್ನೇ ತೆಗೆದುಕೊಂಡರೆ ಇದನ್ನು ಹಲವಾರು ಜನರು ಹಲವು ದೃಷ್ಟಿಕೋನಗಳಿಂದ ನೋಡುವರು .  ಬಡವರಿಗೆ ಕಷ್ಟ ಕಾಲದಲ್ಲಿ ನಿಧಿ ಸಿಕ್ಕಾಗ ಆಗುವ ಆನಂದದಲ್ಲಿ , ರೈತನಿಗೆ ಬರಗಾಲದಲ್ಲಿ  ಮಳೆ ಬಂದಾಗ ವ್ಯಕ್ತ ಪಡಿಸುವ ಸಂತೋಷದಲ್ಲಿ , ಒಬ್ಬ ಅಂದನಿಗೆ ದೃಷ್ಟಿ ಬಂದು , ಅವನು ತನ್ನ ತಂದೆ ತಾಯಿಯರನ್ನು ನೋಡಿದ ಮೊದಲ ನೋಟದಲ್ಲಿ, ನಿರಂತರ ಪರಿಶ್ರಮದ ಫಲದಲ್ಲಿ ನಾವು ಬೆಳಕಿನ ಅನುಭವ ಕಾಣಬಹುದು. ಇದನ್ನು  ಕೆಲವರು ಬಹಿರಂಗದಲ್ಲಿಅನಭವಿಸಿದರೆ ,ಕೆಲವರು ಅಂತರಂಗಗಳಲ್ಲಿ ಅನುಭವಿಸುವರು.  ಕನ್ನಡದ ಷೇಕ್ಸ್ ಪಿಯರ್ ಕುವೆಂಪುರವರ ಗದ...
 "ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂಬ ಪುರಂದರದಾಸರ ಮಾತು ಸತ್ಯವಾಗಿಯೂ ಪ್ರಸ್ತುತವಾದದ್ದು. ಅದೆಷ್ಟೊ  ಸಾವಿರ ವರ್ಷಗಳಿಂದ ಮನುಷ್ಯತ್ವಕ್ಕೆ ಒಂದು ವಿಶೇಷ ಪ್ರಾಮುಖ್ಯತೆಯನ್ನು ಕೊಡುತ್ತಾ ಬಂದಿರುವ ಸಂಸ್ಕೃತಿ ನಮ್ಮದು. ಮನುಷ್ಯತ್ವ ಕೇವಲ ಕರುಣೆಯೋ ಕಾಳಜಿಯೋ ಖಂಡಿತವಾಗಿ ಅಲ್ಲ ಬಹುಶಃ  ಮನುಷ್ಯತ್ವ ಎಂಬ ಪದಕ್ಕೆ ನಿರ್ದಿಷ್ಟ ಅರ್ಥ  ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯತ್ವ ನಮ್ಮ ಒಳಮನಸ್ಸಿನ ಸದ್ಭಾವನೆ.                  ಮನುಷ್ಯತ್ವದಿಂದ ಒಬ್ಬ ಮನುಷ್ಯನ ಬದುಕಿಗೆ ಬೆಲೆ ನಾವು ತಿಳಿಯಬಹುದೇ ಹೊರತು ಮನುಷ್ಯತ್ವಕ್ಕೆ ಬೆಲೆ ಕಟ್ಟಲು ಎಂದಿಗೂ ಆಗದು. ಇನ್ನೊಬ್ಬರ ಭಾವನೆಗಳಿಗೆ,  ಕಷ್ಟಗಳಿಗೆ, ಸ್ಪಂದಿಸುವ ಮನಸ್ಸು ನಮ್ಮದಾಗಿದ್ದರೆ ಖಂಡಿತವಾಗಿಯೂ ನಮ್ಮಲ್ಲಿನ 'ಮನುಷ್ಯತ್ವ' ಜೀವನದ ಪ್ರತಿ ಸಂದರ್ಭದಲ್ಲೂ ನಮ್ಮನ್ನು ಎಚ್ಚರಿಸುತ್ತ ಬರುತ್ತದೆ.  ಬದಲಾಗುತ್ತಿರುವ ಕಾಲಮಾನದಲ್ಲಿ ಮನುಷ್ಯತ್ವ  ಎಂಬುದು ಗಾಳಿಗೆ ತೂರಿರುವ ತರಗೆಲೆಯಾಗಿರುವುದು  ಖಂಡಿತವಾಗಿ ವಿಷಾದನೀಯ. ಎಲ್ಲೋ  ರಸ್ತೆಯಲ್ಲಿ ಅಪಘಾತ ವಾದದ್ದು ಕಂಡರೆ ನಮಗೇತಕೆ  ಉಸಾಬರಿ? ಎಂದು ಅಲ್ಲಿಂದ ಜಾಗ ಖಾಲಿ ಮಾಡಲು ನೋಡುವ ಮಂದಿ ಒಂದುಕಡೆಯಾದರೆ ಇಂತಹ ಸನ್ನಿವೇಶ ಕಂಡರೆ ಸಾಕು ತಮ್ಮ ಕಿಸೆಯೊಳಗೆ ಕೈ ತುರುಕಿ  ಮೊಬೈಲಿನಲ್ಲಿ ಆ ದೃಶ್ಯವನ್ನು ಸೆ...
 ಮಳೆನಾಡು ನಮ್ಮೂರು ಪರವೂರಿನಲ್ಲಿ ನಮ್ಮೂರಿನ ಹೆಸರು.ಭಾಷೆ ಕೇಳಿದ ಕೂಡಲೇ ಕಿವಿ ಒಮ್ಮೆ ನೆಟ್ಟಗೆ ಆಗುವುದು. ಎಲ್ಲರಿಗೂ ಅವರ ಊರು , ಭಾಷೆ ಮೇಲೆ ಅಷ್ಟೊಂದು ಅಭಿಮಾನ ಇರುತ್ತದೆ. ಮಲೆನಾಡು ಅಂತ ಗುರುತಿಸಲ್ಪಡುವ ನಮ್ಮೂರು ಶಿವಮೊಗ್ಗ. ಮಲೆನಾಡಿನ ಸೊಬಗು ಆ  ಪ್ರಕೃತಿ ಸೌಂದರ್ಯ ಹಚ್ಚ ಹಸಿರಾದ ಕಾಡು, ಸುತ್ತಲೂ ಅಡಿಕೆ ತೋಟಗಳು,  ಭತ್ತದ ಗದ್ದೆಗಳು. ತಂಪಾದ ವಾತಾವರಣ, ಹೆಚ್ಚಿನ ಕಾಡು ಇವು ಇಲ್ಲಿನ ವಿಶೇಷತೆಗಳು. ಕಾಡು ಹೆಚ್ಚು ಇರುವುದರಿಂದ ಮಳೆಯು ಪ್ರಮಾಣ ಹೆಚ್ಚಾಗಿರುತ್ತದೆ . ಮಲೆನಾಡನ್ನು ಮಳೆ ನಾಡು ಅಂತ ಕರೆದವರೂ ಇದ್ದಾರೆ.  ನಮ್ಮೂರಿನಲ್ಲಿ ಮಳೆ ಹೆಚ್ಚು ಬೇಸಿಗೆಯಲ್ಲೂ ಹಿತಕರ ಎನ್ನಿಸುವ ವಾತಾವರಣವೇ ಇರುತ್ತದೆ. ಇನ್ನು ಚಳಿಗಾಲದಲ್ಲಿ  ನಡುಗುವಂತೆ ಅಧಿಕವಾದ ಚಳಿ ಇರುತ್ತದೆ.ಹಾಗೆಯೇ ಇಬ್ಬನಿಯೂ ಹೆಚ್ಚಿರುತ್ತದೆ. ಬೆಳ್ಳಿಗೆ ಹತ್ತು ಗಂಟೆಯವರೆಗೂ ವಾತಾವರಣ ಇಬ್ಬನಿ ಮುತ್ತು  ಪೋಣಿಸಿದಂತೆ ಇರುವುದನ್ನು ನೋಡುವುದೇ ಒಂದು ಹಬ್ಬ. ಹಕ್ಕಿಗಳ ಚಿಲಿಪಿಲಿ, ನಲಿವಿನ  ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಮಾತೇ ಹಸಿರನ್ನುಟು ಕಂಗೊಳಿಸುತ್ತಿದ್ದಾಳೆ ಇಲ್ಲಿ.  ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ.  ಸಾಯೋ ತನಕ ಸಂಸಾರದಲ್ಲಿ  ಗಂಡಾಗುಂಡಿ. ಹೇರಿಕೊಂಡು ಹೋಗೋದಿಲ್ಲ ಸುತ್ತಾಗ ಬಂಡಿ. ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ.  ಎಂಬ ಸುಂದರವಾದ ಸಾಲುಗಳನ್ನು ಹೊಂದಿದ್ದು ...